ಸುಕನ್ಯಾ ಸಮೃದ್ಧಿ ಕನಿಷ್ಠ ಠೇವಣಿ ಮಿತಿ 250 ರೂ.ಗೆ ಇಳಿಕೆ
Team Udayavani, Jul 23, 2018, 6:00 AM IST
ನವದೆಹಲಿ: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ವಾರ್ಷಿಕ ಕನಿಷ್ಠ ಮಿತಿಯನ್ನು ಈಗಿನ 1000 ರೂ. ಇಂದ 250 ರೂ.ಗೆ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಹೆಣ್ಣುಮಕ್ಕಳಿಗಾಗಿ ಉಳಿತಾಯ ಯೋಜನೆಯ ಲಾಭವನ್ನು ಬಡವರ್ಗದ ಜನರೂ ತೆಗೆದುಕೊಳ್ಳಲು ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳು 2016ಕ್ಕೆ ಬದಲಾವಣೆ ತರಲಾಗಿದ್ದು, ಎರಡನೇ ವರ್ಷ ಖಾತೆಯಲ್ಲಿ ಹೂಡಿಕೆ ಮಾಡುವ ಮೊತ್ತವನ್ನೂ 250 ರೂ.ಗೆ ಇಳಿಕೆ ಮಾಡಲಾಗಿದೆ. ಗರಿಷ್ಠ ವಾರ್ಷಿಕ 1.50 ಲಕ್ಷ ರೂ. ಹೂಡಿಕೆ ಮಾಡಬಹುದಾಗಿದೆ. ಸದ್ಯ ಈ ಯೋಜನೆ ಅಡಿಯಲ್ಲಿ ಠೇವಣಿ ಇಟ್ಟ ಮೊತ್ತಕ್ಕೆ ಶೇ.8.1ರಷ್ಟು ಬಡ್ಡಿ ಲಭ್ಯವಾಗುತ್ತಿದ್ದು, ಪ್ರತಿ ತ್ತೈಮಾಸಿಕಕ್ಕೂ ಬದಲಾವಣೆ ಮಾಡಲಾಗುತ್ತಿದೆ. ಒಟ್ಟು 1.26 ಕೋಟಿ ಖಾತೆಗಳನ್ನು 2017 ನವೆಂಬರ್‌ವರೆಗೆ ತೆರೆಯಲಾಗಿದ್ದು, ಒಟ್ಟು 19,183 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.