ಸುಖೋಯ್ಗೆ ಹೊಸ ಕ್ಷಿಪಣಿ?
ಪಾಕ್ಗೆ ಸೆಡ್ಡು ಹೊಡೆಯಲು ಈ ಚಿಂತನೆ
Team Udayavani, May 29, 2019, 6:10 AM IST
ಹೊಸದಿಲ್ಲಿ: ಭಾರತೀಯ ವಾಯು ಪಡೆಯ (ಐಎಎಫ್) ಯುದ್ಧ ವಿಮಾನಗಳಲ್ಲಿ ಪ್ರಮುಖವಾಗಿರುವ “ಸುಖೋಯ್-30′ ಮಾದರಿಯ ವಿಮಾನಗಳಿಗೆ ಮುಂದಿನ ಎರಡು ವರ್ಷಗಳಲ್ಲಿ ಇಸ್ರೇಲ್ ನಿರ್ಮಿತ ಐ-ಡೆರ್ಬಿ ಏರ್-ಟು-ಏರ್ ಕ್ಷಿಪಣಿ ಉಡಾವಣಾ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ ಎಂದು ಐಎಎಫ್ ತಿಳಿಸಿದೆ. ಸದ್ಯಕ್ಕೆ “ಸುಖೋಯ್-30′ ವಿಮಾನಗಳಲ್ಲಿ ರಷ್ಯಾ ನಿರ್ಮಿತ “ಆರ್-77′ ಮಾದರಿಯ ಕ್ಷಿಪಣಿಗಳನ್ನು ಬಳಸಲಾಗುತ್ತಿದ್ದು, ಇವು ಅತ್ಯಾಧುನಿಕ ವಾಯು ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿಯಾಗಿಲ್ಲ ಹಾಗೂ ಅವುಗಳ ಕ್ಷಮತೆ ತೀರಾ ಸೀಮಿತವಾಗಿರುವುದರಿಂದ ಅವುಗಳನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ ಎಂದು ಐಎಎಫ್ ಹೇಳಿದೆ.
ಬಾಲಾಕೋಟ್ ದಾಳಿಯ ಅನಂತರ ಫೆ. 27ರಂದು ಭಾರತದ ಮೇಲೆ ದಾಳಿ ನಡೆಸಲು ಆಗಮಿಸಿದ್ದ ಪಾಕಿಸ್ಥಾನ ವಾಯುಪಡೆಯ ಯುದ್ಧ ವಿಮಾನಗಳು, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದು ಭಾರತೀಯ ಸೇನಾ ನೆಲೆಯಿರುವ ರಜೌರಿ ಸೆಕ್ಟರ್ನಲ್ಲಿ ಕೆಲವು ಕ್ಷಿಪಣಿಗಳನ್ನು ಪ್ರಯೋಗಿಸಿದ್ದವು. ಅವುಗಳನ್ನು ಹಿಮ್ಮೆಟ್ಟಿಸಲು ಐಎಎಫ್, “ಸುಖೋಯ್-30′ ಎಂಕೆಐ ಜೆಟ್ಗಳೂ ಸೇರಿದಂತೆ 8 ಯುದ್ಧ ವಿಮಾನಗಳನ್ನು ಆಗಸಕ್ಕೆ ಹಾರಿಸಿತ್ತು. ಆದರೆ, ಪಾಕಿಸ್ಥಾನ ಪ್ರಯೋಗಿಸಿದ, ಅಮೆರಿಕ ನಿರ್ಮಿತ “ಅಡ್ವಾನ್ಸ್$x ಮೀಡಿಯಂ ರೇಂಜ್ ಏರ್-ಟು-ಏರ್’ ಕ್ಷಿಪಣಿ (ಎಎಂಆರ್ಎಎಎಂ) ಗಳ ಮುಂದೆ ರಷ್ಯಾ ನಿರ್ಮಿತ ಆರ್-77 ಮಾದರಿಯ ಕ್ಷಿಪಣಿಗಳು, ತಾಂತ್ರಿಕವಾಗಿ ತೀರಾ ದುರ್ಬಲ ಎನಿಸಿದವು. ಹಾಗಾಗಿ, ಇಸ್ರೇಲ್ ನಿರ್ಮಿತ ಐ-ಡೆರ್ಬಿ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ ಎಂದು ಐಎಎಫ್ನ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.