ಕಾವೇರಿ ಗದ್ದಲ: ಡಿಎಂಕೆಗೆ ಬಿಸಿ ಮುಟ್ಟಿಸಿದ ಸಂಸದೆ ಸುಮಲತಾ
Team Udayavani, Aug 2, 2019, 5:53 AM IST
ನವದೆಹಲಿ: ಸಂಸತ್ತಿನಲ್ಲಿ ಗುರುವಾರ ಕಾವೇರಿ ವಿವಾದ ಪ್ರತಿಧ್ವನಿಸಿತು. ಡಿಎಂಕೆಯ ಸಂಸದ ದಯಾನಿಧಿ ಮಾರನ್ ಅವರು, ಕರ್ನಾಟಕವು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನು ಪದೇಪದೆ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದಾಗ, ಮಂಡ್ಯ ಸಂಸದೆ ಸುಮಲತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ನ್ಯಾಯಾಧಿಕರಣದ ತೀರ್ಪನ್ನು ಕರ್ನಾಟಕ ಎಂದಿಗೂ ಉಲ್ಲಂಘಿಸಿಲ್ಲ. ನಮ್ಮ ರಾಜ್ಯವು ನ್ಯಾಯಾಲಯದ ಆದೇಶವನ್ನು ಯಾವತ್ತೂ ಪಾಲಿಸುತ್ತಲೇ ಬಂದಿದೆ. ನಾವು ಶಾಂತಿಯನ್ನು ಬಯಸುವ ಜನ. ಹಾಗಾಗಿ, ನೆರೆ ರಾಜ್ಯದವರಿಗೆ ಕಷ್ಟ ಕೊಡಲು ಒಪ್ಪುವುದಿಲ್ಲ ಎಂದರು. ಕಾವೇರಿ ಕಣಿವೆಯಲ್ಲಿನ ಸದ್ಯದ ಪರಿಸ್ಥಿತಿ ವಿವರಿಸಿದ ಅವರು, ಕೃಷ್ಣರಾಜ ಸಾಗರದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 124 ಟಿಎಂಸಿ ನೀರು ಇತ್ತು. ಈ ವರ್ಷ, 85ರಿಂದ 86 ಟಿಎಂಸಿ ನೀರು ಇದೆ. ಕರ್ನಾಟಕದ 150 ತಾಲೂಕುಗಳಲ್ಲಿ ಕುಡಿಯಲೂ ನೀರಿಲ್ಲ. ಇಡೀ ರಾಜ್ಯವೇ ಬರಪೀಡಿತವಾಗಿದೆ. ಹೀಗಿರುವಾಗ ನಿಮ್ಮ ರಾಜ್ಯಕ್ಕೆ (ತಮಿಳುನಾಡಿಗೆ) ನೀರು ಬಡಲು ಹೇಗೆ ಸಾಧ್ಯ ಎಂದರು.
ವಿಪರ್ಯಾಸವೆಂದರೆ, ಸದನದಲ್ಲಿ ಹೀಗೆ ಬಿಸಿ ಬಿಸಿ ಚರ್ಚೆಯಾಗುತ್ತಿದ್ದಾಗ ಕರ್ನಾಟಕದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಆಗ, ಸುಮಲತಾ ಅವರ ಬೆಂಬಲಕ್ಕೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಬಂದರು. ಕರ್ನಾಟಕ ನೀರು ಬಿಡದಿದ್ದರೆ ನಿಮಗೆ ಹೇಗೆ ನೀರು ಸಿಗುತ್ತಿತ್ತು ಎಂದು ಮರುಪ್ರಶ್ನೆ ಎಸೆಯುವ ಮೂಲಕ ಮಾರನ್ ಅವರನ್ನು ತಕ್ಕಮಟ್ಟಿಗೆ ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.