ರಿಷಿ ಸುನಕ್ ಬ್ರಿಟನ್ ಪ್ರಧಾನಿ: ಬಿಜೆಪಿ ಮತ್ತು ಪ್ರತಿಪಕ್ಷಗಳ ಟ್ವೀಟ್ ಸಮರ ತೀವ್ರ
ಬಹುಸಂಖ್ಯಾತವಾದ...... ಸೋನಿಯಾ ಗಾಂಧಿಗೆ ನಾಯಕತ್ವ ನೀಡುವಲ್ಲಿ ಆಕ್ಷೇಪ ವಿಚಾರ ಪ್ರಸ್ತಾಪ....
Team Udayavani, Oct 25, 2022, 3:56 PM IST
ನವದೆಹಲಿ: ಬ್ರಿಟನ್‌ನ ಮುಂದಿನ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾಗುತ್ತಿದ್ದಂತೆ ಭಾರತದಲ್ಲಿ ಬಿಜೆಪಿ ಮತ್ತು ವಿಪಕ್ಷಗಳ ವಾಕ್ಸಮರ ತೀವ್ರವಾಗಿದೆ. ವಿರೋಧ ಪಕ್ಷದ ನಾಯಕರು ಬಹುಸಂಖ್ಯಾತತೆ ಮತ್ತು ಭಾರತದಲ್ಲಿನ ವಿಭಜನೆಯ ಬಗ್ಗೆ ವಿಷಾದಿಸುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ಮಂಗಳವಾರ ಎಪಿಜೆ ಅಬ್ದುಲ್ ಕಲಾಂ ಮತ್ತು ಮನಮೋಹನ್ ಸಿಂಗ್ ಅವರು ದೇಶದ ರಾಷ್ಟ್ರಪತಿ ಮತ್ತು ಪ್ರಧಾನಿಯಾಗಿರುವ ಬೆಳವಣಿಗೆಯನ್ನು ಉಲ್ಲೇಖಿಸಿದೆ.
2004 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಇಟಲಿ ಮೂಲದ ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಹುದ್ದೆ ನೀಡಲು ಬಿಜೆಪಿ ನಾಯಕರ ವಿರೋಧದ ವಿಚಾರ ಮುನ್ನೆಲೆಗೆ ಬಂದಿದೆ. “ಇಟಲಿ ಮೂಲದ ಸೋನಿಯಾ ಗಾಂಧಿ ರಾಜೀವ್ ಅವರೊಂದಿಗೆ ಮದುವೆಯಾದ ನಂತರ ಹಲವಾರು ದಶಕಗಳವರೆಗೆ ಭಾರತೀಯ ಪೌರತ್ವವನ್ನು ಪಡೆಯಲು ನಿರಾಕರಿಸಿದವರು” ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ವಿಜಯ್ ಚೌತೈವಾಲೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮೊದಲು ಕಮಲಾ ಹ್ಯಾರಿಸ್, ಈಗ ರಿಷಿ ಸುನಕ್. ಯು.ಎಸ್ ಮತ್ತು ಯು.ಕೆ ಯ ಜನರು ತಮ್ಮ ದೇಶಗಳ ಬಹುಸಂಖ್ಯಾತರಲ್ಲದ ನಾಗರಿಕರನ್ನು ಅಪ್ಪಿಕೊಂಡಿದ್ದಾರೆ ಮತ್ತು ಅವರನ್ನು ಸರ್ಕಾರದ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಭಾರತ ಮತ್ತು ಬಹುಸಂಖ್ಯಾತವಾದವನ್ನು ಅನುಸರಿಸುವ ಪಕ್ಷಗಳು ಕಲಿಯಬೇಕಾದ ಪಾಠವಿದೆ ಎಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಬಿಜೆಪಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ”ಸುನಕ್ ಅವರು ಪ್ರಧಾನಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ಬ್ರಿಟನ್ ಜನಾಂಗೀಯ ಅಲ್ಪಸಂಖ್ಯಾತ ಸದಸ್ಯರನ್ನು ತನ್ನ ಪ್ರಧಾನ ಮಂತ್ರಿಯಾಗಿ ಸ್ವೀಕರಿಸಿದೆ ಎಂಬುದನ್ನು ನೆನಪಿಸುತ್ತದೆ, ಆದರೆ ಎನ್ ಆರ್ ಸಿ ಮತ್ತು ಸಿಎಎನಂತಹ ವಿಭಜಕ ಮತ್ತು ತಾರತಮ್ಯದ ಕಾನೂನುಗಳಿಂದ ನಾವು ಇನ್ನೂ ಸಂಕೋಲೆಯಲ್ಲಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಕಾನೂನು ಸಚಿವ ಹಾಗೂ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದು, ಅಲ್ಪಸಂಖ್ಯಾತರನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಸ್ವೀಕರಿಸುವರೇ ಎಂದು ಉತ್ತರಿಸುವಂತೆ ಅವರು ಕೇಳಿದರು. “ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾದ ನಂತರ ಕೆಲವು ನಾಯಕರು ಬಹುಮತದ ವಿರುದ್ಧ ಹೈಪರ್ ಆಕ್ಟಿವ್ ಆಗಿದ್ದಾರೆ. ಎಪಿಜೆ ಅಬ್ದುಲ್ ಕಲಾಂ, ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದ ಅಸಾಧಾರಣ ರಾಷ್ಟ್ರಪತಿಗಳ ಬಗ್ಗೆ ಅವರಿಗೆ ನಿಧಾನವಾಗಿ ನೆನಪಿಸುತ್ತಿದ್ದೇನೆ. ಪ್ರತಿಷ್ಠಿತ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಈಗ ನಮ್ಮ ಅಧ್ಯಕ್ಷರಾಗಿದ್ದಾರೆ, ”ಎಂದು ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ”ಭಾರತವು 10 ವರ್ಷಗಳ ಕಾಲ ಸಿಖ್ ಸಮುದಾಯದ ಪ್ರಧಾನಿಯಲ್ಲದೆ ಮೂವರು ಮುಸ್ಲಿಂ ಮತ್ತು ಒಬ್ಬ ಸಿಖ್ ಅಧ್ಯಕ್ಷರನ್ನು ಹೊಂದಿತ್ತು. ಉನ್ನತ ನ್ಯಾಯಾಂಗ ಮತ್ತು ಸಶಸ್ತ್ರ ಪಡೆಗಳಲ್ಲಿ ಅಲ್ಪಸಂಖ್ಯಾತರನ್ನು ಹೊಂದಿದೆ. ಇದು ಬೇರೆ ಯಾವುದೇ ದೇಶದಿಂದ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ಕಲಿಯಬೇಕಾಗಿಲ್ಲ. ಆದರೆ ಮೆಹಬೂಬಾ ಅವರು ಜಮ್ಮು ಮತ್ತು ಕಾಶ್ಮೀರದ ಸಿಎಂ ಹುದ್ದೆಗೆ ಹಿಂದೂ ವಯಕ್ತಿಯನ್ನು ಬೆಂಬಲಿಸಬೇಕು, ಮಾತಿನಂತೆ ನಡೆದುಕೊಳ್ಳಬೇಕು” ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿ, ” ಗೋಚರ ಅಲ್ಪಸಂಖ್ಯಾತರ ಸದಸ್ಯರನ್ನು ಅತ್ಯಂತ ಶಕ್ತಿಶಾಲಿ ಕಚೇರಿಯಲ್ಲಿ ಇರಿಸಲು ಬ್ರಿಟಿಷರು ವಿಶ್ವದಲ್ಲಿ ಬಹಳ ಅಪರೂಪದ ಕೆಲಸವನ್ನು ಮಾಡಿದ್ದಾರೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು, ನಾವು ಭಾರತೀಯರು ಸುನಕ್ ಅವರ ಆರೋಹಣವನ್ನು ಆಚರಿಸುತ್ತಿರುವಾಗ, ನಾವು ಪ್ರಾಮಾಣಿಕವಾಗಿ ಕೇಳೋಣ, ಆ ರೀತಿ ಇಲ್ಲಿ ಸಂಭವಿಸಬಹುದೇ” ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.