ಸುನಂದಾ ಶವ ಪತ್ತೆಯಾಗಿದ್ದ ಹೊಟೇಲ್ ಕೋಣೆ ಬೀಗಮುದ್ರೆ ತೆರವಿಗೆ ಆದೇಶ
Team Udayavani, Jul 21, 2017, 7:21 PM IST
ಹೊಸದಿಲ್ಲಿ : 2014ರ ಜನವರಿ 17ರಂದು ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಶವವಾಗಿ ಪತ್ತೆಯಾಗಿದ್ದ ಹೊಟೇಲ್ ಲೀಲಾ ಪ್ಯಾಲೇಸ್ನ ಕೋಣೆಯ ಬೀಗ ಮುದ್ರೆಯನ್ನು ತೆಗೆಯುವಂತೆ ದಿಲ್ಲಿ ನ್ಯಾಯಾಲಯ ಇಂದು ಶುಕ್ರವಾರ ದಿಲ್ಲಿ ಪೊಲೀಸರಿಗೆ ಆದೇಶಿಸಿದೆ.
ನಂಬರ್ 345ರ ಕೋಣೆಯ ಬೀಗ ಮುದ್ರೆಯನ್ನು ತೆರವುಗೊಳಿಸುವಂತೆ ಹೊಟೇಲ್ ಆಡಳಿತೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ದಿಲ್ಲಿ ಪೊಲೀಸರಿಗೆ ಆ ನಿಟ್ಟಿನಲ್ಲಿ ಆದೇಶ ಹೊರಡಿಸಿದರು.
ದಿಲ್ಲಿ ಪೊಲೀಸರು ಸಲ್ಲಿಸಿರುವ ಸ್ಥಿತಿಗತಿ ವರದಿ ಪ್ರಕಾರ ಸುನಂದಾ ಪುಷ್ಕರ್ ಸಾವಿನ ಕಾರಣವನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಿಲ್ಲ; ಆದುದರಿಂದ ಆ ಕಾರಣಕ್ಕಾಗಿ ಲೀಲಾ ಹೊಟೇಲ್ ನಿರಂತರವಾಗಿ ತೊಂದರೆ ಪಡುವಂತೆ ಮಾಡಲಾಗದು ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.