‘Don’t hate BJP…’; ಜೈಲಿನಿಂದ ಕೇಜ್ರಿವಾಲ್ ನೀಡಿದ ಸಂದೇಶ ಓದಿದ ಪತ್ನಿ
ಆ ವೀಡಿಯೋವನ್ನು ಎಲ್ಲರೂ ನೋಡಿದ್ದಾರೆ... ಬಾನ್ಸುರಿ ಸ್ವರಾಜ್ ತಿರುಗೇಟು
Team Udayavani, Mar 23, 2024, 6:59 PM IST
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಶನಿವಾರ ಆಪ್ ಕಾರ್ಯಕರ್ತರು ಮತ್ತು ದೆಹಲಿಯ ಜನತೆಗೆ ಜೈಲಿನಲ್ಲಿರುವ ತಮ್ಮ ಪತಿ ಬರೆದು ನೀಡಿರುವ ಸಂದೇಶವನ್ನು ವಿಡಿಯೋ ಹೇಳಿಕೆಯಲ್ಲಿ ಓದಿ ಹೇಳಿ ಕೇಜ್ರಿವಾಲ್ ದೇಶ ಸೇವೆಯನ್ನು ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
”ಯಾವುದೇ ಜೈಲು ನನ್ನನ್ನು ಒಳಗೆ ಇಡಲು ಸಾಧ್ಯವಿಲ್ಲ ಮತ್ತು ನಾನು ಹೊರಗೆ ಬಂದು ನನ್ನ ಭರವಸೆಗಳನ್ನು ಪೂರೈಸುತ್ತೇನೆ” ಎಂದು ಕೇಜ್ರಿವಾಲ್ ಅವರು ನೀಡಿದ ಸಂದೇಶವನ್ನು ಓದಿ ಹೇಳಿದರು.
ನಾನು ಜೈಲಿಗೆ ಹೋಗುವುದರೊಂದಿಗೆ ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣ ನಿಲ್ಲಬಾರದು. ಈ ಕಾರಣಕ್ಕಾಗಿ ಬಿಜೆಪಿಯವರನ್ನು ದ್ವೇಷಿಸಬೇಡಿ. ಅವರು ನಮ್ಮ ಸಹೋದರ ಸಹೋದರಿಯರು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದಾರೆ.
ಹೈಕೋರ್ಟ್‌ಗೆ ಅರ್ಜಿ
ಜಾರಿ ನಿರ್ದೇಶನಾಲಯದ ವಶದಲ್ಲಿರುವ ಕೇಜ್ರಿವಾಲ್ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ 24 ರ ಭಾನುವಾರದ ಮೊದಲು ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿದ್ದಾರೆ.
ಆ ವೀಡಿಯೋವನ್ನು ಎಲ್ಲರೂ ನೋಡಿದ್ದಾರೆ: ಬಾನ್ಸುರಿ ಸ್ವರಾಜ್ ತಿರುಗೇಟು
ಬಿಜೆಪಿ ನಾಯಕಿ ಬಾನ್ಸುರಿ ಸ್ವರಾಜ್ ಪ್ರತಿಕ್ರಿಯಿಸಿ “ಅವರು ಇಂದು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಅರಿತುಕೊಳ್ಳಬಲ್ಲೆ. ಅದಕ್ಕೆ ನಾನು ಹೇಳುವ ಏಕೈಕ ವ್ಯಕ್ತಿ ಅರವಿಂದ್ ಕೇಜ್ರಿವಾಲ್. ಈ ಮದ್ಯದ ನೀತಿ ಕಾರಣಕ್ಕಾಗಿ ಅಳುವ ಎಲ್ಲಾ ಮಹಿಳೆಯರಿಗೆ ಅವರು ಉತ್ತರಿಸಬೇಕು” ಎಂದಿದ್ದಾರೆ.
ಎಎಪಿ-ಕಾಂಗ್ರೆಸ್ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಬಾನ್ಸುರಿ “ಕಾಂಗ್ರೆಸ್ ತನ್ನ ರಾಗವನ್ನು ಬದಲಾಯಿಸುತ್ತಿದೆ. ಅರವಿಂದ್ ಕೇಜ್ರಿವಾಲ್, ಅವರ ಪಕ್ಷ ಮತ್ತು ಕ್ಯಾಬಿನೆಟ್ ಮದ್ಯ ಹಗರಣದಲ್ಲಿ 100 ಕೋಟಿ ಕಿಕ್‌ಬ್ಯಾಕ್ ತೆಗೆದುಕೊಂಡಿದ್ದಾರೆ ಎಂದು ಅಜಯ್ ಮಾಕನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಆ ವೀಡಿಯೋವನ್ನು ಎಲ್ಲರೂ ನೋಡಿದ್ದಾರೆ. ಗೋವಾ ಚುನಾವಣೆಯಲ್ಲಿ ಹಗರಣ ನಡೆದಿದೆ, ಕಾಂಗ್ರೆಸ್ ವಿರುದ್ಧ ಹಣ ಬಳಸಲಾಗಿದೆ ಎಂದು ಅಜಯ್ ಮಾಕನ್ ಆರೋಪಿಸಿದ್ದಾರೆ. ಇಂದು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ತನ್ನ ರಾಗವನ್ನು ಬದಲಾಯಿಸುತ್ತಿದೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.