North India; ಬಿಸಿಲ ಹೊಡೆತ: ಎಸಿ, ಕೂಲರ್ ಮಾರಾಟ ದುಪ್ಪಟ್ಟು
ಕೇರಳದಲ್ಲಿ ಮುಂಗಾರು ಚುರುಕು: 3 ಜಿಲ್ಲೆಗಳಿಗೆ ರೆಡ್ ಅಲರ್ಟ್
Team Udayavani, Jun 2, 2024, 6:37 AM IST
ಹೊಸದಿಲ್ಲಿ: ಉತ್ತರ ಮತ್ತು ಕೇಂದ್ರ ಭಾರತದಲ್ಲಿ ತಾಪಮಾನ ಏರಿರುವುದರಿಂದ ಮಾರ್ಚ್‌ನಿಂದ ಮೇ ನಡುವೆ ಎಸಿ ಮತ್ತು ಕೂಲರ್‌ಗಳ ಮಾರಾಟ ದುಪ್ಟಟ್ಟಾ ಗಿದೆ ಎಂದು ಇ ಕಾಮರ್ಸ್ ಕಂಪೆನಿಗಳು ಮತ್ತು ಉತ್ಪಾದಕ ಕಂಪೆನಿಗಳು ಹೇಳಿವೆ. ಹಲವು ನಗರಗಳಲ್ಲಿ ತಾಪಮಾನ 50 ಡಿ.ಸೆ. ಮುಟ್ಟುವ ನಿರೀಕ್ಷೆಯಿದೆ.
ಬಿಸಿಲಿನ ಹೊಡೆತಕ್ಕೆ ತತ್ತರಿಸಿರುವ ಜನರು ಎಸಿ, ಕೂಲರ್‌ಗಳನ್ನು ಕೊಳ್ಳುತ್ತಿದ್ದಾರೆ. ಬೆಂಗಳೂರು, ಪುಣೆ, ಲಕ್ನೋದಲ್ಲೂ ಮಾರ್ಚ್ ತಿಂಗಳ ಬಳಿಕ ಎಸಿ, ಕೂಲರ್‌ಗಳಿಗೆ ಭಾರೀ ಬೇಡಿಕೆ ಬಂದಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿರುವುದಾಗಿ ವರದಿಯಾಗಿದೆ. ಮೇಯಲ್ಲೇ ಎಸಿ, ಕೂಲರ್‌ಗಳ ದುಪ್ಪಟ್ಟು ಬೇಡಿಕೆ ಬಂದಿದೆ. ದಕ್ಷಿಣ ಮತ್ತು ಪೂರ್ವ ವಲಯಗಳಲ್ಲಿ ಬೇಡಿಕೆ ಏರಿದ್ದರಿಂದ ಎಪ್ರಿಲ್‌ನಲ್ಲಿ ಮಾರಾಟ ಹೆಚ್ಚಾಗಿತ್ತು. ಉತ್ತರ ಮತ್ತು ಪೂರ್ವ ಮೆಟ್ರೋ ನಗರಗಳು, ಟೈಯರ್-1 ನಗರ ಗಳಲ್ಲಿ ಮೇ ತಿಂಗಳಲ್ಲಿ ಮಾರಾಟ ಬಿರುಸಾಗಿತ್ತು.
ಕೇರಳದಲ್ಲಿ ಮುಂಗಾರು ಚುರುಕು: 3 ಜಿಲ್ಲೆಗಳಿಗೆ ರೆಡ್ ಅಲರ್ಟ್
ತಿರುವನಂತಪುರ: ಕೇರಳ ಪ್ರವೇಶದ ಬಳಿಕ 2 ದಿನಗಳ ಕಾಲ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರು ಶನಿವಾರ ಚುರುಕಾಗಿದೆ. ನೈಋತ್ಯ ಮಾರುತದ ಪ್ರಭಾವದಿಂದಾಗಿ ಕೇರಳದಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ದಕ್ಷಿಣ, ಕೇಂದ್ರ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳು ಮುಳುಗಡೆಯಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಟ್ಟಾಯಂ, ಇಡುಕ್ಕಿ ಜಿಲ್ಲೆಗಳಲ್ಲಿ ಭಾರೀ ಮಳೆಗೆ ಮರಗಳು ಬುಡಮೇಲಾಗಿದ್ದು, ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಇಡುಕ್ಕಿಯಲ್ಲಿರುವ ಮಲಂಕರ ಅಣೆಕಟ್ಟಿನ 5 ಗೇಟ್‌ಗಳನ್ನು ತೆರೆಯಲಾಗಿದೆ. ವಡವತ್ತೂರ್‌ನಲ್ಲಿ ಶುಕ್ರವಾರ ರಾತ್ರಿಯವರೆಗೆ 10 ಸೆ.ಮೀ., ಕೊಟ್ಟಾಯಂನಲ್ಲಿ 9 ಸೆ.ಮೀ. ಮಳೆಯಾಗಿದೆ. ತೃಶೂರು, ಮಲಪ್ಪುರಂ, ಕಲ್ಲಿಕೋಟೆ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.