ಹರಡುತ್ತಿದೆ ‘ಸೂಪರ್ ಬಗ್’
Team Udayavani, Sep 5, 2018, 6:55 AM IST
ಮೆಲ್ಬರ್ನ್: ಯಾವುದೇ ಔಷಧಿಗೂ ಬಗ್ಗದ, ಎಂದೆಂದಿಗೂ ವಾಸಿಯಾಗದಂಥ ಸೋಂಕಿಗೆ ಕಾರಣವಾಗುವ ಎಂಆರ್‌ಎ ಸ್‌ಎ ಮಾದರಿಯ ಮಾರಣಾಂತಿಕ ಬ್ಯಾಕ್ಟೀರಿಯಾಗಳು (ಸೂಪರ್ ಬಗ್) ವಿಶ್ವದೆಲ್ಲೆಡೆ ಹರಡಿವೆ ಎಂದು ಮೆಲ್ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.
ಗಾಯಗಳ ಆರೈಕೆ ಮಾಡುವ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳಲ್ಲಿ ಇಂಥ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗುವುದು ಈ ಹಿಂದೆಯೇ ಪತ್ತೆಯಾಗಿದೆ. ಆದರೆ, ಇತ್ತೀಚಿಗೆ ಇವು ಪ್ರಪಂಚದಾದ್ಯಂತ ಹರಡಿದ್ದು, ಮನುಷ್ಯನ ಅಸ್ತಿತ್ವಕ್ಕೇ ಸವಾಲೊಡ್ಡಲಿವೆ ಎಂದು ವಿಶ್ವವಿದ್ಯಾಲಯದ ‘ಮೈಕ್ರೋಬಯಾಲಜಿಕಲ್ ಡಯಾಗ್ನಾಸ್ಟಿಕ್ ಯೂನಿಟ್ ಪಬ್ಲಿಕ್ ಹೆಲ್ತ್ ಲ್ಯಾಬೋರೇಟರಿ’ಯ ಸಂಶೋಧಕರು ಹೇಳಿದ್ದಾರೆ. ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 10 ದೇಶಗಳ ಆಸ್ಪತ್ರೆಗಳಿಂದ ತರಿಸಲಾಗಿದ್ದ ಕೆಲವು ಸ್ಯಾಂಪಲ್‌ಗಳಲ್ಲಿ ಈ ಅಂಶ ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಎಂಆರ್‌ಎಸ್‌ಎ ಎಂದರೇನು?
ಇದೊಂದು ಸೂಕ್ಷ್ಮಾಣುಜೀವಿ. ಇದರ ಪೂರ್ತಿ ಹೆಸರು ‘ಮಿಥಿಸಿಲಿನ್-ರೆಸಿಸ್ಟಂಟ್ ಸ್ಟಾಫಿಲೋಕೋಕಸ್ ಆರಿಯಸ್’. ಇವು ದೇಹದಲ್ಲಿ ಚಿಕಿತ್ಸೆ ನೀಡಲು ಕ್ಲಿಷ್ಟಕರವೆನಿಸುವಂಥ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಸದ್ಯಕ್ಕೆ ಲಭ್ಯವಿರುವ ಯಾವುದೇ ಆ್ಯಂಟಿ ಬಯೋಟಿಕ್ಸ್‌ಗಳಿಂದ ಇವುಗಳ ನಿಯಂತ್ರಣ ಸಾಧ್ಯವಿಲ್ಲ. ಹಾಗಾಗಿ, ಇದನ್ನು ‘ಸೂಪರ್ ಬಗ್’ ಎಂದು ಕರೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.