![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 2, 2021, 6:40 AM IST
ನೋಯ್ಡಾದ “ಸೆಕ್ಟರ್ 93’ಯಲ್ಲಿ ನಿಯಮ ಮೀರಿ ಕಟ್ಟಲಾಗಿದ್ದ ಸೂಪರ್‌ಟೆಕ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯ “ಎಮರಾಲ್ಡ್ ಕೋರ್ಟ್’ ವಸತಿ ಸಮುತ್ಛಯವನ್ನು ಕೆಡವುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿರುವ ಕಟ್ಟಡ ಕೆಡವುವ ತಂತ್ರಗಾರಿಕೆಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ತಂತ್ರಗಾರಿಕೆಗಳ ವ್ಯತ್ಯಾಸ :
ಜನಸಂದಣಿ ಇರುವೆಡೆ ಕಟ್ಟಡಗಳನ್ನು ಕೆಡವಲು ಇಂಪ್ಲೋಷನ್ ಎಂಬ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇದು ಕಟ್ಟಡದ ಕೆಳಭಾಗದಲ್ಲಿ ಸ್ಫೋಟಕಗಳನ್ನು ಒಮ್ಮೆಲೇ ಸ್ಫೋಟಿಸಿ, ಕಟ್ಟಡದ ಅವಶೇಷ ಕಟ್ಟಡದ ಜಾಗದಲ್ಲೇ ಬೀಳುವಂತೆ ಮಾಡುವ ಕ್ರಮ. ಹಾಲಿ ಕಟ್ಟಡಕ್ಕೆ ಇದೇ ಕ್ರಮ ಅಳವಡಿಸಲು ಚಿಂತನೆ ನಡೆಲಾಗಿದೆ. ಇನ್ನು, ಜ್ಯಾಕಿಂಗ್ ಮಾದರಿಯಲ್ಲಿ ಕೂಲಿಯಾಳುಗಳಿಂದ, ಜೆಸಿಬಿ, ಬುಲ್ಡೋಜರ್‌ಗಳಿಂದ ಕಟ್ಟಡವನ್ನು ಮೇಲಿನಿಂದ ಕೆಳಕ್ಕೆ ಕೆಡವುತ್ತಾ ಬರಲಾಗುತ್ತದೆ. ಇದಕ್ಕೆ ಹೆಚ್ಚು ಸಮಯ ಬೇಕು. ಹಾಗಾಗಿ, ಹಾಲಿ ಕಟ್ಟಡಕ್ಕೆ ಇಂಪ್ಲೋಷನ್ ಪದ್ಧತಿ ಅನುಸರಿಸಲು ಸ್ಥಳೀಯಾಡಳಿತ ನಿರ್ಧರಿಸಿದೆ ಎನ್ನಲಾಗಿದೆ.
ಇಂಪ್ಲೋಷನ್ ಅನುಷ್ಠಾನ ಹೇಗೆ? :
ಕೇರಳದಲ್ಲಿ ಹೀಗೇ ಕೆಡವಲಾಗಿತ್ತು! :
ಕಳೆದ ವರ್ಷ, ಕೇರಳದ ಮರಡು ಎಂಬಲ್ಲಿ ನಿಯಮ ಮೀರಿ ನಿರ್ಮಿಸಲಾಗಿದ್ದ ಗೋಲ್ಡನ್ ಕಯಲೋರಂ ಕಟ್ಟಡದಲ್ಲಿ 150 ತೂತುಗಳನ್ನು ಕೊರೆದು, 15 ಕೆಜಿ ಸ್ಫೋಟಕದ ಸಹಾಯದಿಂದ ಇಡೀ ಕಟ್ಟಡವನ್ನು ಕೆಡವಲಾಗಿತ್ತು. ಕಟ್ಟಡಕ್ಕೆ ಹತ್ತಿರವಾಗಿದ್ದ ಅಂಗನವಾಡಿಗೆ ಯಾವುದೇ ತೊಂದರೆಯಾಗಿರಲಿಲ್ಲ.
1,000 : ಅವಳಿ ಟವರ್‌ಗಳಲ್ಲಿ ಇರುವ ಒಟ್ಟು ಫ್ಲಾಟ್‌ಗಳ ಸಂಖ್ಯೆ
3 : ತಿಂಗಳು – ಕಟ್ಟಡ ಕೆಡವಲು ಸುಪ್ರೀಂ ನೀಡಿರುವ ಗಡುವು
40 : ಅಂತಸ್ತು ಎಮೆರಾಲ್ಡ್ ಕಟ್ಟಡದ ಅವಳಿ ಟವರ್‌ಗಳು ಇರುವ ಅಂತಸ್ತುಗಳು.
You seem to have an Ad Blocker on.
To continue reading, please turn it off or whitelist Udayavani.