Supreme Court; ನಿಷ್ಠರಾಗಿದ್ದ ಮಾತ್ರಕ್ಕೆ ಕಾನೂನು ಮೀರುವಂತಿಲ್ಲ !
ಜಿ.ಪಂ. ಸದಸ್ಯತ್ವ ಅನರ್ಹತೆ ಬಗ್ಗೆ ಸುಪ್ರೀಂ ತೀರ್ಪು
Team Udayavani, Apr 19, 2023, 6:40 AM IST
ನವದೆಹಲಿ: ಸಾರ್ವಜನಿಕ ಹಣಕಾಸು ವಿಚಾರದಲ್ಲಿ ನಿಷ್ಠರಾಗಿದ್ದೇವೆ ಎಂದ ಮಾತ್ರಕ್ಕೆ, ಕಾನೂನು ಕಟ್ಟಳೆಗಳನ್ನು ಮೀರಬಹುದು ಎಂದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಮಹಾರಾಷ್ಟ್ರದ ಧುಲೆ ಜಿಲ್ಲಾ ಪರಿಷತ್‌ನ ಸದಸ್ಯರೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಈ ಅಭಿಪ್ರಾಯ ನೀಡಿದೆ. ಜತೆಗೆ ಮೇಲ್ಮನವಿಯನ್ನೂ ತಿರಸ್ಕರಿಸಿದೆ.
ಜಿಲ್ಲಾ ಪರಿಷತ್ ಸದಸ್ಯ ವಿರೇಂದ್ರ ಸಿಂಗ್ ಎಂಬುವರು 15 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಯೊಂದಕ್ಕೆ ಅನುಮೋದನೆ ನೀಡಿದ್ದರು. ಅದಕ್ಕೆ ಗುತ್ತಿಗೆದಾರನನ್ನಾಗಿ ತಮ್ಮ ಪುತ್ರನ ಹೆಸರನ್ನೇ ನೋಂದಾಯಿಸಿದ್ದರು.
ಕುಟುಂಬ ಸದಸ್ಯರಿಗೇ ಗುತ್ತಿಗೆ ನೀಡಿದ್ದನ್ನು ವಿರೋಧಿಸಿ ನಾಶಿಕ್‌ನ ವಿಭಾಗೀಯ ಆಯುಕ್ತರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಆಯುಕ್ತರು ವಿರೇಂದ್ರ ಸಿಂಗ್‌ರನ್ನು ಸದಸ್ಯತ್ವದಿಂದ ಅನರ್ಹತೆಗೊಳಿಸಿದ್ದರು. ಅದನ್ನು ಪ್ರಶ್ನಿಸಿ ದಾವೆ ಹೂಡಲಾಗಿತ್ತು.
“ಚುನಾಯಿತ ಸದಸ್ಯರನ್ನು ಕ್ಷುಲ್ಲಕ ಕಾರಣಕ್ಕೆ ವಜಾ ಮಾಡುವುದು ಸಲ್ಲ. ಸ್ಥಳೀಯ ಕಾಮಗಾರಿಗಳ ಗುತ್ತಿಗೆ ನೀಡುವ ಸಂದರ್ಭದಲ್ಲಿ ಚುನಾಯಿತ ಸದಸ್ಯರು ಅನಗತ್ಯವಾಗಿ ಒತ್ತಡ ಹೇರುತ್ತಾರೆ. ಹಣಕಾಸು ವಿಚಾರಗಳಲ್ಲಿ ನಿಷ್ಠರಾಗಿದ್ದೇವೆ ಎಂಬದರೆ ಸಾಲದು.
ಕೆಲವೊಂದು ಸಂದರ್ಭಗಳಲ್ಲಿ ಪಾರದರ್ಶಕತೆಯನ್ನೇ ಸೋಲಿಸುವ ವ್ಯವಸ್ಥೆ ಇರುವಾಗ ಕಠಿಣವಾಗಿ ನಿಯಮಗಳ ಪಾಲನೆ ಮಾಡಬೇಕಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…