![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 13, 2021, 6:10 AM IST
ಗ್ವಾಲಿಯರ್: “ದೇವಾಲಯದ ಜಮೀ ನಿಗೆ ಆಂಜನೇಯನೇ ಮಾಲಕ’ ಎಂಬ ಐತಿಹಾಸಿಕ ತೀರ್ಪೊಂದನ್ನು ಸರ್ವೋಚ್ಚ ನ್ಯಾಯಾಲಯವು ನೀಡಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ಲಕ್ಷ್ಮೀ ಗಂಜ್ ಪ್ರದೇಶದ ದೇವಾಲಯವೊಂದರ ಜಮೀನು ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ದೇಗುಲದ ಆಸ್ತಿಪಾಸ್ತಿಗೆ ಶ್ರೀ ಆಂಜನೇ ಯನೇ ಒಡೆಯನಾಗಿದ್ದು, ಅರ್ಚಕರು ಆ ಆಸ್ತಿಯ ನಿರ್ವಾಹಕರಷ್ಟೇ ಎಂದಿದೆ.
ಏನಿದು ಪ್ರಕರಣ?:
ಲಕ್ಷ್ಮೀಗಂಜ್‌ನ ದೇಗುಲದ ಜಮೀನಿಗೆ ಸಂಬಂಧಿಸಿ 7 ವರ್ಷಗಳಿಂದ ವಿವಾದ ನಡೆ ಯುತ್ತಿತ್ತು. ದೇವಾಲಯದ ಪಕ್ಕದಲ್ಲಿ 14,850 ಚದರ ಅಡಿ ಭೂಮಿಯಿದೆ. ದೇವಾಲಯವಿರುವ ಭೂಮಿಯ ಸಹಿತ ಸುತ್ತಲಿನ ಎಲ್ಲ ಜಮೀನು ತಮ್ಮ ಪೂರ್ವಿ ಕರಿಗೆ ಸೇರಿದ್ದು, ತಮ್ಮ ತಂದೆ ಅದನ್ನು ಭೋಗ್ಯಕ್ಕೆ ಕೊಂಡುಕೊಂಡಿದ್ದರು ಎಂದು ಅರ್ಚಕ ವಿಷ್ಣು ದತ್ತ ಶರ್ಮಾ ವಾದಿಸಿದ್ದರು. ಆದರೆ ಶರ್ಮಾ ಅವರ ವಾದವು ಸತ್ಯಕ್ಕೆ ದೂರವಾದದ್ದು ಎಂಬ ಶಂಕೆಯನ್ನು ಜಿಲ್ಲಾಧಿಕಾರಿ ವ್ಯಕ್ತಪಡಿಸಿದ್ದರು. 7 ವರ್ಷಗಳ ಕಾಲ ವಿವಿಧ ಕೋರ್ಟ್‌ಗಳಲ್ಲಿ ನಡೆದ ಈ ವಿವಾದವು ಸುಪ್ರೀಂ ಕೋರ್ಟ್ ಮೆಟ್ಟಿಲೇ ರಿತ್ತು. ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಸಾರ್ವಜನಿಕ ದೇಗುಲ ಅಥವಾ ಅದಕ್ಕೆ ಸಂಬಂಧಿಸಿದ ಆಸ್ತಿಪಾಸ್ತಿಗೆ ಅಲ್ಲಿ ಪ್ರತಿಷ್ಠಾಪಿ ಸಲಾಗಿರುವ ದೇವರೇ ಮಾಲಕ. ಅರ್ಚಕರು ಆ ಆಸ್ತಿಯನ್ನು ನೋಡಿಕೊಳ್ಳುವ ವರಾ ಗಿರುತ್ತಾರೆಯೇ ವಿನಾ ಅವರನ್ನು ಮಾಲಕ ರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ.
ಹಿಂದೆಯೂ ಹೇಳಿತ್ತು:
ಇತ್ತೀಚೆಗಷ್ಟೇ ಮಧ್ಯಪ್ರದೇಶದ ಬೇರೊ ಂದು ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ನ ನ್ಯಾ| ಹೇಮಂತ್ ಗುಪ್ತಾ ಮತ್ತು ನ್ಯಾ| ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ನ್ಯಾಯ ಪೀಠ, ಯಾವುದೇ ದೇವಾಲಯ ಮತ್ತು ಅದಕ್ಕೆ ಸಂಬಂಧಪಟ್ಟ ಜಮೀನಿಗೆ ದೇವರೇ ಮಾಲಕ; ಪೂಜಾರಿಗಳಾಗಲೀ, ಜಿಲ್ಲಾಧಿ ಕಾರಿಯಾಗಲೀ ಅಲ್ಲ. ಆ ಭೂಮಿಯ ಆಸ್ತಿಯ ಮಾಲಕತ್ವದ ಹೆಸರನ್ನು ನಮೂ ದಿಸುವಾಗ ದೇವರ ಹೆಸರನ್ನಷ್ಟೇ ನಮೂ ದಿಸಬೇಕು ಎಂದು ಹೇಳಿತ್ತು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.