Supreme Court: ಜೀವನಾಂಶ ನಿಗದಿಗೆ ಸುಪ್ರೀಂ ಮಾರ್ಗಸೂಚಿ; 8 ಅಂಶಗಳ ಸೂತ್ರ
ಎಲ್ಲ ಅಧೀನ ಕೋರ್ಟ್‌ಗಳಿಗೂ ಅನ್ವಯ; ಬೆಂಗಳೂರು ಟೆಕಿ ಆತ್ಮಹತ್ಯೆ ಚರ್ಚೆ ಮಧ್ಯೆಯೇ ಈ ಆದೇಶ
Team Udayavani, Dec 13, 2024, 7:10 AM IST
ಹೊಸದಿಲ್ಲಿ: ಪತಿ-ಪತ್ನಿ ಕಲಹ ಪ್ರಕರಣದಲ್ಲಿ ಶಾಶ್ವತ ಜೀವನಾಂಶವನ್ನು ನಿರ್ಧರಿಸುವ ವೇಳೆ ನ್ಯಾಯಾಲಯಗಳು ಅನುಸರಿಸಬೇಕಾದ 8 ಅಂಶಗಳ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಕಟಿಸಿದೆ.
ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ| ವಿಕ್ರಮ್ ನಾಥ್ ಮತ್ತು ನ್ಯಾ| ಪ್ರಸನ್ನ ಬಿ. ವರಾಲೆ ಅವರನ್ನು ಒಳಗೊಂಡ ನ್ಯಾಯಪೀಠವು ದೇಶದ ಎಲ್ಲ ನ್ಯಾಯಾಲಯಗಳು ಜೀವನಾಂಶ ಮೊತ್ತವನ್ನು ನಿರ್ಧರಿಸುವಾಗ ಈ ಸೂತ್ರಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದೆ.
ಪತ್ನಿ ಮತ್ತು ಅತ್ತೆ ಮನೆಯವರ ಮೇಲೆ ಕಿರುಕುಳ ಆರೋಪ ಹೊರಿಸಿ ಬೆಂಗಳೂರಿನ ಟೆಕಿ ಅತುಲ್ ಸುಭಾಷ್ 80 ನಿಮಿಷಗಳ ವೀಡಿಯೋ ಮತ್ತು 24 ಪುಟಗಳ ಆತ್ಮಹತ್ಯಾ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಘಟನೆಯು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವಂತೆಯೇ ಸುಪ್ರೀಂ ಕೋರ್ಟ್‌ನಿಂದ ಇಂಥದ್ದೊಂದು ಮಾರ್ಗಸೂಚಿ ಹೊರಬಿದ್ದಿದೆ.
ಪತ್ನಿಗೆ ಶಿಸ್ತಿನ ಜೀವನ ನಡೆಸಲು ಅನುವು ಮಾಡಿಕೊಡುವ ಉದ್ದೇಶದಿಂದ ಜೀವನಾಂಶವನ್ನು ನಿಗದಿಪಡಿಸಬೇಕೇ ವಿನಾ ಆ ಮೊತ್ತವು ಪತಿಗೆ ವಿಧಿಸುವ ಶಿಕ್ಷೆಯಂತಿರಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಎರಡೂ ಕಡೆಯವರ ಸಾಮಾಜಿಕ, ಆರ್ಥಿಕ ಸ್ಥಾನಮಾನ, ಪತ್ನಿಯ ವಿದ್ಯಾರ್ಹತೆ, ಉದ್ಯೋಗ ಸಹಿತ 8 ಅಂಶಗಳನ್ನು ಪರಿಗಣಿಸಿಯೇ ಜೀವನಾಂಶದ ಮೊತ್ತವನ್ನು ನಿರ್ಧರಿಸಬೇಕು ಎಂದಿದೆ.
ಇದಕ್ಕೆ ಮುನ್ನ, ಮತ್ತೂಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾ| ಬಿ.ವಿ. ನಾಗರತ್ನಾ ಮತ್ತು ನ್ಯಾ| ಎನ್. ಕೋಟೀಶ್ವರ್ ಸಿಂಗ್ ಅವರ ನ್ಯಾಯಪೀಠವು, ವೈವಾಹಿಕ ಕಲಹದ ಸಂದರ್ಭದಲ್ಲಿ ಕಾನೂನಿನ ದುರ್ಬಳಕೆ ವಿರುದ್ಧ ಎಚ್ಚರಿಕೆ ನೀಡಿದೆ. ಕ್ರೌರ್ಯ ನಿಗ್ರಹ ಕಾನೂನನ್ನು ಪತಿ ಹಾಗೂ ಆತನ ಮನೆಯವರ ವಿರುದ್ಧದ ನಿಮ್ಮ ವೈಯಕ್ತಿಕ ದ್ವೇಷದ ಸಾಧನವಾಗಿ ಬಳಸಿಕೊಳ್ಳದಿರಿ ಎಂದು ಹೇಳಿದೆ.
8 ಅಂಶಗಳ ಸೂತ್ರವೇನು?
1. ಎರಡೂ ಕಡೆಯವರ ಸಾಮಾಜಿಕ, ಆರ್ಥಿಕ ಸ್ಥಾನಮಾನ
2. ಪತ್ನಿ ಮತ್ತು ಅವಲಂಬಿತ ಮಕ್ಕಳ ಅಗತ್ಯಗಳು
3. ಪತಿ ಹಾಗೂ ಪತ್ನಿಯ ವಿದ್ಯಾರ್ಹತೆ ಮತ್ತು ಉದ್ಯೋಗ
4. ಅರ್ಜಿದಾರರ ಸ್ವತಂತ್ರ ಆದಾಯ ಹಾಗೂ ಆಸ್ತಿ
5. ಪತಿಯ ಮನೆಯಲ್ಲಿ ಪತ್ನಿಯ ಜೀವನ ಮಟ್ಟ
6. ಕೌಟುಂಬಿಕ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಉದ್ಯೋಗ ತೊರೆದಿದ್ದಾರೆಯೇ?
7. ಪತ್ನಿಯು ಉದ್ಯೋಗಸ್ಥೆ ಅಲ್ಲದಿದ್ದರೆ, ಕಾನೂನು ಹೋರಾಟಕ್ಕೆ ಆಗುವ ವೆಚ್ಚ
8. ಪತಿಯ ಆರ್ಥಿಕ ಸಾಮರ್ಥ್ಯ, ಆದಾಯ, ಹೊಣೆಗಾರಿಕೆಗಳು ಮತ್ತು ಬಾಧ್ಯತೆಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!
Kerala: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಶವಾಗಾರದಲ್ಲಿ ಜೀವಂತವಾದ!
Liquor Policy Case:ಕೇಜ್ರಿ, ಸಿಸೋಡಿಯಾ ವಿರುದ್ಧ ಪ್ರಾಸಿಕ್ಯೂಷನ್: EDಗೆ ಕೇಂದ್ರದ ಅನುಮತಿ
MUST WATCH
ಹೊಸ ಸೇರ್ಪಡೆ
Vijay Hazare Trophy: ಚಾಂಪಿಯನ್ ಹರಿಯಾಣ ಪರಾಭವ… ಫೈನಲ್ ಪ್ರವೇಶಿಸಿದ ಕರ್ನಾಟಕ
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.