Manipur ವಿಡಿಯೋ; ಆರು ಅಂಶಗಳ ಮಾಹಿತಿಯೊಂದಿಗೆ ಬನ್ನಿ; ಕೇಂದ್ರಕ್ಕೆ ಸುಪ್ರೀಂ
ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ , ಕೇಂದ್ರ ಮತ್ತು ಮತ್ತು ಮಣಿಪುರ ಸರಕಾರಕ್ಕೆ ಸವಾಲು
Team Udayavani, Jul 31, 2023, 3:43 PM IST
ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನುನ್ನು ಸುಪ್ರೀಂ ಕೋರ್ಟ್ ನಾಳೆ(ಮಂಗಳವಾರ) ಮಧ್ಯಾಹ್ನ 2 ಗಂಟೆಗೆ ಮುಂದೂಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮಣಿಪುರದಲ್ಲಿ ನಡೆದಿರುವುದನ್ನು, ಇಂತಹ ಪ್ರಕರಣಗಳು ಬೇರೆಡೆ ಕೂಡ ನಡೆದಿದೆ ಎಂದು ಹೇಳುವ ಮೂಲಕ ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಂಗಾಳ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಮಾತನಾಡಿದ ವಕೀಲರಿಗೆ ಪ್ರತಿಕ್ರಿಯಿಸಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸುಮಾರು 6,000 ಎಫ್‌ಐಆರ್‌ಗಳಲ್ಲಿ ಎಷ್ಟು ಮಹಿಳೆಯರ ವಿರುದ್ಧದ ಅಪರಾಧಗಳಾಗಿವೆ ಎಂದು ನ್ಯಾಯಾಲಯವು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ಸದ್ಯಕ್ಕೆ ಅಂತಹ ಪ್ರಕರಣಗಳ ವಿವರ ಇಲ್ಲ ಎಂದು ಕೇಂದ್ರ ಹೇಳಿದೆ. ಆರು ಅಂಶಗಳ ಮಾಹಿತಿಯೊಂದಿಗೆ ನಾಳೆ ಹಿಂತಿರುಗುವಂತೆ ನ್ಯಾಯಾಲಯವು ಕೇಂದ್ರ ಮತ್ತು ಮಣಿಪುರ ಸರಕಾರಕ್ಕೆ ಸೂಚನೆ ನೀಡಿದೆ.
ಆರು ಅಂಶಗಳ ಮಾಹಿತಿಗಳೆಂದರೆ, ಪ್ರಕರಣಗಳ ವಿಭಜನೆ, ಎಷ್ಟು ಶೂನ್ಯ ಎಫ್‌ಐಆರ್‌ಗಳು, ಎಷ್ಟು ಮಂದಿಯನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ? , ಇಲ್ಲಿಯವರೆಗೆ ಎಷ್ಟು ಮಂದಿಯನ್ನು ಬಂಧಿಸಲಾಗಿದೆ?,ಬಂಧಿತ ಆರೋಪಿಗಳಿಗೆ ಕಾನೂನು ಸಹಾಯದ ಸ್ಥಿತಿ? ಇಲ್ಲಿಯವರೆಗೆ ಎಷ್ಟು ಸೆಕ್ಷನ್ 164 ಹೇಳಿಕೆಗಳನ್ನು ದಾಖಲಿಸಲಾಗಿದೆ ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದೆ.
ಮಹಿಳೆಯರಿಬ್ಬರನ್ನು ವಿವಸ್ತ್ರವಾಗಿ ಮೆರವಣಿಗೆ ನಡೆಸಿದ ವೈರಲ್ ವಿಡಿಯೋ ಪ್ರಕರಣದಲ್ಲಿ ಮೈತೆಯ್ ಸಮುದಾಯದ ಪರ ವಾದ ಮಂಡಿಸಿದ ವಕೀಲರು, ವೈರಲ್ ಆಗಿರುವುದು ಒಂದೇ ಒಂದು ವೀಡಿಯೋ ಅಲ್ಲ, ಇಂತಹ ಹಲವು ವೀಡಿಯೋಗಳು ಇತರೆಡೆಯೂ ನಡೆದಿದ್ದು ಸಾರ್ವಜನಿಕರ ವೀಕ್ಷಣೆಗೆ ಒಳಗಾಗಿವೆ ಎಂದು ಹೇಳಿದ್ದಾರೆ.
ಸಿಜೆಐ ಚಂದ್ರಚೂಡ್ ಅವರು ಮೈತೆಯ್ ಸಮುದಾಯದ ಪರವಾಗಿ ಹಾಜರಾಗುವ ವಕೀಲರಿಗೆ ನಾವು ಕೇಸ್ ಪೇಪರ್‌ಗಳನ್ನು ಮಾತ್ರ ಓದಿಲ್ಲ ಎಂದು ಭರವಸೆ ನೀಡಿದ್ದಾರೆ. ನಾನೂ ಕೂಡ ವಿಡಿಯೋ ನೋಡಿದ್ದೇನೆ. ಆ ವಿಡಿಯೋ ದೇಶದ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ನಾವು ಪ್ರಕರಣವನ್ನು ಗಮನಿಸಿದ್ದೇವೆ ಎಂದು ಹೇಳಿದ್ದಾರೆ.
ಬದುಕುಳಿದವರು ತನಿಖೆಯಲ್ಲಿ ವಿಶ್ವಾಸ ಹೊಂದಬೇಕು ಎಂದು ವಾದಿಸಿದ ಮಹಿಳಾ ವಕೀಲರ ಕೋರಿಕೆಯ ಮೇರೆಗೆ, ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಿದರೆ ತನ್ನ ಅಭ್ಯಂತರವಿಲ್ಲ ಎಂದು ಸರಕಾರ ಹೇಳಿದೆ.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.ಪ್ರಕರಣವನ್ನು ಸಿಬಿಐಗೆ ವಹಿಸಿರುವ ಕೇಂದ್ರದ ಕ್ರಮಕ್ಕೆ ಕಪಿಲ್ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಅಸ್ಸಾಂಗೆ ವರ್ಗಾಯಿಸುವಂತೆ ಸರಕಾರ ಮಾಡಿದ ಮನವಿಗೂ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರಕರಣವನ್ನು ಅಸ್ಸಾಂಗೆ ವರ್ಗಾಯಿಸುವಂತೆ ಕೇಂದ್ರವು ಎಂದಿಗೂ ಕೋರಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ನ್ಯಾಯಾಲಯವು ಸೂಕ್ತವೆಂದು ತೀರ್ಮಾನಿಸುವ ಕಡೆಗೆ ವರ್ಗಾವಣೆಯನ್ನು ಕೇಂದ್ರವು ಕೋರಿದೆ ಎಂದು ಮೆಹ್ತಾ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.