ಪಾನ್ ಕಾರ್ಡ್ಗೆ ಆಧಾರ್ ಜೋಡಣೆ ಕಡ್ಡಾಯ: ಸು.ಕೋ.
Team Udayavani, Jun 10, 2017, 10:26 AM IST
ಹೊಸದಿಲ್ಲಿ: ಆದಾಯ ರಿಟರ್ನ್ಸ್ ಸಲ್ಲಿಕೆಗಾಗಿ ಪಾನ್ ಜತೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಿಸಲೇಬೇಕು ಎಂಬ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆದರೆ ಇದುವರೆಗೆ ಆಧಾರ್ ಮಾಡಿಸಿಕೊಳ್ಳದೇ ಇರುವವರಿಗೆ ಅದು ವಿನಾಯಿತಿ ನೀಡಿದೆ. ಸಂವಿಧಾನ ಪೀಠದಲ್ಲಿ ಆಧಾರ್ನ ಖಾಸಗಿ ಹಕ್ಕು ಉಲ್ಲಂಘನೆ ಕುರಿತಂತೆ ವಿಚಾರಣೆ ನಡೆಯುತ್ತಿದೆ. ಇದು, ಬಗೆಹರಿಯುವವರೆಗೆ ಆಧಾರ್ ಇಲ್ಲದವರಿಗೆ ಪಾನ್ ಸಂಪರ್ಕದಿಂದ ವಿನಾಯಿತಿ ನೀಡಿ ನ್ಯಾ| ಎ.ಕೆ. ಸಿಕ್ರಿ ಮತ್ತು ನ್ಯಾ| ಅಶೋಕ್ ಭೂಷಣ್ ಅವರಿದ್ದ ಪೀಠ ಆದೇಶ ನೀಡಿದೆ.
ಕೇಂದ್ರ ಸರಕಾರ ಐಟಿ ಕಾಯ್ದೆಗೆ ತಿದ್ದುಪಡಿ ತಂದು, ಆಧಾರ್ ಅನ್ನು ಪಾನ್ ಕಾರ್ಡ್ ಜತೆ ಲಿಂಕ್ ಮಾಡುವ ಬಗ್ಗೆ ಕಡ್ಡಾಯ ಮಾಡಿತ್ತು. ಜು. 1ರಿಂದ ಹೊಸದಾಗಿ ಪಾನ್ ಮಾಡಿಸಿಕೊಳ್ಳುವವರು ಆಧಾರ್ ಜೋಡಿಸಿಯೇ ಮಾಡಿಸಬೇಕಿತ್ತು. ಅಲ್ಲದೆ ಐಟಿ ರಿಟರ್ನ್ಸ್ ವೇಳೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಲೇಬೇಕಿತ್ತು. ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಕೋರ್ಟ್, ಐಟಿ ಕಾಯ್ದೆ ತಿದ್ದುಪಡಿ ಮಾಡುವ ಎಲ್ಲ ಅಧಿಕಾರ ಕೇಂದ್ರ ಸರಕಾರಕ್ಕಿದೆ ಎಂದಿದೆ. ಆದರೆ, ಆಧಾರ್ ಲಿಂಕ್ ಮಾಡದ ಪ್ಯಾನ್ ಅನ್ನು ರದ್ದು ಮಾಡಬಾರದು ಎಂದು ಸೂಚಿಸಿದೆ. ಜತೆಗೆ, ಆಧಾರ್ ಅಂಶಗಳು ಸೋರಿಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸು. ಕೋರ್ಟ್ ಈ ಬಗ್ಗೆ ನಿಗಾ ವಹಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಸುಪ್ರೀಂ ಹೇಳಿದ್ದು
ಆಧಾರ್ ಇರುವವರು ಕಡ್ಡಾಯವಾಗಿ ಪಾನ್ಕಾರ್ಡ್ ಜತೆ ಜೋಡಿಸಲೇಬೇಕು ಆಧಾರ್ಮಾಡಿಸಿಕೊಳ್ಳದೆ ಇರುವವರಿಗೆ ಸದ್ಯ ವಿನಾಯಿತಿ ಇವರ ಪಾನ್ ರದ್ದು ಮಾಡದಂತೆ ಸುಪ್ರೀಂಕೋರ್ಟ್ನಿಂದ ಸೂಚನೆ
ಸಂವಿಧಾನ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆ ಪೂರ್ಣಗೊಳ್ಳುವವರೆಗೆ ವಿನಾಯಿತಿ
ಆಧಾರ್ ಲಿಂಕ್ ಮಾಡದ ಪಾನ್ ರದ್ದು ಮಾಡಬಾರದು ಎಂಬ ಸುಪ್ರೀಂಕೋರ್ಟ್ನ ಆದೇಶ ಸ್ವಾಗತಾರ್ಹ. ಅದು ಜನರ ಖಾಸಗಿ ಹಕ್ಕನ್ನು ಎತ್ತಿಹಿಡಿದಿದೆ.
– ಟಾಮ್ ವಡಕ್ಕನ್, ಕಾಂಗ್ರೆಸ್ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.