ರೇವಾದಲ್ಲಿ ಏಷ್ಯಾದ ಆಲ್ಟ್ರಾ ಮೆಗಾ ಸೋಲಾರ್ ಪವರ್ ಪ್ಲ್ಯಾಂಟ್ ಉದ್ಘಾಟನೆ; ಏನಿದು?
ಸೌರ ಶಕ್ತಿ ಎಂಬುದು ಖಚಿತ, ಶುದ್ಧ ಮತ್ತು ಸುರಕ್ಷಿತವಾಗಿದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
Team Udayavani, Jul 10, 2020, 4:16 PM IST
ಭೋಪಾಲ್:ಏಷ್ಯಾದ ಅತೀದೊಡ್ಡ 750 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು 750 ಮೆಗಾ ವ್ಯಾಟ್ ಆಲ್ಟ್ರಾ ಮೆಗಾ ಸೋಲಾರ್ ಪವರ್ ಪ್ಲ್ಯಾಂಟ್ ಅನ್ನು ಉದ್ಘಾಟಿಸಿದ್ದು, ಇದರಿಂದಾಗಿ ಪ್ರತಿ ವರ್ಷ ಅಂದಾಜು 15 ಲಕ್ಷ ಟನ್ ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಕಡಿಮೆಯಾಗಲಿದೆ ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುತ್ತ ತಿಳಿಸಿದರು.
ಸೌರ ಶಕ್ತಿ ಪ್ರಮುಖ ಅಗತ್ಯತೆಗಳಲ್ಲಿ ಒಂದಾಗಿದೆ. ಕೇವಲ ಇಂದು ಮಾತ್ರವಲ್ಲ ಇದು 21ನೇ ಶತಮಾನಕ್ಕೆ ತುರ್ತಾಗಿದೆ. ಯಾಕೆಂದರೆ ಸೌರ ಶಕ್ತಿ ಎಂಬುದು ಖಚಿತ, ಶುದ್ಧ ಮತ್ತು ಸುರಕ್ಷಿತವಾಗಿದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಇಂದು ರೇವಾ ನಿಜಕ್ಕೂ ಇತಿಹಾಸ ಬರೆದಿದೆ. ರೇವಾ ತಾಯಿ ನರ್ಮದೆ ಮತ್ತು ಬಿಳಿ ಹುಲಿಗಳಿಂದಾಗಿ ಪ್ರಸಿದ್ಧಿಯಾಗಿತ್ತು. ಆದರೆ ಇದೀಗ ಏಷ್ಯಾದ ಅತೀ ದೊಡ್ಡ ಸೋಲಾರ್ ವಿದ್ಯುತ್ ಯೋಜನೆ ಸೇರ್ಪಡೆಯಾಗಿದೆ ಎಂದರು.
Glimpses from the solar power project that was inaugurated in Rewa, Madhya Pradesh, this morning. pic.twitter.com/uZOZ0YXxAQ
— Narendra Modi (@narendramodi) July 10, 2020
ಈ ನಿಟ್ಟಿನಲ್ಲಿ ನಾನು ರೇವಾ ಮತ್ತು ಮಧ್ಯಪ್ರದೇಶದ ಜನರನ್ನು ಅಭಿನಂದಿಸುತ್ತೇನೆ, ಅವರಿಗೆ ನನ್ನ ಶುಭಾಶಯ ತಿಳಿಸುತ್ತೇನೆ. ಈ ಯೋಜನೆಯು ರಾಜ್ಯದ ಹೊರಗಿನ ಗ್ರಾಹಕರಿಗೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ಸರಬರಾಜು ಮಾಡುವ ಮೊದಲ ನವೀಕರಿಸಬಹುದಾದ ಸೋಲಾರ್ ಯೋಜನೆಯಾಗಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.