Surgical Strike ಹೀರೊ ಲ್ಯಾನ್ಸ್ ನಾಯಕ್ ಸಂದೀಪ್ ಸಿಂಗ್ ಹುತಾತ್ಮ
Team Udayavani, Sep 25, 2018, 2:19 PM IST
ಶ್ರೀನಗರ: ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ವೀರ ಯೋಧ ಲ್ಯಾನ್ಸ್ ನಾಯಕ್ ಸಂದೀಪ್ ಸಿಂಗ್ ಅವರು ಸೋಮವಾರ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ.
ಸೋಮವಾರ ತಾಂಗ್‌ಧಾರ್ ಸೆಕ್ಟರ್‌ನಲ್ಲಿ ನಡೆದ ಭಾರೀ ಗುಂಡಿನ ಕಾಳಗದಲ್ಲಿ ಗುಂಡಿಗೆ ಎದೆಯೊಡ್ಡಿದ ಸಂದೀಪ್ ಸಿಂಗ್ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಅಮರರಾಗಿದ್ದಾರೆ.
ಗುರುದಾಸ್‌ಪುರದಲ್ಲಿ ಅವರ ಅಂತಿಮ ಯಾತ್ರೆಯನ್ನು ಸಕಲ ಮಿಲಿಟರಿ ಗೌರವಗಳೊಂದಿಗೆ ನಡೆಸಲಾಯಿತು.
2016 ರ ಸರ್ಜಿಕಲ್ ಸ್ಟೈಕ್ ನಡೆಸಿದ ವೀರಯೋಧರಲ್ಲಿ ಓರ್ವರಾಗಿದ್ದ ಸಂದೀಪ್ ಸಿಂಗ್ ಅವರು ಪತ್ನಿ ಮತ್ತು 5 ವರ್ಷದ ಮಗನನ್ನು ಅಗಲಿದ್ದಾರೆ.
ತಲೆಗೆ ಗುಂಡು ಹೊಕ್ಕರೂ ಹೋರಾಡಿದ ಸಿಂಹ !
ಗುಂಡಿನ ಚಕಮಕಿ ವೇಳೆ ಉಗ್ರರ ಗುಂಡು ತಲೆಗೆ ಹೊಕ್ಕರೂ ಹೋರಾಟ ನಿಲ್ಲಿಸದ ರಣ ಕಲಿ ದೇಶಕ್ಕಾಗಿ ಮಡಿದು ನಿಜಾರ್ಥದಲ್ಲಿ ನಾಯಕನಾಗಿದ್ದಾರೆ. ಸಂದೀಪ್ ಸಿಂಗ್ ನಿಧನಕ್ಕೆ ಗಣ್ಯರು ಸೇರಿದಂತೆ ದೇಶಾದ್ಯಂತ ತೀವ್ರ ಕಂಬನಿ ಮಿಡಿಯಲಾಗಿದೆ.
ತಾಂಗ್‌ಧಾರ್‌ನಲ್ಲಿ ಗಡಿನುಸುಳುತ್ತಿದ್ದ ಮೂವರು ಉಗ್ರರನ್ನು ಸೋಮವಾರ ಹತ್ಯೆಗೈಯಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.