“ಪರಾಕ್ರಮ ಪರ್ವ’ಕ್ಕೆ ಪ್ರಧಾನಿ ಮೋದಿ ಚಾಲನೆ
Team Udayavani, Sep 29, 2018, 6:00 AM IST
ಜೋಧ್‌ಪುರ: ಗಡಿ ನಿಯಂತ್ರಣಾ ರೇಖೆ ದಾಟಿ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಎರಡನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ರಾಜಸ್ಥಾನದ ಜೋಧ್‌ಪುರದ ಸೇನಾ ನೆಲೆಯಲ್ಲಿ “ಪರಾಕ್ರಮ ಪರ್ವ’ ವಸ್ತುಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇಲ್ಲಿ ಸೇನೆಯ ಯುದ್ಧ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಮಾಹಿತಿಗಳು ಹಾಗೂ ಯುದ್ಧ ಸಲಕರಣೆಗಳನ್ನು ಪ್ರದರ್ಶಿಸಲಾಗಿದ್ದು, ಪ್ರಧಾನಿ ಮೋದಿ ಅವರೂ ಪ್ರದರ್ಶನ ವೀಕ್ಷಿಸಿ ಅಧಿಕಾರಿ ಗಳಿಂದ ಮಾಹಿತಿ ಪಡೆದುಕೊಂಡರು. ಕೊನಾರ್ಕ್ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮರಾದ ನಮನ ಸಲ್ಲಿಸಿದ ಪ್ರಧಾನಿ ಮೋದಿ, ಸಂದರ್ಶಕರ ಪುಸ್ತಕ ದಲ್ಲಿ “ತಾಯಿನಾಡಿನ ರಕ್ಷಣೆಗೆ ಬದ್ಧವಾಗಿರುವ ಸಶಸ್ತ್ರ ಪಡೆಗಳ ಯೋಧರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ’ ಎಂದು ಬರೆದರು. ಈ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತಿತರರು ಸಾಥ್ ನೀಡಿದರು.
ದೇಶಾದ್ಯಂತ ಆಚರಣೆ: 2016, ಸೆಪ್ಟೆಂಬರ್ 29ರಂದು ಗಡಿ ನಿಯಂತ್ರಣ ರೇಖೆ ದಾಟಿ ತೆರಳಿದ್ದ ಭಾರತೀಯ ಯೋಧರ ತಂಡವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ 7 ನೆಲೆಗಳನ್ನು ನಾಶಮಾಡಿ, ಹಲವು ಉಗ್ರರನ್ನು ಹತ್ಯೆಗೈದಿತ್ತು. ಅದರ ನೆನಪಿಗಾಗಿ ಸೆ.29 ಅನ್ನು ಸರ್ಜಿಕಲ್ ದಾಳಿ ದಿನವನ್ನಾಗಿ ಆಚರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಸರ್ಜಿಕಲ್ ದಾಳಿಯ 2ನೇ ವರ್ಷಾಚರಣೆ ಪ್ರಯುಕ್ತ ಚೆನ್ನೈ, ಗ್ಯಾಂಗ್ಟಕ್, ಕೊಚ್ಚಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಂವಾದ ಕಾರ್ಯ ಕ್ರಮಗಳು ಶುಕ್ರವಾರದಿಂದಲೇ ಆರಂಭವಾದವು. ಜಮ್ಮುವಿನ ವಾಯುಪಡೆಯ ಸ್ಟೇಷನ್‌ನಲ್ಲೂ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಲಿಕಾಪ್ಟರ್‌ಗಳು, ರಿಮೋಟ್ ಪೈಲೆಟೆಡ್ ವಿಮಾನ, ಮೊಬೈಲ್ ಸಂವಹನ ಟರ್ಮಿನಲ್, ವಾಯುಪಡೆಯ ಗರುಡ ಕಮಾಂಡೋಗಳ ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟು ಮಾಡುವಂತೆ ಪಾಕಿಸ್ತಾನದ ಐಎಸ್‌ಐ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಡುವೆ “ಮಹಾಘಟಬಂಧನ್’ ಏರ್ಪಟ್ಟಿದೆ. ಐಎಸ್‌ಐ ಅನ್ನು ಮೋದಿ-ಶಾ ಪಠಾಣ್‌ಕೋಟ್ ವಾಯುನೆಲೆಗೆ ಆಹ್ವಾನಿಸುವ ಮೂಲಕ ದೇಶಕ್ಕೆ ದ್ರೋಹ ಬಗೆದಿದ್ದು, ಕ್ಷಮೆ ಯಾಚಿಸಬೇಕು.
ಸುರ್ಜೆವಾಲ, ಕಾಂಗ್ರೆಸ್ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.