ಸಂಸದರಿಗೆ ಇನ್ನೊಂದು ಕೆಲಸ:ಸರ್ವೆ ಮಾಡಿ
Team Udayavani, Dec 31, 2017, 3:12 PM IST
ಹೊಸದಿಲ್ಲಿ: ನರೇಂದ್ರ ಮೋದಿ ಅಪ್ಲಿಕೇಶನ್ ಅನ್ನು ಬಳಸದ್ದಕ್ಕೆ ಸ್ವಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಸಂಸದರಿಗೆ ಇನ್ನೊಂದು ಕೆಲಸ ವಹಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಪರಿಣಾಮದ ಬಗ್ಗೆ ರೂಪಿಸಲಾದ ಸರ್ವೆಗೆ ಸಂಸದರು ಪ್ರತಿಕ್ರಿಯಿಸಬೇಕೆಂದು ಸೂಚಿಸಲಾಗಿದೆ. ಯೋಜನೆಗಳು ಜನರ ಜೀವನದ ಮೇಲೆ ಯಾವ ಪರಿಣಾಮ ಬೀರಿವೆ ಎಂಬುದು ಈ ಸಮೀಕ್ಷೆಯಲ್ಲಿ ತಿಳಿದುಬರಲಿದೆ. ಇನ್ನೊಂದೆಡೆ ಅಧಿಕೃತ ಅಂಕಿ ಅಂಶಗಳ ಹೊರತಾಗಿ, ಯೋಜನೆಗಳ ಯಶಸ್ಸನ್ನು ಅಳೆಯಲು ಅನುವಾಗಲಿದೆ. ಇವೆಲ್ಲದರ ಜತೆಗೆ ಸಂಸದರು ಎಷ್ಟು ಸಕ್ರಿಯವಾಗಿದ್ದಾರೆ ಎಂಬುದು ಮೋದಿಗೆ ತಿಳಿಯಲಿದೆ.
ಕೆಲವೇ ದಿನಗಳ ಹಿಂದೆ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದ ಮೋದಿ, “ನರೇಂದ್ರ ಮೋದಿ ಆ್ಯಪ್’ನಲ್ಲಿ ಕಳುಹಿ ಸಿದ ಸಂದೇಶಗಳಿಗೆ ಸಂಸದರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿ ದ್ದರು. ಆ್ಯಪ್ನಲ್ಲಿ ಸಂಸದರು ಸಕ್ರಿಯವಾಗಿರಬೇಕೆಂದೂ ಸೂಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.