ಸುಶಾಂತ್ ಕೇಸಿಗೆ ರೋಚಕ ತಿರುವು; ರಿಯಾ ವಿರುದ್ಧ ಜಾರಿ ನಿರ್ದೇಶನಾಲಯ ಕೇಸು ದಾಖಲು
ಮತ್ತಷ್ಟು ಜಟಿಲವಾದ ಆತ್ಮಹತ್ಯೆ ಪ್ರಕರಣ; 2 ಸಂಸ್ಥೆಗಳ ವಿರುದ್ಧ ಬಿಹಾರ ಪೊಲೀಸರ ತನಿಖೆ
Team Udayavani, Aug 1, 2020, 8:41 AM IST
ಮುಂಬಯಿ: ದಿನಗಳು ಕಳೆದಂತೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವು ಹಲವು ತಿರುವುಗಳನ್ನು ಪಡೆಯುತ್ತಿದೆ. ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ತಂದೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಪ್ರಕರಣದ ಕುರಿತು ಕುತೂಹಲಕಾರಿ ಅಂಶಗಳು ಬಯಲಾಗತೊಡಗಿವೆ.
ರಿಯಾ ಮತ್ತು ಅವರ ಕುಟುಂಬ ಸದಸ್ಯರು ಸುಶಾಂತ್‌ಗೆ 15 ಕೋಟಿ ರೂ. ವಂಚಿಸಿದ್ದಾರೆ ಎಂದು ದೂರಿ ನಲ್ಲಿ ತಂದೆ ಆರೋಪಿಸಿದ್ದು, ಆ ಕುರಿತು ತನಿಖೆ ಆರಂಭಿಸಿದ ಜಾರಿ ನಿರ್ದೇಶನಾಲಯ ಶುಕ್ರವಾರ ರಿಯಾ ವಿರುದ್ಧ ಹಣಕಾಸು ಅಕ್ರಮ ಸಾಗಣೆ ಕೇಸು ದಾಖಲಿಸಿಕೊಂಡಿದೆ. 2019ರಲ್ಲಿ ಸುಶಾಂತ್ ಖಾತೆ ಯಲ್ಲಿ 17 ಕೋಟಿ ರೂ.ಗಳಿ ದ್ದವು. ಆದರೆ, ಕೆಲವೇ ತಿಂಗಳಲ್ಲಿ ಅದರಲ್ಲಿ 15 ಕೋಟಿ ರೂ.ಗಳು ಅಪರಿಚಿತ ಖಾತೆಗೆ ವರ್ಗಾವಣೆ ಆಗಿತ್ತು ಎಂದು ತಂದೆ ದೂರಿನಲ್ಲಿ ತಿಳಿಸಿದ್ದರು.
ಇದೇ ವೇಳೆ, ಸುಶಾಂತ್ ಹಾಗೂ ರಿಯಾ ಅವರ 2 ಕಂಪನಿಗಳು, ಅವುಗಳ ಹಣಕಾಸು ವಹಿವಾಟು ಕುರಿತು ಬಿಹಾರ ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ. ಈ ನಡುವೆ, ತಮ್ಮ ವಿರುದ್ಧದ ಎಫ್ಐಆರ್ ಪ್ರಶ್ನಿಸಿ ರಿಯಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸುವುದಾಗಿ ಬಿಹಾರ ಸರಕಾರ ಹೇಳಿದೆ.
ಕುಟುಂಬದಿಂದ ಒತ್ತಡ: ರಿಯಾ ವಿರುದ್ಧ ಹೇಳಿಕೆ ನೀಡುವಂತೆ ಸುಶಾಂತ್ ಕುಟುಂಬ ನನ್ನ ಮೇಲೆ ಒತ್ತಡ ಹೇರುತ್ತಿದೆ ಎಂದು ಸುಶಾಂತ್‌ರ ಸ್ನೇಹಿತ ಸಿದ್ಧಾರ್ಥ್ ಪಿಥಾನಿ ಮುಂಬಯಿ ಪೊಲೀಸರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಜು.22ರಂದು ಸುಶಾಂತ್ ಕುಟುಂಬ ಸದಸ್ಯ ರಿಂದ ಕಾನ್ಫರೆನ್ಸ್ ಕಾಲ್ ಬಂದಿತ್ತು. ಸುಶಾಂತ್ ಅಪಾರ್ಟ್ ಮೆಂಟ್‌ನಲ್ಲಿ ವಾಸವಿದ್ದಾಗ ರಿಯಾಳ ಖರ್ಚು ವೆಚ್ಚ ಹೇಗಿತ್ತು ಎಂದು ನನ್ನಲ್ಲಿ ಅವರು ಪ್ರಶ್ನಿಸಿದರು. ಜತೆಗೆ, ಬಿಹಾರ ಪೊಲೀಸರ ಮುಂದೆ ರಿಯಾ ವಿರುದ್ಧ ಹೇಳಿಕೆ ನೀಡು ವಂತೆ ಒತ್ತಾಯಿಸಿದರು ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ರಿಯಾ ಬಂದ ಮೇಲೆ ಬದಲು: ಸುಶಾಂತ್ ಬಹಳ ಸರಳ ವ್ಯಕ್ತಿ. ದುಂದುವೆಚ್ಚ ಮಾಡುವವರೂ ಅಲ್ಲ. ಬಹಳ ಚಟುವಟಿಕೆಯುಕ್ತರಾಗಿ ಓಡಾಡುತ್ತಿದ್ದರು. ಆದರೆ, ರಿಯಾ ಬಂದ ಮೇಲೆ ಅವರು ಪೂರ್ತಿ ಬದಲಾದರು. ಸುಶಾಂತ್ ಆಗಾಗ್ಗೆ ಅನಾರೋಗ್ಯಕ್ಕೀಡಾಗುತ್ತಿದ್ದರು, ಮಲಗಿಕೊಂಡೇ ಇರುತ್ತಿದ್ದರು. ಹಾಗಿದ್ದರೂ ರಿಯಾ, ಆಕೆಯ ತಂದೆ, ಸಹೋ ದರ ಅಪಾರ್ಟ್‌ಮೆಂಟ್‌ಗೆ ಹಲವು ಗೆಳೆಯರನ್ನು ಕರೆಸಿ ಕೊಂಡು ಪಾರ್ಟಿ ಮಾಡುತ್ತಿದ್ದರು. ಸುಶಾಂತ್‌ರ ಹಣವನ್ನೆಲ್ಲ ಅವರೇ ಖರ್ಚು ಮಾಡುತ್ತಿದ್ದರು. ಸುಶಾಂತ್‌ಗೆ ರಿಯಾ ಡ್ರಗ್ಸ್ ಕೊಡುತ್ತಿದ್ದಳು. ಹಲವು ಬಾರಿ ಡ್ರಗ್ ಅಂಗಡಿ ಮಾಲೀ ಕರು ಬಂದು ಖರೀದಿ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದ್ದೂ ಇದೆ ಎಂದು ಸುಶಾಂತ್‌ರ ಬಾಡಿಗಾರ್ಡ್ ಹೇಳಿದ್ದಾರೆ.
ರಜಪೂತ್ ಖನ್ನತೆಯಿಂದ ಬಳಲುತ್ತಿರಲಿಲ್ಲ: ಅಂಕಿತಾ
ನನಗೆ ಸುಶಾಂತ್ ಹಲವು ವರ್ಷಗಳಿಂದಲೂ ಪರಿಚಯ. ಅವನು ಖನ್ನತೆಯಿಂದ ಬಳಲುತ್ತಿರಲಿಲ್ಲ ಎಂದು ಸುಶಾಂತ್‌ರ ಗೆಳತಿ ಅಂಕಿತಾ ಲೋಖಂಡೆ ಹೇಳಿದ್ದಾರೆ. ಅವನು ತನ್ನ ಭವಿಷ್ಯದ ಬಗ್ಗೆ ಸರಿಯಾಗಿ ಪ್ಲ್ರಾನ್ ಮಾಡಿಕೊಂಡಿದ್ದ. ಮುಂದಿನ 5 ವರ್ಷ ಗಳಲ್ಲಿ ಏನೇನು ಮಾಡಬೇಕು ಎಂಬು ದನ್ನು ಡೈರಿಯಲ್ಲಿ ಬರೆದಿದ್ದ. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂಥ ವ್ಯಕ್ತಿ ಅಲ್ಲವೇ ಅಲ್ಲ ಎಂದೂ ಅಂಕಿತಾ ಹೇಳಿ ದ್ದಾರೆ. ಜತೆಗೆ, ಸುಶಾಂತ್ ತಂದೆಯ ಬಳಿ ಅವನ ಮೊಬೈಲ್ ಸಂಖ್ಯೆಯೂ ಇರಲಿಲ್ಲ. ಒಂದು ದಿನ ಅವರು ನನಗೆ ಕರೆ ಮಾಡಿ, ಸುಶಾಂತ್‌ನ ಮೊಬೈಲ್ ನಂಬರ್ ನೀಡುವಂತೆ ಕೇಳಿ ಪಡೆದುಕೊಂಡಿದ್ದರು ಎಂದಿದ್ದಾರೆ ಅಂಕಿತಾ.
ರಿಯಾ ಚಕ್ರವರ್ತಿ ಕಾಂಟ್ರಾಕ್ಟ್
ಕಿಲ್ಲರ್ ರೀತಿ ವರ್ತಿಸಿದ್ದಾಳೆ. ಆಕೆಯೊಬ್ಬಳು ವಿಷಕನ್ಯೆ. ಸುಶಾಂತ್‌ರನ್ನು ಪ್ರೇಮದ ಬಲೆಗೆ ಬೀಳಿಸಿ, ಅವರ ಹಣವನ್ನೆಲ್ಲ ದೋಚಿದ್ದಾಳೆ. ಇದು ಆತ್ಮಹತ್ಯೆಯಲ್ಲ, ಕೊಲೆ. ಇದರಲ್ಲಿ ದೊಡ್ಡ ಗ್ಯಾಂಗ್ ಪಾಲ್ಗೊಂಡಿರುವಂತಿದೆ.
ಮಹೇಶ್ವರ್ ಹಜಾರಿ, ಜೆಡಿಯು ನಾಯಕ
ನ್ಯಾಯಾಂಗದಲ್ಲಿ ಮತ್ತು ದೇವರಲ್ಲಿ ನನಗೆ ನಂಬಿಕೆ ಇದೆ. ಕೆಲವೊಂದು ಟಿವಿ ಚಾನೆಲ್‌ಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ವರದಿ ಮಾಡಲಾಗುತ್ತಿದೆ. ಇದರ ಹೊರತಾಗಿಯೂ ನ್ಯಾಯ ಸಿಗಲಿದೆ ಎಂಬ ವಿಶ್ವಾಸ. ಸತ್ಯಕ್ಕೇ ಜಯವಾಗಲಿ.
ರಿಯಾ ಚಕ್ರವರ್ತಿ, ಬಾಲಿವುಡ್ ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.