ಸಕ್ರೀಯತೆಗೆ ಇನ್ನೊಂದು ಹೆಸರೇ ಸುಷ್ಮಾ

ಮೋದಿ ಅವರೇ ಮೆಚ್ಚಿಕೊಂಡಿದ್ದ ವ್ಯಕ್ತಿತ್ವ

Team Udayavani, Aug 7, 2019, 2:40 AM IST

sakreeya1

ಮಣಿಪಾಲ: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ, ಸಜ್ಜನ ರಾಜಕಾರಣಿ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ರಾಷ್ಟ್ರವೇ ಕಂಬನಿ ಮಿಡಿಯುತ್ತಿದೆ.

ಸಕ್ರೀಯ ಸ್ವಭಾವ
ಮೇಲ್ನೋಟಕ್ಕೆ ಆರೋಗ್ಯವಾಗಿದ್ದಂತೆ ಕಾಣುತ್ತಿದ್ದ ಸುಷ್ಮಾ ಅವರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಕಳೆದ ಸರಕಾರದಲ್ಲಿ ತಾವು ವಿದೇಶಾಂಗ ಖಾತೆ ಸಚಿವೆಯಾಗಿದ್ದ ಅವಧಿಯಲ್ಲಿ ಬಹುತೇಕ ರಾಷ್ಟ್ರಗಳಿಗೆ ಸುಷ್ಮಾ ಸ್ವರಾಜ್ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ತೆಳಿದ ಬಹುತೇಕ ರಾಷ್ಟ್ರಗಳಿಗೆ ಸುಷ್ಮಾ ಅವರು ತೆರಳಿದ್ದರು. ಮೋದಿ ಅವರು ಭೇಟಿ ನೀಡಲಿರುವ ಕೆಲವು ರಾಷ್ಟ್ರಗಳಿಗೆ ಮುಂಗಡವಾಗಿ ತೆರಳಿ ಕಾರ್ಯಕ್ರಮಗಳನ್ನು ಸಂಘಟಿಸಿ ಬರುತ್ತಿದ್ದರು. ಇಷ್ಟು ಮಾತ್ರವಲ್ಲದೇ ಪ್ರಧಾನಿಗಳ ಭೇಟಿ ಬಳಿಕ ನಡೆಯುವ ಬೆಳವಣಿಗೆಗಳ ಕುರಿತಾಗಿ ಹೆಚ್ಚು ಗಮನ ಹರಿಸುತ್ತಿದ್ದರು. ಪ್ರಧಾನಿಗಳ ಮಾತುಕತೆ ನಡೆದ ಬಳಿಕ ಸುಷ್ಮಾ ಅವುಗಳನ್ನು ಕಾರ್ಯಗತಗೊಳಿಸಲು ಉತ್ಸುಕರಾಗಿದ್ದರು. ಸುಷ್ಮಾ ಅವರೊಂದಿಗೆ ಅಂದು ಈಗಿನ ವಿದೇಶಾಂಗ ಸಚಿವ ಜಯ ಶಂಕರ್‌ ಅವರು, ವಿದೇಶಾಂಗ ಕಾರ್ಯದರ್ಶಿಯಾಗಿ ಸಹಕಾರ ನೀಡುತ್ತಿದ್ದರು. ಸುಷ್ಮಾ ಅವರಿಗೆ ಕಳೆದ ಸರಕಾರದ ಅವಧಿಯಲ್ಲಿಯೇ ಅನಾರೋಗ್ಯ ಕಾಡುತ್ತಿತ್ತು. ಆದರೂ ಕೆಲಸವನ್ನು ಪೂರೈಸಿದ್ದರು.

ಚುನಾವಣೆಯಿಂದ ದೂರ
ಎರಡನೇ ಅವಧಿಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ರಚನೆಯಾಗು ಸಂದರ್ಭದಲ್ಲಿ ಮೋದಿ ಅವರು ತಮ್ಮ ಕ್ಯಾಬಿನೆಟ್ ನಲ್ಲಿ ಮತ್ತೆ ಸುಷ್ಮಾ ಸ್ವರಾಜ್ ಅವರನ್ನು ಮಂತ್ರಿ ಮಾಡಲು ಅಭಿಲಾಷೆ ಹೊಂದಿದ್ದರು. ಆದರೆ ಸುಷ್ಮಾ ಅವರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸದೇ ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದರು.

ಮಂತ್ರಿಸ್ಥಾನ ನೋ ಎಂದಿದ್ದರು
ಸುಷ್ಮಾ ಸ್ವರಾಜ್ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲವಾದರೂ ಅವರನ್ನು ಮಂತ್ರಿ ಮಾಡುವ ವಿಶ್ಚಾಸ ಬಿಜೆಪಿ ನಾಯಕರಲ್ಲಿ ಇತ್ತು. ಇದಕ್ಕಾಗಿ ಹಲವು ನಾಯಕರು ಸುಷ್ಮಾ ಅವರನ್ನು ಸಂರ್ಕಿಸಿ ಮಂತ್ರಿಸ್ಥಾನ ಒಪ್ಪಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅನಾರೋಗ್ಯ ಕಾರಣದಿಂದ ಸುಷ್ಮಾ ಅವರು ಸಮ್ಮತಿಸಲಿಲ್ಲ. ಕೊನೆಗೆ ಬಿಜೆಪಿ ನಾಯಕರು ನರೇಂದ್ರ ಮೋದಿ ಮುಖಾಂತರ ಸುಷ್ಮಾಅವರ ಮನೆಗೆ ತೆರಳಿ ಅವರಲ್ಲಿ ಮತ್ತೆ ಮಂತ್ರಿ ಸ್ಥಾನದ ಮಾತುಕತೆಗೆ ಮುಂದಾದರು. ಇಲ್ಲೂ ಸುಷ್ಮಾ ಸ್ವರಾಜ್ ಅವರು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಯಾಕೆಂದರೆ ಅಷ್ಟು ಅನಾರೋಗ್ಯ ಅವರನ್ನು ಕಾಡುತ್ತಿತ್ತು. ಸುಷ್ಮಾ ಅವರ ಕೆಲಸದ ಶೈಲಿ ಮೋದಿ ಅವರಿಗೆ ಇಷ್ಟವಾಗಿತ್ತು.

ವೇದಿಕೆ ಕೆಳಗೆ ಕೂತ ಸುಷ್ಮಾ
ಕೇಂದ್ರ ಸಂಪುಟದ ಪ್ರಮಾಣ ವಚನ ಸಮಾರಂಭದಲ್ಲಿ ಸುಷ್ಮಾ ಅವರು ಕೊನೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಎಲ್ಲರಿಗೂ ನಮಿಸಿ ವೇದಿಕೆಯ ಕೆಳಗೆ ಕುಳಿತುಕೊಂಡಿದ್ದರು. ಇದು ಬಹುತೇಕ ಮಂದಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಯಾಕೆಂದರೆ ಎಲ್ಲರೂ ಸುಷ್ಮಾ ಸ್ವರಾಜ್ ಸಚಿವೆಯಾಗುತ್ತಾರೆ ಎಂದೇ ನಂಬಿದ್ದರು. ಆದರೆ ಬಿಜೆಪಿ ಸುಷ್ಮಾ ಸ್ವರಾಜ್ ಜತೆ ಕೆಲಸ ಮಾಡಿ ಅನುಭವವುಳ್ಳ ವಿದೇಶಾಂಗ ಕಾರ್ಯದರ್ಶಿ ಜಯಶಂಕರ್ ಅವರನ್ನು ಸುಷ್ಮಾ ಅಲಂಕರಿಸಿದ್ದ ವಿದೇಶಾಂಗ ಇಲಾಖೆಯ ಮಂತ್ರಿಯನ್ನಾಗಿ ಮಾಡಿತು.

ಕಷ್ಟಗಳಿಗೆ ಮಿಡಿಯುವ ಮನಸ್ಸು
ತಾವು ವಿದೇಶಾಂಗ ಇಲಾಖೆ ಸಚಿವೆಯಾಗಿದ್ದ ಅವಧಿಯಲ್ಲಿ ಸಾಗರೋತ್ತರ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಹಾಯ ಹಸ್ತವನ್ನು ಚಾಚಿದ್ದರು. ಯಾವುದೇ ದೇಶದಲ್ಲಿ ಭಾರತಿಯರು ಅಪಾಯದಲ್ಲಿ ಇದ್ದಾಗ ಅವರನ್ನು ಸುರಕ್ಷಿತವಾಗಿ ತವರಿಗೆ ಕರೆ ತರುವ ಕೆಲಸವನ್ನು ಸುಷ್ಮಾ ಮಾಡುತ್ತಿದ್ದರು. ವೀಸಾಗಳ ಸಮಸ್ಯೆಯಾದಾಗ ಅವುಗಳನ್ನು ತಕ್ಷಣ ಬಗೆಹರಿಸಿ ಕೊಟ್ಟ ಅದೆಷ್ಟೋ ಉದಾಹರಣೆಗಳಿವೆ. ಭಾರತೀಯರು ವಿದೇಶದಲ್ಲಿ ಅಪಘಾತಕ್ಕೆ ಒಳಗಾಗಿ ಪ್ರಾಣ ಹಾನಿ ಸಂಭವಿಸಿದರೆ, ಕುಟುಂಗಳಿಗೆ ಅಲ್ಲಿಗೆ ತೆರಳಲು ವೀಸಾ, ಮೃತ ಶರೀರವನ್ನು ಭಾರತಕ್ಕೆ ಕರೆ ತರಲು ಶೀಘ್ರವೇ ಪ್ರಯತ್ನಿಸಿದ ಅದೆಷ್ಟೋ ಉದಾಹರಣೆಗಳಿವೆ. ಜನ ಒಂದು ಟ್ವೀಟ್ ಮೂಲಕ ಮನವಿ ಮಾಡಿದರೆ ಸಾಕಿತ್ತು ಅದಕ್ಕೆ ತಕ್ಷಣ ಸ್ಪಂದಿಸಿ ಪರಿಹಾರದತ್ತ ಕಾರ್ಯಪ್ರವೃತರಾಗುತ್ತಿದ್ದರು.

ಪಾಕ್ ವಶದಲ್ಲಿರುವ ಕುಲ್ ಭೂಷನ್ ಜಾಧವ್ ಅವರನ್ನು ಬಿಡುಗಡೆ ಗೊಳಿಸಲು ಬಹಳ ಪ್ರಯತ್ನಿಸಿದ್ದರು. ಜಾಧವ್ ಅವರಿಗೆ ಗಲ್ಲು ಶಿಕ್ಷೆಯನ್ನು ಪಾಕ್ ವಿಧಿಸಿದಾಗ ಸುಷ್ಮಾ ಅಕ್ರೋಶ ವ್ಯಕ್ತಪಡಿಸಿದ್ದರು.

ಇನ್ನೇನಿದ್ದರೂ ಸುಷ್ಮಾ ನೆನಪು ಮಾತ್ರ.

ಟಾಪ್ ನ್ಯೂಸ್

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

Satish Jaraki

Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?

1-BP-Harish

BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

army

Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ

RG ಕರ್‌ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್‌ ಶಿಕ್ಷೆ ಪ್ರಕಟ

RG ಕರ್‌ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್‌ ರಾಯ್ ಗೆ ಜೀವಾವಧಿ ಶಿಕ್ಷೆ

ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ

CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ

Elephant Chasing Biker: ಆನೆ ದಾಳಿಯಿಂದ ಜಸ್ಟ್ ಎಸ್ಕೇಪ್, ಎದೆ ಜಲ್ ಎನಿಸುವ ವಿಡಿಯೋ ವೈರಲ್

Elephant Chasing Biker: ಆನೆ ದಾಳಿಯಿಂದ ಜಸ್ಟ್ ಎಸ್ಕೇಪ್, ಎದೆ ಜಲ್ ಎನಿಸುವ ವಿಡಿಯೋ ವೈರಲ್

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.