ಸುಷ್ಮಾ ನೆನ‌ಪು

Team Udayavani, Aug 8, 2019, 5:06 AM IST

p-39

ಚಾಕೊಲೇಟ್‌ ಕೇಕ್‌ ತರುತ್ತಿದ್ದರು
ಪ್ರತಿ ವರ್ಷ ನನ್ನ ಹುಟ್ಟಿದ ಹಬ್ಬಕ್ಕೆ ತಪ್ಪದೆ ಇಷ್ಟದ ಚಾಕೊಲೇಟ್‌ ಕೇಕ್‌ ಅನ್ನು ತರುತ್ತಿದ್ದರು ಎಂದು 91 ವಯಸ್ಸಿನ ಬಿಜೆಪಿ ಹಿರಿಯ ನಾಯಕ
ಎಲ್‌. ಕೆ. ಆಡ್ವಾಣಿ ನೆನಪಿಸಿ ಕೊಂಡಿದ್ದಾರೆ. ಮಹಿಳೆಯರಿಗೆ ಅವರು ಮಾದರಿಯಾಗಿದ್ದರು.ಅತ್ಯಂತ ಉತ್ತಮ ವಾಗ್ಮಿ. ಯಾವುದೋ ಘಟನೆಗಳನ್ನು ಅತ್ಯಂತ ಸ್ಪಷ್ಟವಾಗಿ ನೆನಪಿಟ್ಟುಕೊಂಡು ಅದನ್ನು ಅವರು ನಿಖರವಾಗಿ ವಿವರಿಸುತ್ತಿದ್ದ ಪರಿ ನನಗೆ ಅಚ್ಚರಿ ಎಂದು ಹೇಳಿದ್ದಾರೆ. ಸುಷ್ಮಾ ಸ್ವರಾಜ್‌ ದರ್ಶನಕ್ಕೆ ಬಂದಿದ್ದ ಆಡ್ವಾಣಿ ಗದ್ಗದಿತರಾರದು. ಅವರ ಪುತ್ರಿ ಪ್ರತಿಭಾ ಆಡ್ವಾಣಿ ದುಃಖ ತಾಳಲಾರದೆ ಸುಷ್ಮಾ ಪುತ್ರಿ ಬಾನ್ಸುರಿಯನ್ನು ತಬ್ಬಿಕೊಂಡು ಅತ್ತರು.

ಇದೇ ವೇಳೆ ಕಿರುತೆರೆ ನಟ ಕರಣ್‌ವೀರ್‌ ಬೊಹ್ರಾ ನಾನು ರಷ್ಯಾಕ್ಕೆ ತೆರಳಿದ್ದಾಗ, ಅಲ್ಲಿನ ವಿಮಾನ ನಿಲ್ದಾಣದ ಸಿಬ್ಬಂದಿ, ನನ್ನ ಪಾಸ್‌ಪೋರ್ಟ್‌ ಕೊಂಚ ಮುಕ್ಕಾಗಿದ್ದನ್ನು ಪ್ರಶ್ನಿಸಿ ಪ್ರಯಾಣಕ್ಕೆ ತಡೆ ಯೊಡ್ಡಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಅಗತ್ಯ ನೆರವು ನೀಡಿದ್ದರು ಎಂದು ನೆನೆಸಿಕೊಂಡಿದ್ದಾರೆ.

ತಾಯಿಯನ್ನು ಕಳೆದುಕೊಂಡಿದ್ದೇನೆ

“ನಾನಿಂದು ನನ್ನ ಮಾತೃಸ್ವರೂಪದ ಪೋಷಕರೊಬ್ಬರನ್ನು ಕಳೆದುಕೊಂಡಿದ್ದೇನೆ’. ವರ್ಷಗಳ ಹಿಂದೆ ಅಕಸ್ಮಾತ್ತಾಗಿ ಗಡಿ ದಾಟಿ ಪಾಕಿಸ್ಥಾನಕ್ಕೆ ತೆರಳಿ, 12 ವರ್ಷಗಳ ಕಾಲ ಅಲ್ಲೇ ಅನಾಥಾಲಯದಲ್ಲಿ ಬದುಕು ಸಾಗಿಸುತ್ತಿದ್ದ ಮೂಗ-ಕಿವುಡ ಯುವತಿ ಗೀತಾ, ಸುಷ್ಮಾ ಬಗ್ಗೆ ಹೇಳಿದ ಮಾತಿದು. ಪಾಕ್‌ನಲ್ಲಿದ್ದ ಆಕೆಯನ್ನು ಭಾರತಕ್ಕೆ ಮರಳಿ ತರಲು ಅಂದಿನ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾಜೀ ತೀವ್ರ ಕಾಳಜಿ ವಹಿಸಿ ಯಶಸ್ವಿಯಾಗಿದ್ದರು. ಅದರ ಫ‌ಲವಾಗಿ, ಆಕೆಯೀಗ ಇಂದೋರ್‌ನ ಎನ್‌ಜಿಒದ ಮೂಗ-ಕಿವುಡರ ಶಾಲೆಯಲ್ಲಿ ಓದುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ. ಜನ್ಮದಲ್ಲಿ ನೆನಪಿಡಬೇಕಾದ ಸಹಾಯ ಮಾಡಿರುವ ಅವರ ಅಗಲಿಕೆಗೆ ಗೀತಾ ಕಂಬನಿ ಮಿಡಿದಿದ್ದಾಳೆ.

ಕಂಬನಿ ಮಿಡಿದ ಬಾಣಸಿಗ ಖನ್ನಾ!

“ವಿಶ್ವವನ್ನೇ ಗೆದ್ದು ಬಾ ಮಗನೇ’ ಎಂದು ಸದಾ ಹರಸುತ್ತಿದ್ದ ಸುಷ್ಮಾ ಅಮ್ಮ ಇನ್ನೆಲ್ಲಿ? ಇದು ನ್ಯೂಯಾರ್ಕ್‌ನಲ್ಲಿರುವ ಬಾಣಸಿಗ ವಿಕಾಸ್‌ ಖನ್ನಾರ ಹೃದಯದಾಳದ ಕೂಗು. ಮಂಗಳವಾರ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಬಗ್ಗೆ ಅವರು ಟ್ವೀಟರ್‌ನಲ್ಲಿ ಹೀಗೆ ಹೇಳಿಕೊಂಡಿದ್ದಾರೆ. ಸ್ವರಾಜ್‌, ಯಾವಾಗ ನ್ಯೂಯಾರ್ಕ್‌ಗೆ ಬಂದರೂ, ಅವರಿಗಿಷ್ಟವಾದ ಅಡುಗೆಗಳನ್ನು ರುಚಿಕಟ್ಟಾಗಿ ಮಾಡಿ ಬಡಿಸುತ್ತಿದ್ದ ಖನ್ನಾ ಈಗ ತಾಯಿಯನ್ನು ಕಳೆದುಕೊಂಡ ವೇದನೆಯಲ್ಲಿ ಅದೆಲ್ಲವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನಗೆ ಅಡುಗೆ ಮಾಡಿ ಬಡಿಸುವ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್‌ ಅಮ್ಮ’ ಎಂದಿದ್ದಾರೆ. ಅವರ ಟ್ವೀಟ್‌, 9,500 ಲೈಕ್‌ ಮತ್ತು 1300ಕ್ಕಿಂತ ಹೆಚ್ಚು ರೀಟ್ವೀಟ್‌ಗೆ ಒಳಗಾಗಿದೆ.

ಪ್ರಧಾನಿಯಾಗಲಿ ಎಂದಿದ್ದ ಠಾಕ್ರೆ

“ಸುಷ್ಮಾ ಸ್ವರಾಜ್‌ ಪ್ರಧಾನಿಯಾಗಬೇಕೆಂದು ತಂದೆ ಬಾಳಾ ಸಾಹೇಬ್‌ ಠಾಕ್ರೆ ಬಯಸಿದ್ದರು’. ಹೀಗೆಂದು ಹೇಳಿದ್ದು ಶಿವಸೇನೆಯ ನಾಯಕ ಉದ್ಧವ್‌ ಠಾಕ್ರೆ. ಸುಷ್ಮಾ ನಿಧನಕ್ಕೆ ಪ್ರತಿಕ್ರಿಯಿಸಿರುವ ಅವರು, “ವೈಚಾರಿಕ ಭೇದವಿದ್ದರೂ ರಾಜಕೀಯ ನೇತಾರರಲ್ಲಿ ಸ್ನೇಹಮಯ ವಾತಾವರಣ ಇರುತ್ತಿದ್ದ ಕಾಲಘಟ್ಟ ಸುಷ್ಮಾಜೀ ಸಾವಿನೊಂದಿಗೆ ಮುಗಿಯಿತು ಎನಿಸುತ್ತಿದೆ ಎಂದಿರುವ ಅವರು, ನಮ್ಮ ತಂದೆ (ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್‌ ಠಾಕ್ರೆ) ಹಾಗೂ ಸುಷ್ಮಾ ನಡುವೆ ಆತ್ಮೀಯತೆಯಿತ್ತು. ಸುಷ್ಮಾಜೀಯಲ್ಲಿದ್ದ ವಾಕ್‌ ಚಾತುರ್ಯ, ರಾಜತಾಂತ್ರಿಕ ಗುಣಗಳನ್ನು ಗ್ರಹಿಸಿದ್ದ ತಂದೆ ಸುಷ್ಮಾ ಅವರು ಪ್ರಧಾನಿಯಾಗಲಿ ಎಂದು ಆಶಿಸಿದ್ದರು’ ಎಂದಿದ್ದಾರೆ.

ಪಾರ್ಟಿ ಕೊಡದೆ ಹೋದಿರಿ

“ಸುಷ್ಮಾ ದೀದಿ, ನೀವು ನಿಮ್ಮ ಪುತ್ರಿ ಬಾನ್ಸುರಿಯನ್ನು ಹಾಗೂ ನನ್ನನ್ನು ಒಂದೊಳ್ಳೆ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ ಪಾರ್ಟಿ ಕೊಡಿಸುತ್ತೇನೆ ಎಂದು ಹೇಳಿದ್ದಿರಿ. ಆ ಆಶ್ವಾಸನೆ ಪೂರ್ಣಗೊಳಿಸದೇ ತೆರಳಿದ್ದೀರಿ’ ಎಂದು ಸಚಿವೆ ಸ್ಮತಿ ಇರಾನಿ ಟ್ವೀಟ್‌ ಮಾಡಿದ್ದಾರೆ. ಈ ಮನಮುಟ್ಟುವ ಟ್ವೀಟ್‌ ವೈರಲ್‌ ಆಗಿದೆ. ಮತ್ತೂಂದು ಟ್ವೀಟ್‌ನಲ್ಲಿ, “ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುವುದೇ ನಾವು ಅವರಿಗೆ ತೋರಬಹುದಾದ ನೈಜ ಶ್ರದ್ಧಾಂಜಲಿ’ ಎಂದು ಬರೆದುಕೊಂಡಿದ್ದಾರೆ.

ಪಾಕ್‌ ಯುವತಿಗೆ ವೈದ್ಯ ಸೀಟು

ಸುಷ್ಮಾ ಸ್ವರಾಜ್‌ ಪಾಕಿಸ್ಥಾನ ಮೂಲದ ಹಿಂದೂ ಯುವತಿಗೆ ವಿರೋಧಗಳ ಮಧ್ಯೆಯೂ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಕೊಡಿಸಿದ್ದರು. ಜೈಪುರದಲ್ಲಿ ವಾಸವಿದ್ದ ಅವರು ನೀಟ್‌ ಬರೆಯಲು ಇಚ್ಛೆಪಟ್ಟಿ ದ್ದರು. ನನಗೆ ಅದೃಷ್ಟವಿದ್ದರೆ ವೈದ್ಯಕೀಯ ಸೀಟು ಪಡೆಯುತ್ತೇನೆ ಎಂದು ಕೋರಿದ್ದರು. ವಿದೇಶಿ ಪ್ರಜೆಯಾದ ಕಾರಣ ಅದಕ್ಕೆ ಅವಕಾಶ ಇರಲಿಲ್ಲ. ಅವರ ಮನವಿ ಸ್ವೀಕರಿಸಿದ್ದ ಸುಷ್ಮಾ ಸ್ವಂತ ಹೊಣೆಯಿಂದ ಜೈಪುರದ ಎಸ್‌ಎಂಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸಿ ದ್ದರು. ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರೂ, ಅವರು ಲೆಕ್ಕಿಸಲಿಲ್ಲ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.