ಬೀದಿಗೆ ಬಂದ ಗಂಡ ಹೆಂಡತಿ ಜಗಳ ; ನಡು ರಸ್ತೆಯಲ್ಲಿ ಪತಿಯ ರೇಂಜ್ ರೋವರ್ ಗೆ ಪತ್ನಿ ಅಟ್ಯಾಕ್!
Team Udayavani, Jul 13, 2020, 6:56 PM IST
ಮುಂಬಯಿ: ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದಕಪ್ಪು ಬಣ್ಣದ ದುಬಾರಿ ರೇಂಜ್ ರೋವರ್ ಕಾರಿಗೆ ಸ್ಮಾರ್ಟ್ ಲೇಡಿಯೊಬ್ಬಳು ಅಡ್ಡಲಾಗಿ ನಿಂತು ಕಾರನ್ನು ಮುಂದೆ ಹೋಗದಂತೆ ತಡೆಯಲು ಯತ್ನಿಸುತ್ತಿರುವ ಮತ್ತು ಡ್ರೈವರ್ ಸೀಟಿನ ಪಕ್ಕದ ವಿಂಡೋ ಗ್ಲಾಸನ್ನು ತೆರೆಯಲು ಪ್ರಯತ್ನಿಸುತ್ತಿರುವ ಮತ್ತು ಫೈನಲೀ ಕಾರಿನ ಬಾನೆಟ್ ಮೇಲೇರಿ ರಂಪಾಟ ನಡೆಸುತ್ತಿರುವ ವಿಡಿಯೋ ಒಂದನ್ನು ನೀವು ನೋಡಿರಬಹುದು.
ಹೌದು, ಈ ಒಂದು ವಿಡಿಯೋ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದೀಗ ಈ ವಿಡಿಯೋದ ಅಸಲಿಯತ್ತು ಬಯಲಿಗೆ ಬಂದಿದೆ. ವಿಷಯ ಏನಪ್ಪಾ ಅಂದ್ರೆ, ಇದು ಗಂಡ, ಹೆಂಡಿರ ಜಗಳ ನಡುಬೀದಿಗೆ ಬಂದು ಬಿದ್ದ ಕಾರಣ ಇಷ್ಟೆಲ್ಲಾ ರಂಪಾಟ ಉಂಟಾಗಿದೆ.
ಮುಂಬಯಿ ನಗರದಲ್ಲಿರುವ ಪೆಡರ್ ರಸ್ತೆಯಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ತನ್ನ ಗಂಡನ ಕಾರಿನಲ್ಲಿ ಮಹಿಳೆಯೊಬ್ಬಳು ಇದ್ದಾಳೆ ಎಂಬ ಅನುಮಾನದಿಂದ ಆ ಕಾರನ್ನು ತನ್ನ ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದ ಈ ಮಹಿಳೆ ಪೆಡರ್ ರಸ್ತೆಗೆ ಬರುತ್ತಿದ್ದಂತೆ ಸಿಗ್ನಲ್ ಬಿದ್ದಿದೆ.
ತಕ್ಷಣವೇ ತನ್ನ ಕಾರಿನಿಂದ ಇಳಿದ ಆ ಮಹಿಳೆ ಪಕದಲ್ಲಿದ್ದ ತನ್ನ ಗಂಡನ ರೇಂಜ್ ರೋವರ್ ಕಾರಿನ ಎದುರು ಬಂದು ನಿಂತಿದ್ದಾಳೆ. ಹಾಗೂ ನಡು ರಸ್ತೆಯಲ್ಲೇ ಸೀನ್ ಕ್ರಿಯೇಟ್ ಮಾಡುತ್ತಾಳೆ.
ವಾಹನ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದರೂ ಈಕೆಯ ರಂಪಾಟ ನಿಲ್ಲುವುದಿಲ್ಲ. ಈಕೆಯ ಮನ ಒಲಿಸುವಲ್ಲಿ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರೂ ಸಹ ವಿಫಲರಾಗುತ್ತಾರೆ.
ಈಕೆಯ ಪ್ರತಾಪಕ್ಕೆ ಹೆದರಿದ ಪತಿರಾಯ ಮಾತ್ರ ತನ್ನ ಕಾರಿನಿಂದ ಕೆಳಗೆ ಇಳಿಯುವದೇ ಇಲ್ಲ! ಪತಿಯ ಕಾರಿನ ಬಾನೆಟ್ ಏರಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಹಿಳೆಯತ್ತ ತನ್ನ ಚಪ್ಪಲಿ ಬಿಚ್ಚಿ ಗ್ಲಾಸ್ ಮೇಲಿನಿಂದಲೇ ಹೊಡೆಯುತ್ತಾಳೆ ಈ ಗಟ್ಟಿಗಿತ್ತಿ!
ನಡುರಸ್ತೆಯಲ್ಲೇ ತನ್ನ ಪತ್ನಿಯ ರೌದ್ರಾವತಾರವನ್ನು ನೋಡಿದ ಈ ಪತಿರಾಯ ಆವತ್ತು ಮನೆಗೆ ಹೋಗಿರೋದು ಮಾತ್ರ ಡೌಟೇ..!
ಈ ಘಟನೆಯ ಬಳಿಕ ಸ್ಥಳದಲ್ಲಿದ್ದ ಪೊಲೀಸರು ಎರಡೂ ಕಾರುಗಳನ್ನು ಮತ್ತು ಪತಿ, ಪತ್ನಿ ಹಾಗೂ ‘ಆಕೆ’ಯನ್ನು ಹತ್ತಿರದ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ. ಮತ್ತು ಸಾರ್ವಜನಿಕ ಸ್ಥಳದಲ್ಲಿ ವಾಹನ ಸಂಚಾರಕ್ಕೆ ತೊಂದರೆ ನೀಡಿದ ಕಾರಣಕ್ಕೆ ರಾದ್ದಾಂತ ಸೃಷ್ಟಿಸಿದ ಮಹಿಳಗೆ ದಂಡ ವಿಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ.
#Watch: मुंबई के पेडर रोड पर बेहद अलग नजर देखने को मिला जब बीच सड़क एक पत्नी ने अपने पति को उसकी गर्लफ्रेंड के साथ रंगेहाथों पकड़ लिया। इस दौरान सड़क पर लंबा जाम लग गया।#ViralVideo #Mumbai pic.twitter.com/CuAzMHflTn
— Hindustan (@Live_Hindustan) July 13, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.