Nagpur; ಮತ್ತೆ ತಾಯಿಯ ಹುಡುಕಾಟಕ್ಕಿಳಿದ ಸ್ವೀಡಿಷ್ ಮಹಿಳೆ: ಏನಿದು ಸ್ಟೋರಿ ?
Team Udayavani, Apr 3, 2024, 10:31 AM IST
ನಾಗ್ಪುರ: ಕರುಳ ಬಳ್ಳಿಯ ಸಂಬಂಧ ಎಲ್ಲಕ್ಕಿಂತ ದೊಡ್ಡದು. ಇದಕ್ಕೆ ಸಾಕ್ಷಿ ಎಂಬಂತೆ ಸಿನಿಮಾವೊಂದರ ಕಥೆಗೆ ಪ್ರೇರಣೆಯಾಗಬಲ್ಲ ಘಟನೆಯಲ್ಲಿ ಸ್ವೀಡಿಷ್ ಪ್ರಜೆಯಾಗಿರುವ ಪಟ್ರೀಷಿಯಾ ಎರಿಕ್ಸನ್ ನಾಗ್ಪುರಕ್ಕೆ ಬಂದು ಗಲ್ಲಿಗಲ್ಲಿಗಳಲ್ಲಿ ತನ್ನ ಹೆತ್ತ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಾಲ್ಕು ದಶಕಗಳ ಹಿಂದೆ ಫೆಬ್ರವರಿ 1983 ರಲ್ಲಿ ನಾಗ್ಪುರದ ಡಾಗಾ ಆಸ್ಪತ್ರೆಯಲ್ಲಿ ಪಟ್ರೀಷಿಯಾ ಜನಿಸಿದ್ದರು. ಆಬಳಿಕ ಆಕೆಯನ್ನು ಒಂದು ವರ್ಷದ ವರೆಗೆ ಅನಾಥಾಶ್ರಮದಲ್ಲಿ ಸಲಹಲಾಗಿತ್ತು. ಒಂದು ವರ್ಷದ ನಂತರ ಸ್ವೀಡಿಷ್ ದಂಪತಿಗಳು ದತ್ತು ಪಡೆದಿದ್ದರು.
ಇದು ನಾಗ್ಪುರಕ್ಕೆ ಪಟ್ರೀಷಿಯಾ ಎರಿಕ್ಸನ್ ಅವರ ಎರಡನೇ ಭೇಟಿಯಾಗಿದೆ. ತನ್ನ ಹುಡುಕಾಟದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ, ಆಕೆ ತನ್ನ ಜನ್ಮ ನೀಡಿದ ತಾಯಿಯನ್ನು ಹುಡುಕಲು ನಿರ್ಧರಿಸಿದ್ದಾರೆ. ಅವಳು ತನ್ನ ದತ್ತು ಪಡೆದ ಪೋಷಕರಿಗೆ ಕೃತಜ್ಞಳಾಗಿದ್ದು, ತನ್ನ ಜೈವಿಕ ತಾಯಿ,ತಂದೆಯೊಂದಿದೆ ಸಂಪರ್ಕ ಸಾಧಿಸಲು ಪಣತೊಟ್ಟಿದ್ದಾರೆ. ವಕೀಲೆ ಅಂಜಲಿ ಪವಾರ್ ಎನ್ನುವವರು ಪಟ್ರೀಷಿಯಾ ಎರಿಕ್ಸನ್ ಅವರಿಗೆ ಭಾವನಾತ್ಮಕ ಸಂಬಂಧದ ಅನ್ವೇಷಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸೋಮವಾರ, ಪೆಟ್ರೀಷಿಯಾ ಅನಾಥಾಶ್ರಮಕ್ಕೂ ಭೇಟಿ ನೀಡಿ ವಿವರಗಳನ್ನು ಪಡೆಯಲು ಪ್ರಯತ್ನಿಸಿದ್ದಾರೆ.
ಅಂಜಲಿ ಪವಾರ್ ಮಾತನಾಡಿ “ನಾವು ಪೆಟ್ರೀಷಿಯಾ ಅವರ ತಾಯಿಯ ಹುಡುಕಾಟದಲ್ಲಿ ಸಹಾಯ ಮಾಡುತ್ತಿದ್ದೇವೆ. 1983 ರಲ್ಲಿ ಶಾಂತಿನಗರದಲ್ಲಿ ವಾಸಿಸುತ್ತಿದ್ದವರು, ಶಾಂತಾ ಮತ್ತು ರಾಮದಾಸ್ ಅವರ ಬಗ್ಗೆ ತಿಳಿದಿರುವವರು ಮುಂದೆ ಬರಬೇಕು. ನಮಗೆ ಸಹಾಯ ಮಾಡಿ. ಪೆಟ್ರೀಷಿಯಾ ತನ್ನ ತಾಯಿಯನ್ನು ಒಮ್ಮೆ ಭೇಟಿಯಾಗಲು ಬಯಕೆ ಹೊಂದಿದ್ದಾರೆ” ಎಂದು ಮನವಿ ಮಾಡಿದ್ದಾರೆ.
ವಿದೇಶಿ ಮಹಿಳೆಯೊಬ್ಬರು ಭಾರತದಲ್ಲಿ ತನ್ನ ಜೈವಿಕ ಪೋಷಕರನ್ನು ಹುಡುಕುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷದ ಡಿಸೆಂಬರ್‌ನಲ್ಲಿ, ಸ್ವಿಸ್ ಮಹಿಳೆ ವಿದ್ಯಾ ಫಿಲಿಪ್ಪನ್ ಕೂಡ ಮುಂಬೈನಲ್ಲಿ ತನ್ನ ಜೈವಿಕ ತಾಯಿಯನ್ನು ಹುಡುಕುವ ಅನ್ವೇಷಣೆಯಲ್ಲಿದ್ದರು. 2023 ರ ಹೊತ್ತಿಗೆ, ಒಂದು ದಶಕದ ಹುಡುಕಾಟ ನಡೆಸಿದ್ದರು.
ಫಿಲಿಪ್ಪನ್ 1996, ಫೆಬ್ರವರಿ 8ರಂದು ಜನಿಸಿದ್ದರು. ತಾಯಿ ಅವಳನ್ನು ಮಿಷನರೀಸ್ ಆಫ್ ಚಾರಿಟಿಯಲ್ಲಿ ತೊರೆದಿದ್ದರು. ನಂತರ ಆಕೆಯನ್ನು 1997 ರಲ್ಲಿ ಸ್ವಿಸ್ ದಂಪತಿಗಳು ದತ್ತು ಪಡೆದು ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದಿದ್ದರು.
#WATCH | Nagpur, Maharashtra: Swedish National Patricia Eriksson comes to Nagpur to search for her biological mother.
She says, “The kids in school started to explain that they have their mother’s hair and father’s nose. Then I realised I couldn’t do the same… From a child’s… pic.twitter.com/bcyXL4se6o
— ANI (@ANI) April 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.