ಒಡಿಶಾ ಜತೆ ಸಿಹಿ ಸಮರ: ಬಂಗಾಲಕ್ಕೆ ರಸಗುಲ್ಲ !

Team Udayavani, Nov 15, 2017, 6:00 AM IST

rasgulla.jpg

ಕೋಲ್ಕತಾ/ಚೆನ್ನೈ: ರಸಗುಲ್ಲ ನಮ್ಮ ರಾಜ್ಯದಲ್ಲಿಯೇ ಮೊದಲು ಸಿದ್ಧವಾದದ್ದು’ ಹೀಗೆಂದು ಎರಡು ವರ್ಷಗಳಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಲ ಕೋಳಿ ಜಗಳ ಮಾಡಿಕೊಳ್ಳುತ್ತಿದ್ದವು. ಈಗ ಅವೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ರಸಗುಲ್ಲ ಪಶ್ಚಿಮ ಬಂಗಾಲದ ಸಾಂಪ್ರ ದಾಯಿಕ ತಿನಿಸು ಎಂದು ಚೆನ್ನೈಯಲ್ಲಿರುವ ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ಸಂಸ್ಥೆ ತಿಳಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಬೆಳವಣಿಗೆ ಖುಷಿ ತಂದಿದೆ.

ಈ “ಸಿಹಿ ಸಮರ’ದ ಹಿಂದೆ 2 ವರ್ಷಗಳ ರೋಚಕ ಕತೆಯಿದೆ. 2015ರಲ್ಲಿ ಒಡಿಶಾ ಸರಕಾರ ರಸಗುಲ್ಲವನ್ನು  ಸಾಂಪ್ರದಾಯಿಕ ಸಿಹಿಯೆಂದು ಘೋಷಿಸಲು ಮುಂದಾಯಿತು. ಅದರ ವಿರುದ್ಧ ಪಶ್ಚಿಮ ಬಂಗಾಲ ಸರಕಾರ ಆಕ್ಷೇಪ ಮಾಡಿ, ತಗಾದೆ ತೆಗೆಯಿತು. ಆದರೆ ಹಠಬಿಡದ ಒಡಿಶಾ, ರಸಗುಲ್ಲ ಮೂಲವನ್ನು ಕೆದಕಲು ಹಲವು ಸಮಿತಿಗಳನ್ನು ರಚಿಸಿತು. ಜು. 30ರಂದು “ರಸಗುಲ್ಲ ದಿನ’ ಎಂದು  ಆಚರಿಸುವುದಾಗಿಯೂ ಘೋಷಿಸಿತು.

ಇದಕ್ಕೆ ಪ್ರತಿಯಾಗಿ, ಪಶ್ಚಿಮ ಬಂಗಾಲವೂ ರಸಗುಲ್ಲ ಮೂಲ ಪತ್ತೆಗೆ ಸಮಿತಿ ರಚಿಸಿತು. 1868ರಲ್ಲಿ ನಬೀನ್‌ ಚಂದ್ರದಾಸ್‌ ಎಂಬ ಪ್ರಖ್ಯಾತ ಬಾಣಸಿಗ ಅದನ್ನು ಆವಿಷ್ಕರಿಸಿದರು ಎನ್ನುವ ಅಂಶವನ್ನು ಕಂಡುಕೊಂಡಿತು. ಜತೆಗೆ ಪಶ್ಚಿಮ ಬಂಗಾಲ ಮತ್ತು ಒಡಿಶಾ ಜಿಐ ರಿಜಿಸ್ಟ್ರಿ ಕಚೇರಿಗೆ ರಸಗುಲ್ಲ ಮೇಲೆ ತಮ್ಮ ಹಕ್ಕುಸ್ವಾಮ್ಯ ಸಾಧಿಸಲು ಅಹವಾಲು ಸಲ್ಲಿಸಿದ್ದವು.

ಒಡಿಶಾ ಮುಂದಿಟ್ಟಿದ್ದ  ವಾದವೇನು ?
“ರಸಗುಲ್ಲ’ ತನ್ನದೆಂದು ಹೇಳಲು ಒಡಿಶಾ ಸರಕಾರ ಪುರಾಣದ ಕಥೆಯೊಂದನ್ನು ಆಧಾರವಾಗಿಟ್ಟುಕೊಂಡಿತ್ತು. ಒಡಿಶಾದಲ್ಲಿರುವ ಪುರಿಯ ಜಗನ್ನಾಥ ದೇಗುಲದಲ್ಲಿ ನೆಲೆನಿಂತಿದ್ದ ಶ್ರೀ ಜಗನ್ನಾಥನು ತನ್ನ ಪತ್ನಿಯಾದ ಲಕ್ಷ್ಮೀಯ ಸಮ್ಮತಿಯಿಲ್ಲದೇ 9 ದಿನಗಳ ರಥಯಾತ್ರೆಗೆ ಹೋಗಿಬಂದಿದ್ದ. ಆಗ ಮುನಿಸಿಕೊಂಡಿದ್ದ ಲಕ್ಷ್ಮೀಯು ದೇಗುಲದ ಬಾಗಿಲನ್ನು ತೆರೆಯದೆ ಸತಾಯಿಸಿದ್ದಳು. ಆಕೆಯ ಮನವೊಲಿಸುವ ಸಲುವಾಗಿ ರಸಗುಲ್ಲ ಸೃಷ್ಟಿಸಿಕೊಟ್ಟಿದ್ದ. ಇದರ ಕುರುಹಾಗಿ ಈಗಲೂ ಪುರಿ ದೇಗುಲದಲ್ಲಿ  ನೈವೇದ್ಯಕ್ಕೆ ರಸಗುಲ್ಲಗಳನ್ನೇ ಇಡುವ ಸಂಪ್ರದಾಯ ಶತಮಾನಗಳಿಂದ ಚಾಲ್ತಿಯಲ್ಲಿದೆ. ಹಾಗಾಗಿ, ಈ ಸಿಹಿ ನಮ್ಮದೇ ಎಂದು ಒಡಿಶಾ ವಾದ ಮಾಡಿತ್ತು.

ಟಾಪ್ ನ್ಯೂಸ್

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.