ಮಹಿಳಾ ಡೆಲಿವರಿ ಏಜೆಂಟ್‌ಗಳ ಮನ ಮುಟ್ಟಿದ ಸ್ವಿಗ್ಗಿ
Team Udayavani, Oct 22, 2021, 9:17 PM IST
ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ, ತಮ್ಮ ಸಂಸ್ಥೆಯ ಮಹಿಳಾ ಡೆಲಿವರಿ ಏಜೆಂಟ್‌ಗಳಿಗಾಗಿ ವಿಶೇಷ ಸೌಲಭ್ಯವೊಂದನ್ನು ಆರಂಭಿಸಿದೆ.
ಡೆಲಿವರಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ತಿಂಗಳ ಋತುಸ್ರಾವದ ಸಮಯದಲ್ಲಿ 2 ದಿನಗಳ ಸಂಬಳ ಸಹಿತ ರಜೆ ನೀಡುವುದಾಗಿ ಘೋಷಿಸಿದೆ.
ರಜೆಗೆ ಕಾರಣ ಕೇಳದಿರುವ ನಿರ್ಧಾರವನ್ನೂ ಸಂಸ್ಥೆ ಮಾಡಿದೆ. ಈ ಹಿಂದೆ ಶೆಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಸ್ವಿಗ್ಗಿ ತನ್ನ ಸಂಸ್ಥೆಯಲ್ಲಿ ಸದ್ಯ 1000 ಮಹಿಳಾ ವಿತರಕ ಸಿಬ್ಬಂದಿಗಳಿದ್ದು, ಇವರಿಗೆ ಆರಾಮದಾಯಕ ವಾತಾವರಣ ಸೃಷ್ಟಿಸಲು ಈ ನಿರ್ಣಯ ಕೈಗೊಂಡಿದೆ.
ಇದನ್ನೂ ಓದಿ:8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್!
ಅಷ್ಟೇ ಅಲ್ಲಾ ಸ್ವಿಗ್ಗಿ ದೇಶದ ಹಲವಾರು ರೆಸ್ಟೋರೆಂಟ್ ಹಾಗೂ ಪೆಟ್ರೋಲ್ ಬಂಕ್ ಗಳಲ್ಲಿ ಮಹಿಳಾ ಹಾಗೂ ಪುರುಷ ಆಹಾರ ವಿತರಕರಿಗೆ ಟಾಯ್ಲೆಟ್ ಪ್ರವೇಶ ಒದಗಿಸಲು ಅನುಮತಿ ಪಡೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.