Ustad; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ
ತಬಲದೊಂದಿಗೆ ಮಾತನಾಡುತ್ತಿದ್ದ ಸಂಗೀತ ಲೋಕದ ದಿಗ್ಗಜ... ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
Team Udayavani, Dec 15, 2024, 10:13 PM IST
ನವದೆಹಲಿ: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರು ರವಿವಾರ(ಡಿ15) ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಗಳ ಕಾರಣದಿಂದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು ಅವರ ಸ್ನೇಹಿತ ಮತ್ತು ಕೊಳಲು ವಾದಕ ರಾಕೇಶ್ ಚೌರಾಸಿಯಾ ಹೇಳಿದ್ದರು. “ಜಾಕೀರ್ ಹುಸೇನ್ ಅವರು ಅಸ್ವಸ್ಥರಾಗಿದ್ದಾರೆ ಮತ್ತು ಇದೀಗ ಐಸಿಯುನಲ್ಲಿ ದಾಖಲಾಗಿದ್ದಾರೆ. ನಾವೆಲ್ಲರೂ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿದ್ದೇವೆ” ಎಂದು ಚೌರಾಸಿಯಾ ಪಿಟಿಐಗೆ ತಿಳಿಸಿದ್ದರು.
”ತಬಲಾವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದ 73 ವರ್ಷದ ಜಾಕೀರ್ ಹುಸೇನ್ ಅವರು ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು, ರಕ್ತದೊತ್ತಡ ಸಮಸ್ಯೆ ಇತ್ತು” ಎಂದು ಹುಸೇನ್ ಅವರ ಮ್ಯಾನೇಜರ್ ನಿರ್ಮಲಾ ಬಚಾನಿ ಹೇಳಿದ್ದರು.
ಆರು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಜಾಕೀರ್ ಹುಸೇನ್ ಅವರ ಹಲವಾರು ಹೆಸರಾಂತ ಅಂತಾರಾಷ್ಟ್ರೀಯ ಮತ್ತು ಭಾರತೀಯ ಕಲಾವಿದರೊಂದಿಗೆ ಸಾಥ್ ನೀಡಿದ್ದಾರೆ.
1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಜಾಕೀರ್ ಹುಸೇನ್ ಭಾಜನರಾಗಿದ್ದರು.
ಜಾಕೀರ್ ಹುಸೇನ್ ಅಲ್ಲಾರಕ ಖುರೇಷಿ ಅವರು 9 ಮಾರ್ಚ್ 1951 ರಂದು ಮುಂಬೈನಲ್ಲಿ ಜನಿಸಿದ್ದರು. ಹುಸೇನ್ ಕಥಕ್ ನೃತ್ಯಗಾರ್ತಿ ಮತ್ತು ಶಿಕ್ಷಕಿ ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾಗಿದ್ದು, ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್
Udupi: ಗಾಜಿನ ಉದ್ಯಮಿ ನಾಪತ್ತೆ; ದೂರು ದಾಖಲು
Puttur: ಮರದ ವ್ಯಾಪಾರಿ ಆತ್ಮಹ*ತ್ಯೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.