ತಾಜ್‌ಮಹಲ್ ದೇಶದ್ರೋಹಿಯ ಪಾಪದ ಕೂಸು: ಸೋಮ್ ವಿವಾದ
Team Udayavani, Oct 17, 2017, 6:35 AM IST
ಲಕ್ನೋ: ಉತ್ತರಪ್ರದೇಶ ಸರಕಾರದ ಪ್ರವಾಸಿ ತಾಣಗಳ ಪಟ್ಟಿಯಿಂದ ವಿಶ್ವವಿಖ್ಯಾತ ತಾಜ್‌ಮಹಲ್ ಅನ್ನು ಹೊರಗಿಟ್ಟು ಇತ್ತೀಚೆಗಷ್ಟೇ ಅಲ್ಲಿನ ಸರಕಾರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಈ ವಿವಾದದ ಕಿಚ್ಚಿಗೆ ಉತ್ತರ ಪ್ರದೇಶದ ಸರ್ದಾನಾ ಕ್ಷೇತ್ರದ ಬಿಜೆಪಿ ಶಾಸಕ ಸಂಗೀತ್ ಸೋಮ್ ತುಪ್ಪ ಸುರಿದಿದ್ದಾರೆ. ಇದು ರಾಷ್ಟ್ರ ರಾಜಕೀಯದಲ್ಲಿ ಏಟು- ತಿರುಗೇಟುಗಳ ಯುದ್ಧಕ್ಕೆ ಕಾರಣವಾಗಿದೆ.
ಮೀರತ್‌ನ ರ್ಯಾಲಿಯಲ್ಲಿ ಮಾತಾಡಿದ ಸಂಗೀತ್ ಸೋಮ್, “”ರಾಜ್ಯ ಸರಕಾರವು ಪ್ರವಾಸಿ ತಾಣಗಳ ಪಟ್ಟಿ ಯಿಂದ ತಾಜ್ ಮಹಲ್ ಅನ್ನು ಹೊರಗಿಟ್ಟಿದ್ದಕ್ಕೆ ಹಲವಾರು ಮಂದಿ ನೊಂದಿ ದ್ದರು. ಅಸಲಿಗೆ ನಾವು ಯಾವ ಚರಿತ್ರೆಯ ಬಗ್ಗೆ ಮಾತ ನಾಡುತ್ತಿದ್ದೇವೆ? ಈ ತಾಜ್‌ಮಹಲ್ ಒಬ್ಬ ದೇಶದ್ರೋಹಿ ಕಟ್ಟಿದ ಕಟ್ಟಡ. ಅಷ್ಟೇ ಅಲ್ಲ, ಹಿಂದೂಗಳ ಮಾರಣ ಹೋಮಕ್ಕೆ ತುದಿಗಾಲಲ್ಲಿ ನಿಂತಿದ್ದ ರಕ್ತಪಿಪಾಸುವೊಬ್ಬ ನಿರ್ಮಿಸಿದ ಕಟ್ಟಡ. ಇಂಥ ಕಟ್ಟಡವನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಹೊರಗಿಟ್ಟಿದ್ದಕ್ಕೆ ನಾವ್ಯಾಕೆ ಮರುಗಬೇಕು?” ಎಂದು ಪ್ರಶ್ನಿಸಿ ದ್ದಾರೆ. ಇದೇ ವೇಳೆ, ವಿವಾದದಿಂದ ದೂರ ಉಳಿಯಲು ಯತ್ನಿಸಿರುವ ಉತ್ತರಪ್ರದೇಶ ಸರಕಾರ, “ಅದು ಸೋಮ್ ಅವರ ವೈಯಕ್ತಿಕ ಹೇಳಿಕೆ. ತಾಜ್‌ಮಹಲ್ ಭಾರತದ ಭವ್ಯ ಪರಂಪರೆಯ ಪ್ರತೀಕ’ ಎಂದು ಸ್ಪಷ್ಟನೆ ನೀಡಿದೆ.
ಸೋಮ್ ಇಂಥ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2013ರಲ್ಲಿ ಇವರು ನೀಡಿದ್ದ ಹೇಳಿಕೆಯು ಮತೀಯ ಗಲಭೆಗೆ ಕಾರಣವಾಗಿ, ಗಲಭೆಯಲ್ಲಿ 60 ಮಂದಿ ಮೃತಪಟ್ಟಿದ್ದರು. ಇದೀಗ, ಮೀರತ್‌ನಲ್ಲಿ ಅವರು ನೀಡಿರುವ ಹೇಳಿಕೆಗೆ, ಸೋಮವಾರ, ಹೈದರಾಬಾದ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ಹಲವಾರು ಚಾರಿತ್ರಿಕ ಕಟ್ಟಡಗಳ ಇತಿಹಾಸವನ್ನು ಕೆದಕಿ, ಸಂಗೀತ್ ಸೋಮ್‌ಗೆ ಪ್ರತ್ಯುತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇವರಿಬ್ಬರ ನಡುವಿನ ಮಾತುಗಳ ಜಟಾಪಟಿ ಹೀಗಿದೆ.
ಸಂಗೀತ್ ಸೋಮ್ ಹೇಳಿದ್ದೇನು?
– ತಾಜ್ ಮಹಲ್ ಕಟ್ಟಿಸಿದ ಷಹಜಹಾನ್ ಒಬ್ಬ ದೇಶದ್ರೋಹಿ. ಅಕºರ್, ಬಾಬರ್, ಔರಂಗ ಜೇಬ್‌ನಂಥ ಮೊಘಲ್ ದೊರೆಗಳ ಹೆಸರನ್ನು ಇತಿಹಾಸದ ಪುಟದಿಂದ ಕಿತ್ತುಹಾಕುತ್ತೇವೆ.
– ಷಹಜಹಾನ್ ಸುಲ್ತಾನ ನಾಗಲು ಅಡ್ಡಿಯಾ ಗಿದ್ದ ತನ್ನ ಇಳಿವಯಸ್ಸಿನ ತಂದೆಯನ್ನೇ ಜೈಲಿಗೆ ಅಟ್ಟಿದವನು. ಹಿಂದೂ ಗಳ ಸಾಮೂ ಹಿಕ ಹತ್ಯಾಕಾಂಡಗಳನ್ನು ಬಯಸುತ್ತಿದ್ದವನು.
– ಇಂಥ ಚರಿತ್ರೆಯುಳ್ಳ ವ್ಯಕ್ತಿ ನಿರ್ಮಿಸಿದ ಕಟ್ಟಡವನ್ನು ನಾವು ಮೆಚ್ಚಿಕೊಳ್ಳುವುದು ವಿಷಾದನೀಯ. ಇಂಥ ಚರಿತ್ರೆಯನ್ನು ನಾವು ಬದಲಾಯಿಸಬೇಕಿದೆ.
– ಈ ದೇಶದ್ರೋಹಿಗಳ ಹೆಸರನ್ನು ನಾವು ಚರಿತ್ರೆಯಿಂದ ಅಳಿಸಿಹಾಕಬೇಕಿದೆ. ಅಂಥ ವರ ಚರಿತ್ರೆ ತಿಳಿಯುವ ಅವಶ್ಯಕತೆಯಿಲ್ಲ. ತಾಜ್‌ಮಹಲ್ ದೇಶದ ಇತಿಹಾಸದ ಕಪ್ಪುಚುಕ್ಕೆ
– ನಮ್ಮ ಶಾಲಾ ಪಠ್ಯಗಳಲ್ಲಿ ಇನ್ನು ಮಹಾರಾ ಣಾ ಪ್ರತಾಪ್, ಶಿವಾಜಿಯಂಥವರ ಚರಿತ್ರೆ, ದೇಶಪ್ರೇಮಗಳನ್ನು ಮಕ್ಕಳಿಗೆ ಕಲಿಸಬೇಕಿದೆ.
ಒವೈಸಿ ನೀಡಿರುವ ತಿರುಗೇಟೇನು?
– ಪ್ರತಿ ವರ್ಷ ಸ್ವಾತಂತ್ರೊéàತ್ಸವದ ವೇಳೆ ಪ್ರಧಾನಿ ಬಾವುಟ ಹಾರಿಸುವ ಕೆಂಪುಕೋಟೆಯೂ ನೀವು ಹೇಳುವ “ದೇಶದ್ರೋಹಿ’ಯದ್ದೇ ನಿರ್ಮಾಣ.
– ದೇಶದ್ರೋಹಿಯ ನಿರ್ಮಾಣವೆಂದ ಮಾತ್ರಕ್ಕೆ ಮುಂದಿನ ಸ್ವಾತಂತ್ರೊéàತ್ಸವದಿಂದ ಅಲ್ಲಿ ತ್ರಿವರ್ಣ ಧ್ವಜದ ಹಾರಾಟ ನಿಲ್ಲಿಸುವಿರಾ?
– ಭಾರತಕ್ಕೆ ಬರುವ ವಿದೇಶಿ ಗಣ್ಯರನ್ನು ಪ್ರಧಾನಿ, ರಾಷ್ಟ್ರಪತಿ ಭೇಟಿ ಮಾಡುವ ದಿಲ್ಲಿಯ “ಹೈದರಾಬಾದ್ ಹೌಸ್’ ಕೂಡಾ ಆ “ದೇಶದ್ರೋ ಹಿ’ಗಳ ನಿರ್ಮಾಣವೇ.
– ಇನ್ನು ಮುಂದೆ ಹೈದರಾಬಾದ್ ಹೌಸ್‌ನಲ್ಲಿ ವಿದೇಶಿ ಗಣ್ಯರೊಂದಿಗೆ ಮಾತುಕತೆ, ಸಭೆ ನಡೆಸುವುದನ್ನು ನಿಲ್ಲಿಸುತ್ತೀರಾ?
– ತಾಜ್‌ಮಹಲ್ ಅನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಡುವುದಾದರೆ, ಯುನೆಸ್ಕೋ ಬಳಿ ತೆರಳಿ ಅದಕ್ಕೆ ನೀಡ ಲಾಗಿರುವ ವಿಶ್ವ ಪಾರಂಪರಿಕ ಸ್ಥಾನಮಾನ ಹಿಂಪಡೆಯುವಂತೆ ಸೂಚಿಸುವಿರಾ?
ಸೋಮ್ ಹೇಳಿಕೆ ಕುರಿತು ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಪ್ರತಿಯೊಬ್ಬರೂ ಅವರವರ ಅಭಿಪ್ರಾಯ ಹೊಂದಿರುತ್ತಾರೆ. ಆದರೆ, ಭಾರತದಲ್ಲಿನ ಮುಸ್ಲಿಮರ ಆಡಳಿತವು ಅತ್ಯಂತ ಕ್ರೌರ್ಯ , ಹೋಲಿಸಲಸಾಧ್ಯ ಅಸಹಿಷ್ಣುತೆಯಿಂದ ಕೂಡಿತ್ತು ಎನ್ನುವುದು ನಿಜ.
– ಜಿ.ವಿ.ಎಲ್. ನರಸಿಂಹ ರಾವ್, ಬಿಜೆಪಿ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.