ತಾಜ್‌ಮಹಲ್ ಮೇಲೂ ಐಸಿಸ್ ಉಗ್ರರ ಕಣ್ಣು
Team Udayavani, Mar 18, 2017, 3:50 AM IST
ಹೊಸದಿಲ್ಲಿ: ಪ್ರೇಮಸೌಧ ತಾಜ್‌ಮಹಲ್‌ಗೆ ಉಗ್ರ ಸಂಘಟನೆ ಐಸಿಸ್ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಗ್ರಾದ ಯಮುನಾ ನದಿ ಪ್ರದೇಶ ಸಹಿತ ಮತ್ತಿತರ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ತಾಜ್‌ಮಹಲ್ ನಮ್ಮ ಮುಂದಿನ ಗುರಿ ಎಂಬರ್ಥದ ಚಿತ್ರ ಸಂದೇಶವನ್ನು ಉಗ್ರ ಸಂಘಟನೆ “ಟೆಲಿಗ್ರಾಂ’ ಆ್ಯಪ್ ಮೂಲಕ ರವಾನಿಸಿದ್ದು ಈ ಆತಂಕಕ್ಕೆ ಕಾರಣವಾಗಿದೆ. ತಾಜ್ ಹೊರಭಾಗದಲ್ಲಿ 500 ಮೀ. ಭದ್ರತಾ ವಲಯ ನಿರ್ಮಿಸಲಾಗಿದೆ. ಎಲ್ಲ ದ್ವಾರ ಗಳಲ್ಲಿ ಪೊಲೀಸರು ಸಂದರ್ಶಕರ ಓಡಾಟ, ವಾಹನಗಳ ಚಲನೆ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಒಳ ಭಾಗದ ಭದ್ರತಾ ಹೊಣೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ವಹಿಸಲಾಗಿದೆ. ಇದಲ್ಲದೇ ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಘಟಕವನ್ನೂ ರಕ್ಷಣೆಗೆ ನಿಯೋಜಿಸಲಾಗಿದೆ.
ರೈಲು ಸ್ಫೋಟ ಗಿಫ್ಟ್: ಈ ನಡುವೆ, ಭೋಪಾಲ್- ಉಜ್ಜ ಯಿನಿ ಪ್ಯಾಸೆಂಜರ್ ರೈಲು ಸ್ಫೋಟ ಪ್ರಕರಣ ದೇಶದಲ್ಲಿ ಉಗ್ರ ಸಂಘಟನೆ ಐಸಿಸ್‌ನ ಮೊದಲ ಕೃತ್ಯ ಎಂಬುದು ಸಾಬೀತಾಗಿದೆ. “ಈ ಬಾಂಬ್ ಸ್ಫೋಟ ಐಸಿಸ್ ಮುಖ್ಯಸ್ಥ ಅಬು ಬಕ್ ಅಲ್- ಬಗ್ಧಾದಿಯ ಗಿಫ್ಟ್’ ಎಂಬ ಪತ್ರ ಇದಕ್ಕೆ ಸುಳಿವು ನೀಡಿದ್ದು, ಪೈಪ್ ಬಾಂಬ್‌ಗ ಹೊದಿಕೆ ಆಗಿದ್ದ ಈ ಪತ್ರ ಸ್ಫೋಟದೊಂದಿಗೆ ಭಸ್ಮವಾಗಿದೆ.
ಅತೀಫ್ ಮುಝಾಫರ್ ಎಂಬಾತ ಈ ಪತ್ರವನ್ನು ಬರೆದಿದ್ದು, ಈತ ಸೈಫುಲ್ಲಾ ಅಸುನೀಗಿದ ಠಾಕೂರ್‌ಗಂಜ್‌ನ ಮನೆಯಲ್ಲಿ ಬಾಡಿಗೆಗಿದ್ದ. ಶಸ್ತ್ರಾಸ್ತ್ರ ಪೂರೈಕೆಗೆ ಹಣದ ನೆರವು ನೀಡುತ್ತಿದ್ದ ಎಂದು ಬಂಧನಕ್ಕೊಳಗಾದ ಶಂಕಿತರ ವಿಚಾರಣೆ ವೇಳೆ ತಿಳಿದುಬಂದಿದೆ. ಈ ಬಗ್ಗೆ ಉನ್ನತ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.