“ತಾಜ್‌ಮಹಲ್’ ಖಾದ್ರಿ ನಿಧನ
Team Udayavani, Nov 11, 2018, 6:00 AM IST
ಗಾಜಿಯಾಬಾದ್: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಮೃತ ಪತ್ನಿಯ ನೆನಪಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸಿದ ನಿವೃತ್ತ ಪೋಸ್ಟ್‌ಮಾಸ್ಟರ್ ಫೈಜುಲ್ ಹಸನ್ ಖಾದ್ರಿ (83) ನಿಧನರಾಗಿದ್ದಾರೆ. ಕಳೆದ ವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಚೇತರಿಸಿಕೊಳ್ಳದೇ ಖಾದ್ರಿ ಸಾವನ್ನಪ್ಪಿದ್ದಾರೆ. ಮನೆಯ ಎದುರು ವಾಹನವೊಂದುಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡಿದ್ದ ಖಾದ್ರಿಯನ್ನು ಅಲಿಗಢದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿಯ ಸಮಾಧಿ ಮೇಲೆಯೇ ತಾಜ್‌ಮಹಲ್ ನಿರ್ಮಿಸಿರುವ ಖಾದ್ರಿ, ಪತ್ನಿ ಸಮಾಧಿ ಪಕ್ಕವೇ ತನ್ನನ್ನು ಸಮಾಧಿ ಮಾಡಬೇಕೆಂದು ಸ್ಥಳವನ್ನೂ ನಿಗದಿಸಿದ್ದರು. 2011ರಲ್ಲಿ ಅವರ ಪತ್ನಿ ನಿಧನರಾಗಿದ್ದರು. ಮಿನಿ ತಾಜ್‌ಮಹಲ್ ಹಣಕಾಸು ಅಡಚಣೆ ಯಿಂದಾಗಿ ಇನ್ನೂ ಪೂರ್ಣಗೊಂಡಿಲ್ಲ. 2 ಲಕ್ಷ ರೂ.ಗಳನ್ನು ಹೊಂದಿಸಿಕೊಂಡು ಅಂತಿಮ ರೂಪ ನೀಡಲು ಯೋಜನೆ ರೂಪಿಸಿದ್ದರಾದರೂ, ಈ ಕನಸು ಅವರ ಕೈಗೂಡಲಿಲ್ಲ. ತಾಜ್‌ಮಹಲ್ ನಿರ್ಮಾಣಕ್ಕೆ ಸರ್ಕಾರ ಪ್ರಸ್ತಾಪಿಸಿದ ಸಹಾಯವನ್ನೂ ಅವರು ನಿರಾಕರಿಸಿದ್ದಲ್ಲದೆ, ಶಾಲೆ ಕಟ್ಟಡಕ್ಕೆ ತನ್ನ ಜಮೀನನ್ನು ನೀಡಿದ್ದರು. ಅವರ ಸಂಬಂಧಿ ಈಗ ತಾಜ್‌ಮಹಲ್ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.