ತಾಜ್‌ಮಹಲ್‌ ನಮ್ಮದೇ ನಿರ್ಮಿಸಿದ್ದೂ ನಮ್ಮವರೇ


Team Udayavani, Oct 27, 2017, 6:50 AM IST

tajmahal.jpg

ಆಗ್ರಾ: ಉತ್ತರ ಪ್ರದೇಶ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಕೈಪಿಡಿಯಲ್ಲಿ ತಾಜ್‌ಮಹಲ್‌ ಮರೆಯಾಗಿತ್ತು. ಆ ದಿನದಿಂದ ಪ್ರೇಮಸೌಧದ ಬಗ್ಗೆ ಒಂದಲ್ಲ ಒಂದು ವಿವಾದಗಳು ಉಂಟಾಗುತ್ತಲೇ ಇದ್ದವು. ಅವೆಲ್ಲವಕ್ಕೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗುರುವಾರ ಪೂರ್ಣವಿರಾಮ ಹಾಕಿದ್ದಾರೆ. ಜಗತøಸಿದ್ಧ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ತಾಜ್‌ಮಹಲ್‌ ನಮ್ಮದೇ. ಅದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ ಎಂದಿದ್ದಾರೆ. ಜತೆಗೆ ಅದನ್ನು ಯಾರು ಯಾಕಾಗಿ ನಿರ್ಮಾಣ ಮಾಡಿದರು ಎಂಬುದು ಮುಖ್ಯವಲ್ಲ. ಆದರೆ ಅದನ್ನು ಭಾರತೀಯರು ಬೆವರು, ರಕ್ತ ಹರಿಸಿ ನಿರ್ಮಿಸಿದ್ದಾರೆ ಎಂದರು. ವಿಶ್ವಕ್ಕೆ ಅದೊಂದು ಅದ್ಭುತ ಕೊಡುಗೆ ಎಂದು ಕೊಂಡಾಡಿದರು. ಅದು ಭಾರತ ದೇಶದ ಸಂಸ್ಕೃತಿಯ ಭಾಗ. ಅದನ್ನು ರಕ್ಷಿಸಲು ಸರಕಾರ ಬದ್ಧವಾಗಿದೆ ಎಂದರು.

ಐತಿಹಾಸಿಕ ಸ್ಮಾರಕದ ಆವರಣದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿ ಕಾಲ ಕಳೆದು,  17ನೇ ಶತಮಾನದ ಮೊಘಲ್‌ ವಾಸ್ತುಶಿಲ್ಪವನ್ನು ಕಣ್ತುಂಬಿಕೊಂಡರು. ಅಲ್ಲದೆ ವಿದೇಶಿ ಪ್ರವಾಸಿಗರ ಜತೆಗೆ ಫೋಟೋಗೆ ಪೋಸು ನೀಡಿದರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸ್ವತ್ಛ ಭಾರತ ಅಭಿಯಾನಕ್ಕೆ ಬೆಂಬಲವಾಗಿ ಪಾರ್ಕಿಂಗ್‌ ಪ್ರದೇಶದಲ್ಲಿ ಕಸಗುಡಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಭಾರತ್‌ ಮಾತಾ ಕೀ ಜೈ ಘೋಷಣೆಗಳನ್ನು ಕೂಗಿದರು. 

ವಿವಾದದ ನಂತರ ಭೇಟಿ: ತಾಜ್‌ಮಹಲ್‌ಗೆ ಸಂಬಂಧಿಸಿದ ಸರಣಿ ವಿವಾದಗಳ ನಂತರ ಸಿಎಂ ಭೇಟಿ ದಿನಾಂಕ ಘೋಷಣೆ ಮಾಡಲಾಗಿತ್ತು. ಮೊದಲು ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ತಾಜ್‌ಮಹಲ್‌ ಸೇರಿಸದಿರುವುದರಿಂದ ಆರಂಭವಾದ ವಿವಾದ, ಸಚಿವರ ಹೇಳಿಕೆಗಳಿಂದ ತಾರಕಕ್ಕೇರಿತ್ತು. ಮೂಲದಲ್ಲಿ ತಾಜ್‌ಮಹಲ್‌ ಶಿವನ ದೇವಾಲಯವಾಗಿತ್ತು ಎಂದು ಬಿಜೆಪಿ ಸಂಸದ ವಿನಯ್‌ ಕಟಿಯಾರ್‌ ಹೇಳಿದ್ದರೆ, ತಾಜ್‌ಮಹಲ್‌ ಹೆಸರನ್ನು ಅಳಿಸಿ ಇತಿಹಾಸವನ್ನು ಮರುರಚನೆ ಮಾಡಬೇಕು ಎಂದು ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಹೇಳಿದ್ದರು.

ಈ ಹೇಳಿಕೆಗಳು ದೇಶಾದ್ಯಂತ ತೀವ್ರ ಆಕ್ಷೇಪಕ್ಕೆ ಒಳಗಾಗುತ್ತಿದ್ದಂತೆಯೇ ಗೋರಖ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಸಿಎಂ ಆದಿತ್ಯನಾಥ ಹೇಳಿಕೆ ನೀಡಿ ವಿವಾದ ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದರು. ಯಾಕೆ, ಯಾವಾಗ ಮತ್ತು ಹೇಗೆ ತಾಜ್‌ಮಹಲ್‌ ನಿರ್ಮಿಸಲಾಗಿತ್ತು ಎಂಬ ಬಗ್ಗೆ ಆಳವಾಗಿ ನಾವು ಯೋಚಿಸಬಾರದು. ಇದನ್ನು ಭಾರತೀಯ ರೈತರು ಹಾಗೂ ಕಾರ್ಮಿಕರ ರಕ್ತ ಮತ್ತು ಪರಿಶ್ರಮದಿಂದ ನಿರ್ಮಿಸಲಾಗಿದೆ ಎಂದು ರ್ಯಾಲಿಯಲ್ಲಿ ಸಿಎಂ ಹೇಳಿದ್ದರು.

ಪಶ್ಚಿಮ ದ್ವಾರದಿಂದ ಭೇಟಿ: ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ 14 ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪಶ್ಚಿಮ ದ್ವಾರದಿಂದ ಪ್ರವೇಶ ಮಾಡಿದ ಅವರು, “ಸ್ವತ್ಛ ಭಾರತ’ ಅಭಿಯಾನ ಪ್ರಯುಕ್ತ ಕಸಗುಡಿಸಿದರು. ಬಳಿಕ ಅವರು ಪೂರ್ವ ದ್ವಾರದಿಂದ ಹೊರಟರು.

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.