ಅಫ್ಗಾನ್ ಮಹಿಳೆಯರಿಗೆ ದೂರದೂರಿಗೆ ಪ್ರಯಾಣಿಸಲೂ ನಿರ್ಬಂಧ ಹೇರಿದ ತಾಲಿಬಾನ್
Team Udayavani, Dec 27, 2021, 9:12 AM IST
ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ಥಾನದಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ಮತ್ತೆ ಹೆಚ್ಚಿವೆ. ಇದೀಗ ಮತ್ತೊಂದು ಆದೇಶವನ್ನು ತಾಲಿಬಾನ್ ಹೊರಡಿಸಿದ್ದು, ದೂರದೂರಿಗೆ ಪ್ರಯಾಣ ಮಾಡುವ ಮಹಿಳೆಯರ ಜೊತೆಗೆ ಹತ್ತಿರದ ಸಂಬಂಧಿಗಳು ಇರದೇ ಇದ್ದರೆ ಅಂತವರಿಗೆ ಪ್ರಯಾಣಕ್ಕೆ ಅವಕಾಶ ನೀಡಬಾರದು ಎಂದಿದೆ.
ಅಲ್ಲದೆ ಸ್ಕಾರ್ಫ್ ಧರಿಸದ ಮಹಿಳೆಯರಿಗೆ ಪ್ರಯಾಣ ನಿರಾಕರಿಸುವಂತೆ ವಾಹನ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ಆಗಸ್ಟ್ 15 ರಂದು ಅಧಿಕಾರವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ ಸಾರ್ವಜನಿಕ ವಲಯದ ಪಾತ್ರಗಳಲ್ಲಿರುವ ಅನೇಕ ಮಹಿಳೆಯರನ್ನು ಕೆಲಸಕ್ಕೆ ಮರಳುವುದನ್ನು ತಡೆದಿದೆ.
“45 ಮೈಲುಗಳಿಗಿಂತ ಹೆಚ್ಚು (72 ಕಿಲೋಮೀಟರ್) ಪ್ರಯಾಣಿಸುವ ಮಹಿಳೆಯರು ಪುರುಷ ಎಸ್ಕಾರ್ಟ್ ಇಲ್ಲದಿದ್ದರೆ ಸವಾರಿ ನೀಡಬಾರದು” ಎಂದು ಸಚಿವಾಲಯದ ವಕ್ತಾರ ಸಾಡೆಕ್ ಅಕಿಫ್ ಮುಹಾಜಿರ್ ಭಾನುವಾರ ಎಎಫ್ ಪಿ ನ್ಯೂಸ್ ಗೆ ತಿಳಿಸಿದರು. ಅದಲ್ಲದೆ ಬೆಂಗಾವಲು ಪುರುಷ ನಿಕಟ ಸಂಬಂಧಿಯೇ ಆಗಿರಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ:ಮೃತದೇಹಗಳ ವಾರಸುದಾರರ ಪತ್ತೆಗೆ ಪೊಲೀಸರ ಹೆಣಗಾಟ! ; ಅನಾಥವಾಗಿಯೇ ಮಣ್ಣಾಗುತ್ತಿವೆ ಶವಗಳು
ಸಾಮಾಜಿಕ ಮಾಧ್ಯಮ ನೆಟ್‌ವರ್ಕ್ ಗಳಲ್ಲಿ ಪ್ರಸಾರವಾದ ಹೊಸ ಮಾರ್ಗದರ್ಶನವು ಜನರು ತಮ್ಮ ವಾಹನಗಳಲ್ಲಿ ಸಂಗೀತ ನುಡಿಸುವುದನ್ನು ನಿಲ್ಲಿಸುವಂತೆ ಕೇಳಿದೆ.
ವಾರಗಳ ಹಿಂದೆ ಮಹಿಳಾ ನಟರನ್ನು ಒಳಗೊಂಡ ನಾಟಕಗಳ ಪ್ರದರ್ಶನಗಳನ್ನು ನಿಲ್ಲಿಸುವಂತೆ ಸಚಿವಾಲಯವು ಅಫ್ಘಾನಿಸ್ತಾನದ ದೂರದರ್ಶನ ಚಾನೆಲ್ ಗಳನ್ನು ಕೇಳಿದೆ. ಪ್ರಸ್ತುತಪಡಿಸುವಾಗ ಮಹಿಳಾ ಟಿವಿ ಪತ್ರಕರ್ತರು ತಲೆಗೆ ಸ್ಕಾರ್ಫ್ ಧರಿಸುವಂತೆಯೂ ಅದು ಕರೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
ಬಾಲ್ಯ ವಿವಾಹ ಕಾನೂನು ಪರಿಶೀಲನೆ: ಸುಪ್ರೀಂ ಅಸ್ತು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.