ಮೂಗರಿಗೆ ಧ್ವನಿಯಾಗಲಿದೆ ಈ ಗ್ಲೌಸ್‌ಗಳು!
ಜೋಧಪುರ ಐಐಟಿ ಸಂಶೋಧಕರಿಂದ ಅಗ್ಗದ ದರದಲ್ಲಿ ವಿಶಿಷ್ಟ ಸಾಧನ ಅಭಿವೃದ್ಧಿ
Team Udayavani, Nov 30, 2021, 5:40 AM IST
ನವದೆಹಲಿ: ಜೋಧಪುರದ ಐಐಟಿ (ಭಾರತೀಯ ತಾಂತ್ರಿಕ ಸಂಸ್ಥೆ) ಸಂಶೋಧಕರು ವಿಶಿಷ್ಟ ಸಾಧನವೊಂದನ್ನು ಸಿದ್ಧಪಡಿಸಿದ್ದಾರೆ. ಇದು ಮೂಗರಿಗೆ ನೆರವಾಗುತ್ತದೆ. ಅರ್ಥಾತ್ ಇದನ್ನು ಬಳಸುವ ಮೂಗರ ಕೈಸನ್ನೆಗಳು ಧ್ವನಿಯಾಗಿ ಬದಲಾಗುತ್ತವೆ!
ಈ ಸಾಧನವನ್ನು ಎರಡೂ ಕೈಗಳಿಗೆ ಗ್ಲೌಸ್‌ನಂತೆ ಧರಿಸಬೇಕು. ಬೆಲೆ 5000 ರೂ.ಗಳಿಗಿಂತ ಕಡಿಮೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಯಾಂತ್ರಿಕ ಕಲಿಕೆ (ಮಷಿನ್ ಲರ್ನಿಂಗ್) ಸಾಧನಗಳನ್ನು ಈ ಗ್ಲೌಸ್‌ನಲ್ಲಿ ಅಳವಡಿಸಲಾಗಿರುತ್ತದೆ. ಅವು ಯಾವುದೇ ಸನ್ನೆಗಳನ್ನು ಧ್ವನಿಯಾಗಿ ಬದಲಾಯಿಸುತ್ತವೆ. ಇಲ್ಲಿ ಯಾವ ಭಾಷೆಯನ್ನು ಬೇಕಾದರೂ ಬಳಸುವ ವ್ಯವಸ್ಥೆಯಿದೆ.
ಕಾರ್ಯ ನಿರ್ವಹಣೆ ಹೇಗೆ?:
ಈ ಕೈಗ ವಸನ್ನು ಎರಡೂ ಕೈಗಳಿಗೆ ತೊಟ್ಟುಕೊಳ್ಳಬೇಕು. ಬಳಕೆದಾರ ಮೊದಲ ಆದ್ಯತೆಯಾಗಿ ಬಳಸುವ ಕೈಗಳ ಎಲ್ಲ ಬೆರಳುಗಳು, ಮಣಿಕಟ್ಟುಗಳ ಚಲನೆಯನ್ನು ಅಲ್ಲಿನ ಸಂವೇದಿಗಳು (ಸೆನ್ಸರ್‌ಗಳು) ವಿದ್ಯುತ್ಕಾಂತೀಯ ಸಂಕೇತಗಳನ್ನಾಗಿ ಬದಲಾಯಿಸುತ್ತವೆ. ಮತ್ತೊಂದು ಕೈಯಲ್ಲಿರುವ ಗ್ಲೌಸ್‌ಗಳಿಂದಲೂ ಇಂತಹದ್ದೇ ಸಂದೇಶಗಳು ಸೃಷ್ಟಿಯಾಗುತ್ತವೆ.
ಇದನ್ನೂ ಓದಿ:ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ
ಇವೆಲ್ಲ ಸಂಕೇತ ಸಂಸ್ಕರಣಾ ಘಟಕಕ್ಕೆ ತಲುಪುತ್ತವೆ. ಪ್ರತಿ ಸಂಕೇತಗಳಿಗೆ ಪೂರಕವಾಗಿ ಈ ಮುನ್ನವೇ ಒಂದು ಸಂದೇಶವನ್ನು ಸಿದ್ಧಪಡಿಸಲಾಗಿರುತ್ತದೆ. ಕೃತಕ ಬುದ್ಧಿಮತ್ತೆಯ ಮೂಲಕ ಇವು ಧ್ವನಿಸಂದೇಶಗಳಾಗಿ ಬದಲಾಗುತ್ತವೆ. ಈ ಧ್ವನಿ ಸಂದೇಶ ಬೇಕಾದರೆ ಸಂಬಂಧಪಟ್ಟ ಬಳಕೆದಾರನ ಧ್ವನಿಗೆ ತಕ್ಕಂತೆಯೂ ಬದಲಾಯಿಸಿಕೊಳ್ಳುವ ವ್ಯವಸ್ಥೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.