ಅಪಹೃತ ಭಾರತೀಯರ ಬಿಡುಗಡೆಗೆ ಮಾತುಕತೆ

Team Udayavani, Jul 11, 2017, 11:19 AM IST

11-PTI-12.jpg

ಮೊಸೂಲ್‌/ಹೊಸದಿಲ್ಲಿ: ಹಲವು ತಿಂಗಳ ಸತತ ಹೋರಾಟದ ಬಳಿಕ ಐಸಿಸ್‌(ಇಸ್ಲಾಮಿಕ್‌ ಸ್ಟೇಟ್‌) ಉಗ್ರರಕಪಿ ಮುಷ್ಟಿಯಿಂದ ಮೊಸೂಲ್‌ ನಗರವನ್ನು ವಶಪಡಿಸಿಕೊಂಡಿದ್ದೇವೆ ಎಂದು ಇರಾಕ್‌ ಸೇನೆ ಘೋಷಿಸಿದ ಬೆನ್ನಲ್ಲೇ ಉಗ್ರರಿಂದ ಅಪಹರಣಕ್ಕೀಡಾದ ಭಾರತೀಯರ ಕುರಿತ ಪ್ರಸ್ತಾಪ ಮುನ್ನಲೆಗೆ ಬಂದಿದೆ.

2014ರಲ್ಲಿ ಮೊಸೂಲ್‌ ನಗರದಲ್ಲಿ ಉಗ್ರರು 39 ಮಂದಿ ಭಾರತೀಯರನ್ನು (ಈ ಪೈಕಿ ಬಹು ತೇಕ ಮಂದಿ ಪಂಜಾಬ್‌ನವರು) ಅಪಹರಿಸಿದ್ದರು. 3 ವರ್ಷಗಳಾದರೂ ಒತ್ತೆಯಾಳುಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೀಗ ಮೊಸೂಲ್‌ ನಗರವು ಇರಾಕ್‌ ಸೇನೆಯ ವಶಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯವು ಇರಾಕ್‌ ಸರಕಾರವನ್ನು ಸಂಪರ್ಕಿಸಿ, ಭಾರತೀಯರ ಪತ್ತೆ ಹಾಗೂ ಬಿಡುಗಡೆ ಕುರಿತು ಪ್ರಸ್ತಾಪಿಸಿದೆ. ಇವರ ಬಿಡುಗಡೆಗೆ ಎಲ್ಲ ರೀತಿ ನೆರವು ನೀಡುವುದಾಗಿ ಇರಾಕ್‌ ಸರಕಾರ ಭರವಸೆ ನೀಡಿದೆ ಎಂದು ಸೋಮವಾರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಇದೇ ವೇಳೆ, ವಿದೇಶಾಂಗ ಇಲಾಖೆ ಸಹಾ ಯಕ ಸಚಿವ ಜ.ವಿ.ಕೆ.ಸಿಂಗ್‌ ಸೋಮವಾರವೇ ಇರಾಕ್‌ನ ಎರ್ಬಿಲ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

ಸುಷ್ಮಾಗೆ ಒತ್ತಾಯ: ಇದಕ್ಕೂ ಮುನ್ನ, ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್‌ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ದೂರವಾಣಿ ಕರೆ ಮಾಡಿದ್ದು, ಭಾರತೀಯ ಅಪಹೃತರ ಬಿಡುಗಡೆ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸುಷ್ಮಾ, “39 ಭಾರತೀಯರನ್ನೂ ಕರೆತರಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಭರವಸೆ ನೀಡಿದ್ದರು. 

ಟೈಗ್ರಿಸ್‌ ನದಿಗೆ ಹಾರಿದ ಐಸಿಸ್‌ ಉಗ್ರರು!
ಇರಾಕ್‌ನ ಪ್ರಮುಖ ನಗರ ಮೊಸೂಲ್‌ ಅನ್ನು ತಮ್ಮ ವಶಕ್ಕೆ ಪಡೆದುಕೊಂಡು ಕೇಕೆ ಹಾಕುತ್ತಿದ್ದ ಐಸಿಸ್‌ ಉಗ್ರರಿಗೆ ರವಿವಾರ ಆಘಾತ ಕಾದಿತ್ತು. ಇರಾಕ್‌ ಸೇನೆಯು ಮೊಸೂಲ್‌ ನಗರವನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ, ಸೋಲಿನ ರುಚಿ ಕಂಡ ಉಗ್ರರು ದಿಕ್ಕಾಪಾಲಾಗಿ ಓಡಿದರು. ವಿಶೇಷವೆಂದರೆ, ಹಲವು ಉಗ್ರಗಾಮಿಗಳು ರಣಾಂಗಣದಿಂದ ಹಿಂದೆ ಸರಿದಿದ್ದಲ್ಲದೆ, ಟೈಗ್ರಿಸ್‌ ನದಿಗೆ ಹಾರಿ ಪ್ರಾಣ ಬಿಟ್ಟರು ಎಂದು ಸೇನೆ ಹೇಳಿದೆ. ಈಜಲು ಗೊತ್ತಿದ್ದ ಕೆಲವರು ನದಿಯಲ್ಲಿ ಈಜಿ ಬಚಾವಾಗಲು ಯತ್ನಿಸಿದ್ದು, 30 ಮಂದಿ ಉಗ್ರರನ್ನು ಸೇನೆ ಸದೆಬಡಿದಿದೆ. ಸತತ 8 ತಿಂಗಳ ಹೋರಾಟದ ಬಳಿಕ ಸೇನೆ ರವಿವಾರ ಕೊನೆಯ ಹಂತದ ಕಾರ್ಯಾಚರಣೆಯಾಗಿ ಗುಂಡಿನ ದಾಳಿ ಹಾಗೂ ವೈಮಾನಿಕ ದಾಳಿ ನಡೆಸಿತ್ತು. ಉಗ್ರರ ದಮನದ ಬಳಿಕ ಟೈಗ್ರಿಸ್‌ ನದಿ ತಟದಲ್ಲಿ ಇರಾಕ್‌ ಧ್ವಜವನ್ನು ಹಾರಿಸಲಾಯಿತು. 

ಟಾಪ್ ನ್ಯೂಸ್

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

Sureje-CM-DCM

ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು

Election-Com-State-Chief

Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Lok Sabha result:ಜುಕರ್‌ಬರ್ಗ್‌ ಸುಳ್ಳು ಬಯಲು ಮಾಡಿದ ಅಶ್ವಿ‌ನಿ ವೈಷ್ಣವ್‌

1-dadasd

Mahakumbh; ಕುಂಭದಲ್ಲಿ ಒಂದೇ ದಿನ 1.5 ಕೋಟಿ ಜನ ಪುಣ್ಯ ಸ್ನಾನ

army

Ladakh ಗಡಿಯ ಬಳಿ ಚೀನಾ ಯುದ್ಧಾಭ್ಯಾಸ: ಭಾರತ ಸೇನೆ ಅಲರ್ಟ್‌

nitin-gadkari

ಅಪಘಾತದ ಸಂತ್ರಸ್ತರಿಗೆ ನೆರವಾದರೆ 25,000ರೂ. ಬಹುಮಾನ: ಗಡ್ಕರಿ

Beer

Madhya Pradesh; ಧಾರ್ಮಿಕ ಕ್ಷೇತ್ರಗಳಿರುವ ನಗರದಲ್ಲಿ ಮದ್ಯ ನಿಷೇಧಕ್ಕೆ ಚಿಂತನೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.