ಬೆಟ್ಟಿಂಗ್: ಆನ್ ಲೈನ್ ಗೇಮ್ ನಿಷೇಧಿಸಿದ ತಮಿಳುನಾಡು ಸರ್ಕಾರ
ಈ ಆನ್ ಲೈನ್ ಗೇಮಿನ ಗೀಳಿನಿಂದ ಜನರು ಅದರಲ್ಲೂ ಯುವಜನಾಂಗ ಸಮಸ್ಯೆ ಎದುರಿಸುವಂತಾಗಿದೆ.
Team Udayavani, Nov 21, 2020, 4:43 PM IST
ಚೆನ್ನೈ : ಬೆಟ್ಟಿಂಗ್ ದಂಧೆಯನ್ನು ಉತ್ತೇಜಿಸುವ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
ಜನರು ಬೆಟ್ಟಿಂಗ್ ಗೆ ಅವಕಾಶ ನೀಡುವ ಆನ್ ಲೈನ್ ಗೇಮ್ ಗಳಿಗೆ ದಾಸರಾಗಿ ತಾವು ಡುಡಿದ ಹಣವನ್ನೆಲ್ಲಾ ಅದರಲ್ಲಿ ವಿನಿಯೋಗಿಸಿ ನಷ್ಟ ಅನುಭವಿಸಿ ನಂತರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ .
ಇದನ್ನೂ ಓದಿ:ನೈಟ್ ಬೀಟ್ ಪೊಲೀಸರ ಕಾರ್ಯಾಚರಣೆ: ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ವಶ; ಇಬ್ಬರು ವಶಕ್ಕೆ
ತಮಿಳುನಾಡು ಗವರ್ನರ್ ಬನ್ವರಿಲಾಲ್ ಪುರೋಹಿತ್ ಈ ಸುಗ್ರೀವಾಜ್ಞೆ ಹೊರಡಿಸಿದ್ದು, ಗೇಮಿಂಗ್ ಕಾಯ್ದೆ 1930, ಚೆನ್ನೈ ನಗರ ಪೊಲೀಸ್ ಕಾಯ್ದೆ- 1888, ಚೆನ್ನೈ ಜಿಲ್ಲಾ ಪೊಲೀಸ್ ಕಾಯ್ದೆ-1859 ಗಳಿಗೆ ತಿದ್ದುಪಡಿ ಮಾಡಿ ಈ ಸುಗ್ರೀವಾಜ್ಞೆ ಹೊರಡಿಸಲಾಗಿದೆ
ಆನ್ ಲೈನ್ ಬೆಟ್ಟಿಂಗ್ ಗೇಮ್ ಆಡುವವರಿಗೆ 5000 ರೂ. ದಂಡ , 6 ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ಅಂಗಡಿಗಳಲ್ಲಿ ಗೇಮ್ ಆಡಿಸುವವರಿಗೆ 10000 ರೂ. ದಂಡ , 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಬೆಟ್ಟಿಂಗ್ ಗೆದ್ದವರಿಗೆ ನಗದು ನೀಡಲು ಆನ್ ಲೈನ್ ಮೂಲಕ ಹಣ ಪಡೆಯುವುದು ಮತ್ತು ನೀಡುವುದನ್ನೂ ನಿಷೇಧಿಸಲಾಗಿದೆ .
ಈ ಆನ್ ಲೈನ್ ಗೇಮ್ ಗೀಳಿನಿಂದ ಜನರು ಅದರಲ್ಲೂ ಯುವಜನಾಂಗ ಸಮಸ್ಯೆ ಎದುರಿಸುವಂತಾಗಿದೆ. ಹಲವಾರು ಜನರು ನಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ . ಹಾಗಾಗಿ ಇಂತಹ ಘಟನೆಗಳು ನಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ಈ ಆಜ್ಞೆ ಹೊರಡಿಸಬೇಕು ಎಂಬುದಾಗು ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು ಎಂದು ರಾಜಭವನ ಪ್ರಕಟಣೆ ತಿಳಿಸಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.