Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
ಟಿವಿಕೆ ಪಕ್ಷ ಸ್ಥಾಪಿಸಿದ ನಟ, ರಾಜಕಾರಣಿ ದಳಪತಿ ವಿಜಯ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಿಎಂ ಸ್ಟಾಲಿನ್ ಪುತ್ರ
Team Udayavani, Nov 6, 2024, 7:25 PM IST
ಚೆನ್ನೈ: ಮುಂಬರುವ (2026) ತಮಿಳುನಾಡು ವಿಧಾನಸಭಾ ಚುನಾವಣೆಗೆ ಯಾರೇ ಎದುರಾಳಿಯಾಗಿ ಬಂದು ನಿಂತರೂ ತಮ್ಮ ಪಕ್ಷವೇ ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪರೋಕ್ಷವಾಗಿ ನಟ ಹಾಗೂ ಇತ್ತೀಚೆಗೆ ಹೊಸ ಪಕ್ಷ ಸ್ಥಾಪಿಸಿದ ರಾಜಕಾರಣಿ ವಿಜಯ್‌ಗೆ ಎಚ್ಚರಿಕೆ ನೀಡಿದ್ದಾರೆ.
ದಳಪತಿ ಅಥವಾ ನಾಯಕ ಎಂದು ಕರೆಯಲ್ಪಡುತ್ತಿದ್ದ ನಟ ವಿಜಯ್ ಅ.27ರಂದು ನೂತನವಾಗಿ ಆರಂಭಿಸಿದ ತನ್ನ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಉದ್ಘಾಟನಾ ಸಮಾವೇಶವು ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ನಡೆದ ಸಮಾರಂಭದಲ್ಲಿ ವಿಜಯ್ ತಮ್ಮ ಮೊದಲ ರಾಜಕೀಯ ಭಾಷಣದಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) (DMK) ಮತ್ತು ಬಿಜೆಪಿಯ ಹೆಸರೆತ್ತದೇ ವಾಗ್ದಾಳಿ ನಡೆಸಿದ್ದರು.
ದಿಲ್ಲಿಯಿಂದ ಅಥವಾ ಸ್ಥಳೀಯವಾಗಿ ಬಂದ್ರೂ ಗೆಲುವು ನಮ್ಮದೇ:
ಅಂದಿನಿಂದ, ತಮಿಳುನಾಡಿನ ರಾಜಕೀಯ ನಾಯಕರು, ವಿಶೇಷವಾಗಿ ಡಿಎಂಕೆ ನಾಯಕರು ವಿಜಯ್ ಭಾಷಣ ಮತ್ತು ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಿದ್ದು, ವಿಲ್ಲುಪುರಂನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ಉದಯನಿಧಿ, 2026ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ವಿರೋಧಿಸಲು ಯಾರು ನಿರ್ಧರಿಸಿದರೂ, ಅವರು ಯಾವುದೇ ಮೈತ್ರಿ ಮಾಡಿಕೊಂಡರೂ, ಅವರು ಯಾವುದೇ ದಿಕ್ಕಿನಿಂದ ಬಂದರೂ ಪರವಾಗಿಲ್ಲ, ಅವರು ದೆಹಲಿ ಅಥವಾ ಸ್ಥಳೀಯವಾಗಿ ಯಾರೇ ಬರಲಿ ಗೆಲ್ಲುವುದು ಮಾತ್ರ ಡಿಎಂಕೆ ಎಂದು ಹೇಳಿದರು.
ನಟ ವಿಜಯ್ ಜೊತೆ ಬಹಳ ವರ್ಷಗಳ ಗೆಳೆತನ ಹೊಂದಿರುವ ಉದಯನಿಧಿ, ತಮ್ಮ ಚೊಚ್ಚಲ ರಾಜಕೀಯ ಸಮಾವೇಶಕ್ಕೆ ನಟನಿಗೆ ಶುಭ ಹಾರೈಸಿದ್ದರು. ವಿಜಯ್ ನನಗೆ ಹಲವು ವರ್ಷಗಳಿಂದ ಸ್ನೇಹಿತ, ನಾನು ಅವರನ್ನು ಬಾಲ್ಯದಿಂದಲೂ ನೋಡಿದ್ದೇನೆ. ನನ್ನ ಪ್ರೊಡಕ್ಷನ್ ಹೌಸ್‌ನ ಮೊದಲ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಹೊಸ ಸಾಹಸದಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಉದಯನಿಧಿ ಹೇಳಿದ್ದಾರೆ.
ವಿಜಯ್ ರಾಜಕೀಯ ಭಾಷಣದ ನಂತರ, ಅದಕ್ಕೆ ಪ್ರತಿಕ್ರಿಯೆಗಳು ವಿಭಿನ್ನವಾಗಿವೆ. ಕಾಂಗ್ರೆಸ್ ನಾಯಕ ಪಿ ಚಿದಂಬರಂ ಇದನ್ನು ಸಿದ್ಧಾಂತಗಳ ಮಿಶ್ರಣ ಎಂದು ಹೇಳಿದರೆ, ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಪ್ರತಿಕ್ರಿಯಿಸಿ ಟಿವಿಕೆಯು ಡಿಎಂಕೆ ಮತಗಳ ವಿಭಜಿಸುವುದಿಲ್ಲ ಎಂದು ಹೇಳಿದರು.
ತಮಿಳುನಾಡು ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಮಾತನಾಡಿ ಬಿಜೆಪಿಯವರು ರಜನೀಕಾಂತ್ ಬದಲು ವಿಜಯ್ ಮೂಲಕ ರಾಜಕೀಯ ಪಕ್ಷವನ್ನು ತಂದಿದ್ದಾರೆ. ರಜನೀಕಾಂತ್‌ರನ್ನು ರಾಜಕೀಯಕ್ಕೆ ತರಲು ಭಾರಿ ಪ್ರಯತ್ನಪಟ್ಟರು ಆಗಲಿಲ್ಲ. ಅದಕ್ಕೆ ಈಗ ವಿಜಯ್ ರಾಜಕೀಯ ಪಕ್ಷ ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.