ನಿಲ್ಲದ ಮಳೆ ಭೀತಿ: ನೀಲಗಿರಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ


Team Udayavani, Nov 13, 2021, 6:40 AM IST

ನಿಲ್ಲದ ಮಳೆ ಭೀತಿ: ನೀಲಗಿರಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ

ಚೆನ್ನೈ/ಭುವನೇಶ್ವರ: ತಮಿಳುನಾಡು ರಾಜ ಧಾನಿ ಚೆನ್ನೈಯಲ್ಲಿ ಶುಕ್ರವಾರ ಮಳೆಗೆ ಕೊಂಚ ಬಿಡುವು ಇತ್ತು. ಇದರ ಹೊರತಾ ಗಿಯೂ ನೀಲಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ನ.12ರಿಂದ 5 ದಿನಗಳ ಕಾಲ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕಾರೈಕಲ್‌, ಪುದುಚೇರಿಗಳಲ್ಲಿಯೂ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡ ಲಾಗಿದೆ. ಚೆನ್ನೈಯಲ್ಲಿ ಬಿದ್ದ ಮರ ಗಳ ತೆರವು, ನಿಂತಿರುವ ನೀರು ಹರಿದು ಹೋಗಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಮುಂದುವರಿದ ಸಮೀಕ್ಷೆ: ಚೆನ್ನೈಯಲ್ಲಿ ಶುಕ್ರವಾರವೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಪ್ರದೇಶಗಳಲ್ಲಿ ಖುದ್ದು ಪರಿಶೀ ಲನೆ ನಡೆಸಿದ್ದಾರೆ. ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿ ಆಶ್ರಯ ಪಡೆದವರ ಜತೆಗೆ ಭೇಟಿಯಾಗಿದ್ದಾರೆ ಮತ್ತು ಅವರಿಗೆ ಖುದ್ದು ಆಹಾರ ವಿತರಿಸಿದ್ದಾರೆ. ಚೆಂಗಲ್ಪಟ್ಟು ಜಿಲ್ಲೆ ಯಲ್ಲಿ ಪುಟ್ಟ ಅಂಗಡಿಯಲ್ಲಿ ಚಹಾ ಕುಡಿದು, ಸ್ಥಳೀಯರ ಜತೆಗೆ ಮಳೆ ಪರಿ ಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.

ರಕ್ಷಿಸಿದ್ದ ವ್ಯಕ್ತಿ ಸಾವು: ಚೆನ್ನೈಯ ಕಿಲುಪ್ಪಾಕು ಶ್ಮಶಾನದಿಂದ ಮಹಿಳಾ ಪೊಲೀಸ್‌ ಅಧಿ ಕಾರಿ ರಾಜೇಶ್ವರಿ ಅವರು ರಕ್ಷಿಸಿದ್ದ ಉದಯ ಕುಮಾರ್‌ ಎಂಬ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ನೀರಿನಲ್ಲಿ ಪ್ರಜ್ಞಾ ಶೂನ್ಯ ರಾಗಿ ಬಿದ್ದಿದ್ದ ಅವರನ್ನು ರಾಜೇಶ್ವರಿ ಅವರು ಹೆಗಲ ಮೇಲೆ ಹೊತ್ತುಕೊಂಡು ಆಟೋ ರಿಕ್ಷಾ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು ಮತ್ತು ಖುದ್ದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಗೆ ಪ್ರಶಂಸಾಪತ್ರ ನೀಡಿ ಗೌರವಿಸಿದ್ದಾರೆ. ಇದೇ ವೇಳೆ, ಪುದುಚೇರಿ ಯಲ್ಲಿ ಮಳೆಯಿಂದ ನೊಂದಿರುವ ರೈತರು, ಕಾರ್ಮಿಕರಿಗೆ ಮುಖ್ಯಮಂತ್ರಿ ಎನ್‌.ರಂಗಸಾಮಿ ಪರಿಹಾರ ನೀಡಿದ್ದಾರೆ.

ಒಡಿಶಾದಲ್ಲಿಯೂ ಮಳೆ: ಬಂಗಾಲಕೊಲ್ಲಿ ಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದಾಗಿ ಒಡಿಶಾದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾ ಗಿದೆ. ಗಂಜಾಂ ಜಿಲ್ಲೆಯ ಹಲವು ಭಾಗ ಗಳಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ಗಜಪತಿ, ರಾಯಗಢ‌, ಕಂಧಮಾಲ್‌ ದಿಲ್ಲೆಗಳಲ್ಲಿ ರವಿವಾರ ಬೆಳಗ್ಗಿನ ವರೆಗಿನ ಮುನ್ನೆಚ್ಚರಿಕೆ ಪ್ರಕಾರ ಭಾರೀ ಮಳೆ ಸಾಧ್ಯತೆ ಇದೆ. ಪುರಿಯಲ್ಲೂ ಮಳೆ ಸಾಧ್ಯತೆ ಇದೆ.

ಟಾಪ್ ನ್ಯೂಸ್

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

Badiyadka: ವಂಚನೆ ಪ್ರಕರಣ; ಸಚಿತಾ ವಿರುದ್ಧ ಇನ್ನೊಂದು ಕೇಸು

Badiyadka: ವಂಚನೆ ಪ್ರಕರಣ; ಸಚಿತಾ ವಿರುದ್ಧ ಇನ್ನೊಂದು ಕೇಸು

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Delhi; 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!!: ಪೊಲೀಸರ ಭಾರೀ ಬೇಟೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

1-aa-2-bg

Ratan Tata; ಪಾರ್ಸಿ ಸಂಪ್ರದಾಯದಂತೆ ರತನ್ ಟಾಟಾ ಅಂತ್ಯಕ್ರಿಯೆ: ಸರ್ವ ಧರ್ಮ ಪ್ರಾರ್ಥನೆ

Terror 2

Hizb-Ut-Tahrir ಉಗ್ರ ಸಂಘಟನೆ ಎಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

omar-nc

J.K: ನ್ಯಾಶನಲ್‌ ಕಾನ್ಫರೆನ್ಸ್‌ ಗೆ ಸ್ವತಂತ್ರ ಶಾಸಕರ ಬೆಂಬಲ; ಕ್ಷೀಣಿಸಿತು ಕಾಂಗ್ರೆಸ್‌ ಬಲ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

1-ewwss

India vs Australia; ಟೆಸ್ಟ್‌  ಸರಣಿಗೆ ಗ್ರೀನ್‌ ಸಂಶಯ

1-ucchil

Uchchila Dasara: ದೇಹದಾರ್ಡ್ಯ ಸ್ಪರ್ಧೆ ಉದ್ಘಾಟನೆ

1-asdsad

Arctic Open ಬ್ಯಾಡ್ಮಿಂಟನ್‌; ಲಕ್ಷ್ಯ ಸೇನ್‌ಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.