ತಮಿಳುನಾಡು: ರಾಜ್ಯಪಾಲರ ಅಧಿಕಾರ ಮೊಟಕಿಗೆ ವಿಧೇಯಕ
Team Udayavani, Apr 26, 2022, 8:05 AM IST
ಚೆನ್ನೈ: ತಮಿಳುನಾಡಿನ ವಿಶ್ವವಿದ್ಯಾಲಯಗಳಿಗೆ ಕುಲ ಪತಿಗಳನ್ನು ನೇಮಿಸುವ ವಿಚಾರದಲ್ಲಿ ರಾಜ್ಯಪಾಲರಿಗೆ ಇರುವ ಪರಮಾಧಿಕಾರವನ್ನು ಮೊಟಕುಗೊಳಿಸುವ ಕುರಿ ತಾದ ವಿಧೇಯಕವನ್ನು ತಮಿಳುನಾಡು ಸರಕಾರ ಸಿದ್ಧಪಡಿಸಿದೆ.
ಸೋಮವಾರ ನಡೆದ ತಮಿಳುನಾಡು ವಿಧಾನಸಭಾ ಕಲಾಪದಲ್ಲಿ “ವಿಶ್ವವಿದ್ಯಾನಿಲಯಗಳ ಕಾನೂನು ತಿದ್ದುಪಡಿ ಮಸೂದೆ’ಯನ್ನು ಸಿಎಂ ಸ್ಟಾಲಿನ್ ಮಂಡಿಸಿದ್ದಾರೆ.
“ಕುಲಪತಿಗಳನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಕ್ಕೆ ಇಲ್ಲದಿರುವುದರಿಂದ ಅನುಭವಿಗಳನ್ನು ತಂದು ಆ ಸ್ಥಾನಗಳಲ್ಲಿ ತಂದು ಕೂರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಇದರಲ್ಲಿ ರಾಜ್ಯ ಸರಕಾರಗಳಿಗೇ ಪರಮಾಧಿ ಕಾರ ಕೊಡಬೇಕು. ಪ್ರಧಾನಿ ಮೋದಿ ಅವರ ಗುಜರಾತ್‌ನಲ್ಲಿ ಈ ಮಾದರಿ ಜಾರಿಯಲ್ಲಿದೆ ಎಂದಿದ್ದಾರೆ ಸ್ಟಾಲಿನ್.
ಆದಾಯಕ್ಕೆ ಮತ್ತೆರಡು ರಾಜ್ಯಗಳ ಕೋರಿಕೆ
ರಾಜ್ಯದಲ್ಲಿ ಯಾವುದೇ ವಿಮಾನನಿಲ್ದಾಣವನ್ನು ಕೇಂದ್ರ ಸರಕಾರವು ಖಾಸಗೀಕರಣಗೊಳಿಸಿದರೆ, ಅದರಿಂದ ಬಂದ ಆದಾಯವನ್ನು ರಾಜ್ಯ ಸರಕಾರಗಳೊಂದಿಗೆ ಹಂಚಿಕೊಳ್ಳಬೇಕು ಎಂಬ ತಮಿಳುನಾಡು ಸರಕಾರದ ಆಗ್ರಹಕ್ಕೆ ಈಗ ಜಾರ್ಖಂಡ್ ಹಾಗೂ ಛತ್ತೀಸ್‌ಗಢ ರಾಜ್ಯಗಳೂ ಧ್ವನಿಗೂಡಿಸಿವೆ. ಏರ್‌ಪೋರ್ಟ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರವೇ ಭೂಸ್ವಾಧೀನ ಮಾಡಿಕೊಂಡು, ಆ ಭೂಮಿಯನ್ನು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಉಚಿತವಾಗಿ ನೀಡುತ್ತದೆ.
ಕೇಂದ್ರ ಸರಕಾರವು ಆ ಭೂಮಿಯನ್ನು ಮೂರನೇ ವ್ಯಕ್ತಿಗೆ(ಖಾಸಗೀಕರಣ) ವರ್ಗಾಯಿಸುತ್ತದೆ ಎಂದರೆ, ಅದರಿಂದ ಬರುವ ಆದಾಯವನ್ನು ಕೇಂದ್ರವು ನಮ್ಮೊಂದಿಗೆ ಹಂಚಿಕೊಳ್ಳಬೇಕು ಎನ್ನುವುದು ರಾಜ್ಯಗಳ ವಾದ. ಇದೇ ವಾದವನ್ನು ಈಗ ಛತ್ತೀಸ್‌ಗಢ, ಜಾರ್ಖಂಡ್ ಸರಕಾರಗಳೂ ಕೇಂದ್ರ ಸರಕಾರದ ಮುಂದಿಟ್ಟಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.