ತಮಿಳುನಾಡಲ್ಲಿ ಹೀಗೊಂದು ಮಾದರಿ ದೀಪಾವಳಿ!
Team Udayavani, Oct 20, 2017, 12:41 PM IST
ಚೆನ್ನೈ: ದೇಶದ ಪಟಾಕಿ ರಾಜಧಾನಿ ಯೆಂದೇ ಖ್ಯಾತಿ ಪಡೆದಿರುವ ತಮಿಳು ನಾಡು ರಾಜ್ಯದ ಹಲವೆಡೆ ಈ ಬಾರಿಯ ದೀಪಾವಳಿಯ ವೇಳೆ ಪಟಾಕಿ ಶಬ್ದವನ್ನು ನಿಲ್ಲಿಸಲಾಗಿದೆ. ಈ ಪಟಾಕಿ “ಹಠಾವೊ’ ನಿರ್ಧಾರ ಸರಕಾರಿ ಆದೇಶದಿಂದ ಆಗಿದ್ದಲ್ಲ, ಜನರೇ ಸ್ವಯಂಪ್ರೇರಿತರಾಗಿ ಕೈಗೊಂಡ ನಿರ್ಧಾರ. ಹಾಗಾಗಿ, ಈ ಬಾರಿಯ ದೀಪಾವಳಿ ಈ ಪ್ರದೇಶಗಳಲ್ಲಿ ಮಾದರಿ ದೀಪಾವಳಿ ಎಂದೆನಿಸಿದೆ. ಈ ರೀತಿ ಪಟಾಕಿ ನಿಷೇಧ ಜಾರಿ ಗೊಂಡಿರುವುದು ತಿರುನಲ್ವೇನಿ ಜಿಲ್ಲೆಯ ಕೂಥಂಕೂಳಂ, ಸೇಲಂ ಜಿಲ್ಲೆ ಯ ವಾ ವಲ್ ತೊಪ್ಪು, ಪೆರಂಬೂರು, ಕಂಚೀ ಪುರಂನ ವಿಶಾರ್ ಎಂಬ ಹಳ್ಳಿಗಳಲ್ಲಿ.
ಕೂಥಂಕೂಳಂ ಹಳ್ಳಿಯ ಬಳಿ ಪಕ್ಷಿಧಾಮವಿದೆ. ಅಲ್ಲಿ ಸಾಧಾರಣವಾಗಿ ಸೆಪ್ಟಂಬರ್, ಅಕ್ಟೋಬರ್, ನವೆಂಬರ್ ಮಾಸಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗಳಿಂದ ಬಿಳಿ ಪೆಲಿಕನ್ ಹಕ್ಕಿಗಳು ವಲಸೆ ಬರುತ್ತವೆ. ಇದಲ್ಲದೆ ಫ್ಲಾಮಿಂಗೋ, ಸ್ಪನ್‌ಬಿಲ್, ಪೇಂಟೆಡ್ ಸ್ಟಾರ್ಕ್, ಎಗ್ರೆಟ್, ಡಕ, ಟೆರ್ನ್ ಹಾಗೂ ಐಬಿಎಸ್‌ನಂಥ ಅಪರೂಪದ ಪಕ್ಷಿಗಳು ಈ ಪಕ್ಷಿಧಾಮದಲ್ಲಿವೆ. ಆ ಪಕ್ಷಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಹಳ್ಳಿಯ ಜನರೇ ಪಟಾಕಿ ಸಿಡಿಸುವುದು ಬೇಡ ಎಂದು ನಿರ್ಧರಿಸಿದ್ದಾರೆ. ಯಾವುದೇ ಧಾರ್ಮಿಕ ಕಾರ್ಯ ಕ್ರಮಗಳಲ್ಲೂ ಧ್ವನಿವರ್ಧಕಗಳ ಬಳಸದಿರಲು ನಿರ್ಧರಿಸಲಾಗಿದೆ.
ಇದಲ್ಲದೆ, ವೇದಾಮುಗಮ್, ವೆಲ್ಲೂರ್, ಈರೋಡ್‌ಗಳಲ್ಲಿಯೂ ಪಟಾಕಿಗೆ ಸ್ವಯಂಪ್ರೇರಿತ ನಿಷೇಧ ಹೇರಲಾಗಿದೆ. ಆದರೆ, ಈ ಮೂರು ಹಳ್ಳಿಗಳ ವಿಶೇಷತೆಯೆಂದರೆ, ಇಲ್ಲಿ ಹೀಗೆ ಪಟಾಕಿ ನಿಷೇಧವಾಗುತ್ತಿರುವುದು ಸತತ 18ನೇ ದೀಪಾವಳಿಗೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.