ಸಿಜೆಐ ಆಗುವ ಕನಸು ಹೊತ್ತ ತನಿಷ್ಕಾಗೆ ಬೆನ್ನು ತಟ್ಟಿದ ಪ್ರಧಾನಿ ಮೋದಿ
Team Udayavani, Apr 12, 2023, 8:00 AM IST
ಇಂದೋರ್: ತನ್ನ 15ನೇ ವಯಸ್ಸಿನಲ್ಲೇ ಬಿಎ ಅಂತಿಮ ವರ್ಷದ ಪರೀಕ್ಷೆ ಬರೆ ಯುತ್ತಿರುವ ಮಧ್ಯಪ್ರದೇಶದ ಇಂದೋರ್‌ನ ತನಿಷ್ಕಾ ಸುಜಿತ್ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಆಗುವ ಕನಸು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ತನಿಷ್ಕಾ, ತನ್ನ ಆಕಾಂಕ್ಷೆ ಬಗ್ಗೆ ತಿಳಿಸಿದ್ದಾರೆ. ಬಿಎ ಪದವಿ ಪೂರ್ಣಗೊಳಿಸಿದ ಬಳಿಕ ಅಮೆರಿಕದಲ್ಲಿ ಕಾನೂನು ಪದವಿ ಪಡೆಯಬೇಕೆಂದು, ಅನಂತರ ಮುಂದೊಂದು ದಿನ ಸುಪ್ರೀಂ ಕೋರ್ಟ್ ಸಿಜೆಐ ಆಗಬೇಕೆಂದು ತನ್ನ ಮನದ ಇಂಗಿತವನ್ನು ತಿಳಿಸಿದ್ದಾರೆ.
ಇದನ್ನು ಕೇಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪ್ರಧಾನಿ ಮೋದಿ, “ಸುಪ್ರೀಂ ಕೋರ್ಟ್‌ಗೆ ಹೋಗಿ ನ್ಯಾಯವಾದಿಗಳ ವಾದವನ್ನು ಆಲಿಸು. ಇದರಿಂದ ನಿನ್ನ ಗುರಿ ಮುಟ್ಟಲು ಪ್ರೇರಣೆ ದೊರೆಯಲಿದೆ’ ಎಂದು ಸಲಹೆ ನೀಡಿದ್ದಾರೆ.
10ನೇ ತರಗತಿ ಪೂರ್ಣಗೊಳಿಸಿದ ತನಿಷ್ಕಾ, 13ನೇ ವಯಸ್ಸಿನಲ್ಲೇ ಇಂದೋರ್‌ನ ದೇವಿ ಅಹಿಲ್ಯಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಪಾಸ್ ಆಗಿದ್ದು, ವಿಶೇಷ ಪ್ರಕರಣದಲ್ಲಿ ಆಕೆಗೆ ಬಿಎ(ಮನೋವಿಜ್ಞಾನ) ಪದವಿಗೆ ಪ್ರವೇಶ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.