ಏರ್ ಇಂಡಿಯಾಕ್ಕೆ 500 ಹೊಸ ವಿಮಾನ ಖರೀದಿ? ಏರ್‌ಬಸ್, ಬೋಯಿಂಗ್ ಜತೆಗೆ ಮಾತುಕತೆ
Team Udayavani, Dec 12, 2022, 7:10 AM IST
ಹೊಸದಿಲ್ಲಿ/ಪ್ಯಾರಿಸ್: ಏರ್ ಇಂಡಿಯಾದ ಹೊಸ ಮಾಲಕ ಸಂಸ್ಥೆ ಟಾಟಾ ಗ್ರೂಪ್ ಬರೋಬ್ಬರಿ 500 ಹೊಸ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಏರ್‌ಬಸ್ ಮತ್ತು ಬೋಯಿಂಗ್ ಸಂಸ್ಥೆಗಳ ಜತೆಗೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಹಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಖರೀದಿ ಮಾಡುವ ವಿಮಾನಗಳ ಪೈಕಿ ಏರ್‌ಬಸ್ ಎ350 ಮತ್ತು ಬೋಯಿಂಗ್ 787 ಮತ್ತು 777ನ 100 ಮಾದರಿಯದ್ದು, 400 ಸಣ್ಣ ಪ್ರಮಾಣದ ವಿಮಾನಗಳು ಸೇರಿವೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಟಾಟಾ ಗ್ರೂಪ್ ಮತ್ತು 2 ವಿಮಾನ ಪೂರೈಕೆಯ ಕಂಪೆನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಒಟ್ಟು ಡೀಲ್‌ನ ಮೊತ್ತ 100 ಬಿಲಿಯನ್ ಡಾಲರ್ ಮೀರುವ ಸಾಧ್ಯತೆಯಿದೆ.ದಶಕಗಳ ಹಿಂದೆ ಅಮೆರಿಕದ ವಿಮಾನ ಸಂಸ್ಥೆಯೊಂದು 460 ವಿಮಾನಗಳನ್ನು ಖರೀದಿ ಮಾಡುವ ಬಗ್ಗೆ ಎರಡೂ ಕಂಪೆನಿಗಳ ಜತೆಗೆ ಮಾತುಕತೆ ನಡೆಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.