Tax share: ರಾಜ್ಯಕ್ಕೆ ಕೇಂದ್ರದಿಂದ 6,310 ಕೋ.ರೂ. ಹಂಚಿಕೆ
Team Udayavani, Jan 11, 2025, 12:42 AM IST
ಹೊಸದಿಲ್ಲಿ: ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ 1.73 ಲಕ್ಷ ಕೋಟಿ ರೂ. ತೆರಿಗೆ ಪಾಲನ್ನು ಹಂಚಿಕೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ ದಕ್ಕಿದ್ದು 6,310.40 ಕೋಟಿ ರೂ.! ರಾಜ್ಯ ಸರಕಾರಗಳ ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಮತ್ತು ಅವುಗಳ ಅಭಿವೃದ್ಧಿ, ಕಲ್ಯಾಣ ಕಾರ್ಯಕ್ರಮ ಗಳ ವೆಚ್ಚಕ್ಕಾಗಿ ಈ ತೆರಿಗೆ ಹಂಚಿಕೆ ಮಾಡಲಾಗುತ್ತದೆ. ಉ. ಪ್ರದೇಶಕ್ಕೆ 31,039.84 ಕೋ. ರೂ., ಬಿಹಾರಕ್ಕೆ 17,403.36 ಕೋ. ರೂ., ಮ.ಪ್ರದೇಶಕ್ಕೆ 13, 582.86 ಕೋ. ರೂ., ಮಹಾರಾಷ್ಟ್ರಕ್ಕೆ 10,930.31 ಕೋಟಿ ರೂ., ರಾಜಸ್ಥಾನಕ್ಕೆ 10,426.78 ಕೋಟಿ ರೂ. ಮತ್ತು ಪಶ್ಚಿಮ ಬಂಗಾಲಕ್ಕೆ 13,017.06 ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗಿದೆ. ಗೋವಾಕ್ಕೆ 667.91 ಕೋಟಿ ರೂ., ಸಿಕ್ಕಿಂಗೆ 671.35 ಕೋಟಿ ರೂ. ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.