2023ರಲ್ಲಿ ಇನ್ಫೋಸಿಸ್, ಟಿಸಿಎಸ್‌ನಿಂದ 90,000 ಮಂದಿಗೆ ಉದ್ಯೋಗ
Team Udayavani, Jul 8, 2022, 6:30 AM IST
ನವದೆಹಲಿ: ದೇಶದ ಬೃಹತ್ ತಾಂತ್ರಿಕ ದೈತ್ಯ ಸಂಸ್ಥೆಗಳಾದ ಇನ್ಫೋಸಿಸ್ ಮತ್ತು ಟಿಸಿಎಸ್‌ಗಳು 2023ರ ವಿತ್ತೀಯ ವರ್ಷದಲ್ಲಿ 90,000 ಹೊಸಬರಿಗೆ ಉದ್ಯೋಗ ನೀಡುವ ಲೆಕ್ಕಾಚಾರದಲ್ಲಿವೆ.
ಪ್ರತೀ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಐಟಿ ಕಾಲೇಜುಗಳಲ್ಲಿ ಪದವಿ ಮುಗಿಸಿಕೊಂಡು ವಿದ್ಯಾರ್ಥಿಗಳು ಹೊರಬರುತ್ತಾರೆ. ಅಂತಹವರನ್ನು ಕ್ಯಾಂಪಸ್‌ಗಳಲ್ಲೇ ನೇರವಾಗಿ ಆಯ್ಕೆ ಮಾಡುವ ಉದ್ದೇಶ ಹೊಂದಿವೆ. ಇನ್ಫೋಸಿಸ್‌ಗೆ 50,000 ವ್ಯಕ್ತಿಗಳನ್ನು ಉದ್ಯೋಗಕ್ಕೆ ತೆಗೆದುಕೊಳ್ಳುವ ಗುರಿಯಿದ್ದರೆ, ಟಿಸಿಎಸ್ 40,000 ಹೊಸಬರಿಗೆ ಕೆಲಸ ಕೊಡುವ ನಿರೀಕ್ಷೆಯಿದೆ.
2021ರ ವಿತ್ತೀಯ ವರ್ಷದಲ್ಲಿ ಈ ಎರಡೂ ಕಂಪನಿಗಳು ಸೇರಿ 61,000 ಹೊಸಬರಿಗೆ ಉದ್ಯೋಗ ನೀಡಿದ್ದವು. 2021-22ರ ವಿತ್ತೀಯ ವರ್ಷದಲ್ಲಿ ಇನ್ಫೋಸಿಸ್ ಭಾರತ-ವಿಶ್ವಾದ್ಯಂತ 85,000 ಹೊಸಬರಿಗೆ ಕೆಲಸ ನೀಡಿತ್ತು. ಇನ್ನು ಟಿಸಿಎಸ್ ಸದ್ಯದಲ್ಲೇ ಶೇ.25 ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಬಹುತೇಕ ಐಟಿ ಕಂಪನಿಗಳು ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುತ್ತಿವೆ.
ವಿಶೇಷವೆಂದರೆ ಇನ್ಫೋಸಿಸ್‌ನಲ್ಲಿ ಕೆಲಸ ಬಿಡುವವರ ಸಂಖ್ಯೆ ಮಾರ್ಚ್ ವೇಳೆ ಶೇ.25.5ರಿಂದ ಶೇ.27.7ಕ್ಕೇರಿತ್ತು. ಇದರ ನಡುವೆಯೇ ಅದು ಕೆಲಸ ನೀಡುವ ಪ್ರಮಾಣವನ್ನೂ ಹೆಚ್ಚಿಸಿದೆ. ಹಾಗೆಯೇ ಮನೆಯಿಂದಲೇ ಕೆಲಸ ಮಾಡುವುದನ್ನೂ ಮುಂದುವರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.