ಅಧಿಕೃತ ಯಾತ್ರೆಗೂ ಮುಂಚೆ ಅಮರನಾಥ ಗುಹಾಲಯಕ್ಕೆ ಭೇಟಿ ನೀಡಿದರೇ ಆ ಎಂಟು ಜನ?

ಅಚ್ಚರಿ ಮೂಡಿಸಿದೆ ಆ ಯಾತ್ರಿಕರ ತಂಡ ಪ್ರಕಟಿಸಿರುವ ನೈಸರ್ಗಿಕ ಹಿಮಲಿಂಗದ ಚಿತ್ರಗಳು!

Team Udayavani, Apr 29, 2019, 1:09 PM IST

Amarnath-726

ಯಾತ್ರಾರ್ಥಿಗಳ ತಂಡ ಹಂಚಿಕೊಂಡಿರುವ ಅಮರನಾಥ ಗುಹಾಲಯದಲ್ಲಿ ರೂಪುಗೊಂಡಿರುವ ನೈಸರ್ಗಿಕ ಶಿವಲಿಂಗದ ಚಿತ್ರ.

ನವದೆಹಲಿ: ಹಿಂದೂಗಳಿಗೆ ಪರಮ ಪವಿತ್ರವಾಗಿರುವ ಅಮರನಾಥ ಯಾತ್ರೆ ಪ್ರಾರಂಭವಾಗಲು ಇನ್ನೂ ಎರಡು ತಿಂಗಳು ಬಾಕಿಯಿದೆ. ಆದರೆ ಯಾತ್ರಾರ್ಥಿಗಳ ತಂಡವೊಂದು ತಾವು ಈಗಾಗಲೇ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಕೈಗೊಂಡಿರುವುದಾಗಿ ಹೇಳಿಕೊಂಡಿದೆ. ಮಾತ್ರವಲ್ಲದೇ ತಾವು ಅಲ್ಲಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ತೆಗೆದಿರುವುದಾಗಿ ಹೇಳಿಕೊಂಡಿರುವ ನೈಸರ್ಗಿಕ ಶಿವಲಿಂಗದ ಒಂದಷ್ಟು ಫೊಟೋಗಳನ್ನು ಸಹ ಈ ತಂಡ ಪ್ರಕಟಿಸಿದೆ.

ಈ ಋತುವಿನಲ್ಲಿ ಅಮರನಾಥ ಯಾತ್ರೆ ಕೈಗೊಂಡಿರುವ ಮೊದಲ ತಂಡ ನಮ್ಮದಾಗಿದೆ ಎಂದು ಎಂಟು ಜನ ಯಾತ್ರಿಕರ ಈ ಗುಂಪು ಹೇಳಿಕೊಂಡಿದೆ. ಎಪ್ರಿಲ್‌ ಕೊನೆಯ ವಾರದಲ್ಲಿ 20ನೇ ತಾರೀಖೀನಿಂದ 25ರವರೆಗೆ ತಾವು ಅಮರನಾಥ ಗುಹಾಲಯಕ್ಕೆ ತೆರಳಿರುವುದಾಗಿಯೂ ಈ ತಂಡ ಇದೀಗ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ನೈಸರ್ಗಿಕ ಸ್ವರೂಪದ ಹಿಮರೂಪಿ ಶಿವಲಿಂಗವು ಈ ವರ್ಷ ಇನ್ನಷ್ಟು ದೊಡ್ಡದಾಗಿ ಕಾಣಿಸುತ್ತಿದೆ ಎಂದು ಯಾತ್ರಿಗಳ ತಂಡ ಹೇಳಿಕೊಂಡಿದೆ ಮತ್ತು ಅಮರನಾಥಕ್ಕೆ ಸಾಗುವ ದಾರಿಯಲ್ಲಿ ಈಗಲೂ10-15 ಅಡಿಗಳಷ್ಟು ಹಿಮ ತುಂಬಿಕೊಂಡಿದೆ ಎಂದು ಈ ಯಾತ್ರಾರ್ಥಿಗಳ ತಂಡ ತಿಳಿಸಿದೆ.

ವಿಚಿತ್ರವೆಂದರೆ ಅಮರನಾಥ ಯಾತ್ರೆಯನ್ನು ಸಂಘಟಿಸುವ ಶ್ರೀ ಅಮರನಾಥ್‌ ಜೀ ದೇವಸ್ಥಾನ ಮಂಡಳಿಯ ಅಧಿಕಾರಿಗಳೇ ಈ ಬಾರಿ ಇನ್ನೂ ಗುಹಾಲಯಕ್ಕೆ ಭೇಟಿ ನೀಡಿಲ್ಲ. ಈ ಎಂಟು ಜನ ಯತ್ರಾರ್ಥಿಗಳ ತಂಡ ಅಲ್ಲಿ ತೆರಳಿರುವುದನ್ನು ಅಧಿಕೃತವಾಗಿ ಮಂಡಳಿಯು ಇನ್ನೂ ದೃಢಪಡಿಸಿಲ್ಲ.

ಈ ಬಾರಿಯ 46 ದಿನಗಳ ಅಮರನಾಥ ಯಾತ್ರೆಯು ಜುಲೈ 01ರ ಮಾಸ ಶಿವರಾತ್ರಿ ದಿನದಂದು ಪ್ರಾರಂಭಗೊಳ್ಳಲಿದೆ ಹಾಗೂ ಆಗಸ್ಟ್‌ 15ರ ಶ್ರಾವಣ ಪೌರ್ಣಮಿ ಮತ್ತು ರಕ್ಷಾ ಬಂಧನದ ದಿನ ಯಾತ್ರ ಸಂಪನ್ನಗೊಳ್ಳಲಿದೆ.

ಅಮರನಾಥ ಗುಹಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಸಾಮಾನ್ಯವಾಗಿ ಎರಡು ಮಾರ್ಗಗಳಲ್ಲಿ ಈ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಒಂದು ಅನಂತನಾಗ್‌ ಜಿಲ್ಲೆಯಲ್ಲಿರುವ ಸಾಂಪ್ರದಾಯಿಕ ಪಹಾಲ್ಗಂ ಮಾರ್ಗವಾದರೆ ಇನ್ನೊಂದು ಗಂದೇರ್‌ ಬಾಲ್‌ ಜಿಲ್ಲೆಯ ಮೂಲಕ ಸಾಗುವ ಬಾಲ್ಟಲ್‌ ಹಾದಿ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Divorce: A.R. Rahman ends 29 years of marriage

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

Protect Manipur: Mallikarjun Kharge’s letter to the President

ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ

Madras High Court stays awarding of M.S. Subbulakshmi Award to Krishna

Chennai: ಕೃಷ್ಣಗೆ ಎಂ.ಎಸ್‌.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್‌ ಹೈಕೋರ್ಟ್‌ ತಡೆ

Savarkar defamation case:: Rahul ordered to appear in person on December 2

Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ

ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

police

Siddapura: ಕಂಟೇನರ್‌ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.