ಜೈರಾ ಕಿರುಕುಳ:ನನ್ನ ಗಂಡ ನಿದ್ದೆ ಹೋಗಿದ್ದ;ಮುಗ್ಧ: ಆರೋಪಿ ಪತ್ನಿ
Team Udayavani, Dec 11, 2017, 3:56 PM IST
ಹೊಸದಿಲ್ಲಿ : ದಿಲ್ಲಿ – ಮುಂಬಯಿ ವಿಸ್ತಾರಾ ವಿಮಾನದಲ್ಲಿ ದಂಗಲ್ ನಟಿ ಜೈರಾ ವಾಸಿಂ ಗೆ ಲೈಂಗಿಕ ಕಿರಕುಳ ನೀಡಿದನೆನ್ನಲಾದ ವ್ಯಕ್ತಿಯ ಹೆಂಡತಿಯು “ನನ್ನ ಗಂಡ ತುಂಬ ದಣಿದಿದ್ದು ವಿಮಾನದಲ್ಲಿ ನಿದ್ದೆ ಹೋಗಿದ್ದ; ಆತ ಅಮಾಯಕ, ಲೈಂಗಿಕ ಕಿರುಕುಳ ನೀಡುವವನಲ್ಲ; ಏನಿದ್ದರೂ ಆಕೆ (ಜೈರಾ) ತಪ್ಪು ಗ್ರಹಿಕೆಯಿಂದ ದೂರು ನೀಡಿದ್ದಿರಬಹುದು’ ಎಂದು ಇಂದು ಸೋಮವಾರ ಹೇಳಿದ್ದಾಳೆ.
“ನನ್ನ ಗಂಡ ಲೈಂಗಿಕ ಕಿರುಕುಳ ನೀಡಿರುವುದು ನಿಜವೇ ಆದಲ್ಲಿ ಜೈರಾ ವಾಸಿಂ ಅದನ್ನು ಸಹಿಸಿಕೊಂಡು ಸುಮ್ಮನಿದ್ದದ್ದು ಯಾಕೆ ? ತತ್‌ಕ್ಷಣವೇ ಅದನ್ನು ಏಕೆ ಪ್ರತಿಭಟಿಸಲಿಲ್ಲ’ ಎಂದು ಆರೋಪಿ ವ್ಯಕ್ತಿಯ ಪತ್ನಿ ಜೈರಾಗೆ ಪ್ರಶ್ನಿಸಿದ್ದಾಳೆ.
“ನನ್ನ ಗಂಡ ನಮ್ಮ ಕುಟುಂಬದಲ್ಲಿ ಸತ್ತ ಯಾರೋ ಒಬ್ಬರ ಅಂತ್ಯಕ್ರಿಯೆಗೆ ಹೋಗಲು ವಿಮಾನ ಪ್ರಯಾಣ ಮಾಡುತ್ತಿದ್ದರು. ಅವರಿಗೆ ಕಳೆದ 24 ತಾಸುಗಳಲ್ಲಿ ನಿದ್ದೆಯೇ ಇರಲಿಲ್ಲ; ಹಾಗಾಗಿ ಅವರು ವಿಮಾನ ಪರಿಚಾರಿಕೆಯರಲ್ಲಿ ನನಗೆ ಯಾವುದೇ ರೀತಿ ತೊಂದರೆ ಕೊಡದಿರಿ; ನನಗೆ ನಿದ್ದೆ ಮಾಡುವುದಿದೆ ಎಂದು ಹೇಳಿಯೇ ಮಲಗಿದ್ದರು’ ಎಂದು ಆರೋಪಿತ ವ್ಯಕ್ತಿಯ ಪತ್ನಿ ಹೇಳಿದ್ದಾಳೆ.
ಲೈಂಗಿಕ ಕಿರುಕುಳ ನೀಡಿದನೆನ್ನಲಾದ ವ್ಯಕ್ತಿಯು ವಿಮಾನದಲ್ಲಿ ಜೈರಾ ಹಿಂದಿನ ಸೀಟಿನಲ್ಲಿ ಆಸೀನನಾಗಿದ್ದು ತನ್ನ ಕಾರನ್ನು ಜೈರಾ ಸೀಟಿನ ಆರ್ಮ್ ರೆಸ್ಟ್ ಮೇಲೆ ಚಾಚಿಕೊಂಡು ಮಲಗಿದ್ದ.
ಜೈರಾ ನೀಡಿರುವ ದೂರಿನ ಪ್ರಕಾರ ಆ ವಕ್ತಿಯು ತನ್ನ ಕಾಲ ಬೆರಳಿನಿಂದ ನನ್ನ ಬೆನ್ನು ಕುತ್ತಿಗೆ, ಹೆಗಲು ಮುಂತಾಗಿ ದೇಹದ ಹಿಂಬದಿಯನ್ನು ಸವರುತ್ತಿದ್ದ; ವಿಮಾನದಲ್ಲಿ ಆ ಹೊತ್ತಿನಲ್ಲಿ ದೀಪಗಳನ್ನು ಡಿಮ್ ಗೊಳಿಸಲಾಗಿತ್ತು. ಹಾಗಾಗಿ ನನಗೆ ಆತನ ಲೈಂಗಿಕ ಕಿರುಕುಳದ ಚರ್ಯೆಯನ್ನು ಸ್ಪಷ್ಟವಾಗಿ ವಿಡಿಯೋ ಮಾಡಲಾಗಲಿಲ್ಲ ಎಂದು ಹೇಳಿದ್ದಳು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.