ಹುಡುಗರೊಂದಿಗೆ ಬೆರೆಯುತ್ತಿದ್ದ ಅಕ್ಕನನ್ನು ಕೊಂದ ಸಹೋದರ ಅರೆಸ್ಟ್
Team Udayavani, Aug 28, 2018, 11:06 AM IST
ಪಾಲ್‌ಘರ್, ಮಹಾರಾಷ್ಟ್ರ : ತನ್ನ ಮನೆ ಪರಿಸರದ ಇತರ ಹುಡುಗರೊಂದಿಗೆ ತನ್ನ ಅಕ್ಕ ಬೆರೆಯುವ ಕಾರಣಕ್ಕೆ ಕೋಪೋದ್ರಿಕ್ತನಾದ ಆಕೆಯ 17ರ ಹರೆಯದ ಹೋದರ ಆಕೆಯನ್ನು ಕೊಂದಿರುವ ಘಟನೆ ವರದಿಯಾಗಿದೆ.
ಪಾಲ್‌ಘರ್‌ನ ವಾಲೀವ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 19ರ ಹರೆಯದ ತನ್ನ ಅಕ್ಕ ಮನೆ ಪರಿಸರದ ಇತರ ಹುಡುಗರೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ಬೆರೆಯುವುದರ ಬಗ್ಗೆ ಪರಿಸರದವರು ಆಡಿಕೊಳ್ಳುತ್ತಿದ್ದುದು ಆಕೆಯ ಸಹೋದರನಿಗೆ ಕೆಟ್ಟದ್ದೆನಿಸಿತ್ತು. ಈ ಬಗ್ಗೆ ಆತ ತನ್ನ ಅಕ್ಕನಿಗೆ ಹಲವು ಬಾರಿ ಎಚ್ಚರಿಕೆ ಕೊಟ್ಟಿದ್ದ. ಆದರೂ ಆಕೆ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ.
ಇದರಿಂದ ಕೋಪೋದ್ರಿಕ್ತನಾದ ಸಹೋದರ ತನ್ನ ಅಕ್ಕನನ್ನು ಆಕೆಯ ದುಪಟ್ಟಾದಿಂದ ಕುತ್ತಿಗೆ ಬಿಗಿದು ಕೊಲೆಗೈದ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಭರತ್ ಜಾಧವ್ ತಿಳಿಸಿದ್ದಾರೆ. ಪೊಲೀಸರು ಆರೋಪಿ ಸಹೋದರನನ್ನು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.