ಲಾಲು ಪುತ್ರ ತೇಜ್ಪ್ರತಾಪ್ಗೆ ಮದುವೆ; ಕನ್ಯೆ ಯಾರು ಗೊತ್ತೆ?
Team Udayavani, Apr 6, 2018, 10:47 AM IST
ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ಯಾದವ್ ಅವರ ಹಿರಿಯ ಪುತ್ರ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.
ಮಾಜಿ ಸಚಿವರಾಗಿರುವ ಚಂದ್ರಿಕಾ ಪ್ರಸಾದ್ ರಾಯ್ ಅವರ ಪುತ್ರಿ ಐಶ್ವರ್ಯಾ ರಾಯ್ ಎಂಬಾಕೆಯನ್ನು 30 ರ ಹರೆಯದ ತೇಜ್ ವಿವಾಹವಾಗುತ್ತಿದ್ದು, ಎಪ್ರಿಲ್ 18 ರಂದ ಎಂಗೇಜ್ಮೆಂಟ್ ನಡೆಯಲಿದ್ದು ಮೇ 12 ಕ್ಕೆ ವಿವಾಹಕ್ಕೆ ಮಹೂರ್ತ ನಿಗದಿಯಾಗಿರುವುದಾಗಿ ವರದಿಯಾಗಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿ ದಾರೋಗಾ ಪ್ರಸಾದ್ ರಾಯ್ ಅವರ ಮೊಮ್ಮಗಳಾಗಿರುವ ಐಶ್ವರ್ಯಾ ಪಾಟ್ನಾದಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದು, ದೆಹಲಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.
ಮದುವೆಯ ಮಾತುಕತೆಯನ್ನು ತೇಜ್ ಪ್ರತಾಪ್ ತಾಯಿ ರಾಬ್ರಿ ದೇವಿ ಅವರೆ ಮುಂದೆ ನಿಂತು ಮಾಡಿರುವುದಾಗಿ ತಿಳಿದು ಬಂದಿದೆ.
ಬಿಜೆಪಿ ನಾಯಕ ಸುಶೀಲ್ ಮೋದಿ ಅವರು ‘ತೇಜ್ಪ್ರತಾಪ್ ಗೊಂದು ಕನ್ಯೆ ಹುಡುಕಿ . ಯಾವುದೇ ವರದಕ್ಷಿಣೆ ಬೇಡ, ಅಂಗ ದಾನಕ್ಕಾಗಿ ಪ್ರತಿಜ್ಞೆ ಮಾಡುವುದು ಮತ್ತು ವಿವಾಹಕ್ಕೆಅಡ್ಡಿಯಾಗುವ ಯಾವುದೇ ಬೆದರಿಕೆಗಳಿಲ್ಲ’ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ತೇಜ್ಪ್ರತಾಪ್ ‘ಸುಶೀಲ್ ಮೋದಿ ಮನೆಗೆ ನುಗ್ಗಿ ಅವರ ಪುತ್ರನ ಮದುವೆಯನ್ನು ತಡೆಯುತ್ತೇನೆ’ ಎಂದಿದ್ದರು. ಬಳಿಕ ‘ಮೋದಿ ಅವರೇ ನನಗೊಂದು ಹುಡುಗಿ ಹುಡುಕಲಿ’ ಎಂದು ತಿರುಗೇಟು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.