ಸೋನಾ ಅಕ್ಕಿಗೆ ಭಾರೀ ಬೇಡಿಕೆ
Team Udayavani, Jan 5, 2021, 12:41 AM IST
ಹೈದರಾಬಾದ್: ತೆಲಂಗಾಣದಲ್ಲಿ ಅಭಿವೃದ್ಧಿ ಯಾಗಿರುವ ಹೊಸ ಮಾದರಿಯ ಅಕ್ಕಿ “ತೆಲಂಗಾಣ ಸೋನಾ’ಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮಧುಮೇಹ ನಿಯಂತ್ರಕ ಅಕ್ಕಿಯೆಂದೇ ಇದು ಖ್ಯಾತಿ ಗಳಿಸಿದೆ. ಇದಕ್ಕೆ ತೆಲಂಗಾಣ ಮಾತ್ರವಲ್ಲ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಲ, ಒಡಿಶಾ, ಛತ್ತೀಸಗಢಗಳಲ್ಲೂ ಭಾರೀ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಲಕ್ಷಾಂತರ ಎಕ್ರೆ ಜಾಗದಲ್ಲಿ ಈ ಅಕ್ಕಿಯನ್ನು ಬೆಳೆಯಲು ಶುರು ಮಾಡಲಾಗಿದೆ. ಈ ಹೊಸ ತಳಿಯನ್ನು ಅಭಿವೃದ್ಧಿಪಡಿಸಿದ್ದು, ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಯಶಂಕರ್.
ಈ ಬೆಳೆ ಉತ್ತಮ ಇಳುವರಿಯನ್ನು ನೀಡುತ್ತಿದೆ. ಗುಣಮಟ್ಟವೂ ಉತ್ತಮವಾಗಿದೆ. ರುಚಿಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇವೆಲ್ಲ ಕಾರಣಗಳಿಂದ ಬೇಡಿಕೆ ಏರುತ್ತಲೇ ಸಾಗಿದೆ ಎಂದು ತೆಲಂಗಾಣ ಕೃಷಿ ವಿಶ್ವವಿದ್ಯಾಲಯ ಸಂಶೋಧನ ವಿಭಾಗದ ಮುಖ್ಯಸ್ಥ ಡಾ| ಜಗದೀಶ್ವರ್ ಹೇಳಿದ್ದಾರೆ. ಭಾರೀ ಬೇಡಿಕೆಯ ಪರಿಣಾಮ ಒಟ್ಟಾರೆ 25 ಲಕ್ಷ ಎಕ್ರೆಯಲ್ಲಿ ಈ ಅಕ್ಕಿಯನ್ನು ಬೆಳೆಯಲಾಗುತ್ತಿದೆ. ತೆಲಂಗಾಣ ಹೊರತುಪಡಿಸಿ ಅನ್ಯರಾಜ್ಯಗಳಲ್ಲಿ 10 ಲಕ್ಷ ಎಕರೆಯಲ್ಲಿ ಬೆಳೆಯಲು ಶುರುವಾಗಿದೆ.
ಈ ಅಕ್ಕಿಯಲ್ಲಿ ಸಕ್ಕರೆ ಅಂಶದ ಪ್ರಮಾಣ ತೀರಾ ಕಡಿಮೆಯಾಗಿರುವುದೇ ಬೇಡಿಕೆ ಹೆಚ್ಚಾಗಲು ಕಾರಣ. ಹಲವು ಪರೀಕ್ಷೆಗಳಲ್ಲಿ ಇದು ಸಾಬೀತಾಗಿದೆ. ತೆಲಂಗಾಣದ ಮಾರುಕಟ್ಟೆಯಲ್ಲಿ ಒಂದು ಕೆಜಿ ಅಕ್ಕಿಗೆ ಈಗ 100ರಿಂದ 145 ರೂ. ಬೆಲೆಯಿದೆ. ಒಂದು ಕ್ವಿಂಟಾಲ್ಗೆ 2500 ರೂ. ಬೆಲೆಯಿದೆ. ವಿಡಂಬನೆಯೆಂದರೆ ರೈತರಿಗೆ ಸಿಗುವುದು ಮಾತ್ರ ಒಂದು ಕೆಜಿ ಅಕ್ಕಿಗೆ ಕೇವಲ 40 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.