ಪಶುವೈದ್ಯೆಯ ಹತ್ಯೆ ಪ್ರಕರಣ: ರಕ್ಕಸರ ಗಲ್ಲಿಗೇರಿಸಿ
Team Udayavani, Dec 1, 2019, 6:15 AM IST
ಹೊಸದಿಲ್ಲಿ/ಹೈದರಾಬಾದ್: “ಅತ್ಯಾಚಾರಿಗಳನ್ನು ನಮಗೆ ಒಪ್ಪಿಸಿ. ಅವರಿಗೇನು ಶಿಕ್ಷೆ ಕೊಡಬೇಕೋ ಅದನ್ನು ನಾವೇ ಕೊಡುತ್ತೇವೆ… ಅಮಾಯಕ ಹೆಣ್ಣುಮಗಳನ್ನು ಕೊಂದ ರಾಕ್ಷಸ ರನ್ನು ಗಲ್ಲಿಗೇರಿಸಿ… ಎನ್‌ಕೌಂಟರ್ ಮಾಡಿ ಕೊಂದುಬಿಡಿ’.
ಇಂಥ ನೂರಾರು ಆಕ್ರೋಶಭರಿತ ಮಾತುಗಳು ತೆಲಂಗಾಣಾದ್ಯಂತ ಪ್ರತಿಧ್ವನಿಸುತ್ತಿವೆ. ಸಹಾಯ ನೀಡುವ ನೆಪದಲ್ಲಿ ಹೈದರಾಬಾದ್‌ನ 25ರ ಹರೆಯದ ಪಶುವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಸುಟ್ಟು ಹಾಕಿದ ಘಟನೆಯು ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ವ್ಯಾಪಕ ಪ್ರತಿಭಟನೆಗಳು ಆರಂಭವಾಗಿವೆ.
ಶನಿವಾರ ದಿಲ್ಲಿ, ಚೆನ್ನೈ, ಹೈದರಾಬಾದ್ ಸಹಿತ ಹಲವೆಡೆ ಯುವ ಸಮುದಾಯ, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಬೀದಿಗಿಳಿದಿವೆ. ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಇಟ್ಟಿರುವಂಥ ಹೈದರಾಬಾದ್‌ನ ಶದ್ನಾಗರ್ ಪೊಲೀಸ್ ಠಾಣೆಯ ಹೊರಗೆ ಶನಿವಾರ ಜಮಾಯಿಸಿದ ಜನಸಮೂಹವು “ಅತ್ಯಾಚಾರಿಗಳನ್ನು ನಮಗೊಪ್ಪಿಸಿ’ ಎಂದು ಒತ್ತಾ ಯಿಸಿದೆ.
ಅವರನ್ನು ಕೋರ್ಟ್‌ಗೆ ಕರೆದೊಯ್ದರೆ ಸಾಲದು. ಸಂತ್ರಸ್ತೆಯೊಂದಿಗೆ ಅವರು ಹೇಗೆ ನಡೆದುಕೊಂಡರೋ ಅದೇ ರೀತಿ ಹೀನಾಯವಾದ ಚಿತ್ರಹಿಂಸೆಯನ್ನು ದೋಷಿಗಳಿಗೆ ನೀಡಬೇಕು. ನಿಮಗೆ ಅದು ಸಾಧ್ಯವಿಲ್ಲ ಎಂದಾದರೆ ಅವರನ್ನು ನಮಗೊಪ್ಪಿಸಿ; ನಾವೇ ನೋಡಿಕೊಳ್ಳುತ್ತೇವೆ’ ಎಂದು ಘೋಷಣೆ ಕೂಗಿದರು.
ಲಾಠೀಪ್ರಹಾರ
ಮನವೊಲಿಕೆಗೆ ಬಗ್ಗದ್ದಕ್ಕೆ ಕೊನೆಗೆ ಪೊಲೀಸರು ಲಘು ಲಾಠೀಪ್ರಹಾರ ಮಾಡುವ ಮೂಲಕ ಪ್ರತಿಭಟನಕಾರರನ್ನು ಚದುರಿಸಿದರು. ವಿದ್ಯಾರ್ಥಿ ಗಳ ಮತ್ತೂಂದು ಗುಂಪು ಸಂತ್ರಸ್ತೆಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ, ಆಕೆಯ ಮನೆ ಮುಂದೆ ಪ್ರತಿಭಟನೆ ನಡೆಸಿದೆ. ಜತೆಗೆ ಶಂಶಾಬಾದ್‌ನಲ್ಲಿ ರಸ್ತೆತಡೆ ನಡೆಸಿದ್ದರಿಂದ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಈ ನಡುವೆ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಸ್ಥಳೀಯ ಬಾರ್ ಅಸೋಸಿಯೇಶನ್ ಕೂಡ ನಿರ್ಧಾರ ಕೈಗೊಂಡಿದೆ.
ಜನರ ತೀವ್ರ ಪ್ರತಿಭಟನೆಯಿಂದ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಅಸಾಧ್ಯವಾದ ಕಾರಣ ಪೊಲೀಸ್ ಠಾಣೆಗೆ ಆಗಮಿ
ಸಿದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವರು 14 ದಿನಗಳ ನ್ಯಾಯಾಂಗ ಬಂಧನದ ಆದೇಶ ಜಾರಿ ಗೊಳಿಸಿದರು. ಅನಂತರ ಆರೋಪಿಗಳನ್ನು ಜೈಲಿಗೆ ಕರೆದೊಯ್ಯುವಾಗ ಪೊಲೀಸ್ ವಾಹನಗಳ ಮೇಲೆ ಪ್ರತಿಭಟನಕಾರರು ಕಲ್ಲೆಸೆದರು.
ರಾಜ್ಯಪಾಲರ ಭರವಸೆ
ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಕೋರ್ಟ್ ನಲ್ಲಿ ದಿನಂಪ್ರತಿ ವಿಚಾರಣೆ ನಡೆಸಲು ನಿರ್ಧರಿಸ ಲಾಗಿದೆ. ಸಂತ್ರಸ್ತೆಯ ಮನೆಯವರಿಗೆ ನ್ಯಾಯ ಒದಗಿಸಲು ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂದು ತೆಲಂಗಾಣ ರಾಜ್ಯಪಾಲರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.