ಹೊಸ ರಾಜಕೀಯ ಲೆಕ್ಕಾಚಾರ: ಟಿಆರ್‌ಎಸ್ ಗೆ ಮರು ನಾಮಕರಣ ಮಾಡಿದ ರಾವ್
Team Udayavani, Oct 5, 2022, 2:08 PM IST
ಹೈದರಾಬಾದ್ :ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಯನ್ನು ‘ಭಾರತ್ ರಾಷ್ಟ್ರ ಸಮಿತಿ’ (ಬಿಆರ್‌ಎಸ್) ಎಂದು ಬುಧವಾರ ಮರುನಾಮಕರಣ ಮಾಡಲಾಗಿದೆ.
ಪಕ್ಷದ ಮಹಾಸಭೆಯಲ್ಲಿ ಮರುನಾಮಕರಣ ಮಾಡುವ ನಿರ್ಧಾರವನ್ನು ನಿರ್ಣಯ ಅಂಗೀಕರಿಸಲಾಗಿದೆ. ಪಕ್ಷದ ಕಾರ್ಯಕರ್ತರು ಈ ನಿರ್ಧಾರವನ್ನು ಸಂಭ್ರಮಿಸಿದ್ದಾರೆ.
2024 ರ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ನಡೆಸಲು ಸಿದ್ದವಾಗಿರುವ ಚಂದ್ರಶೇಖರ್ ರಾವ್ ಮಧ್ಯಾಹ್ನ 1.19 ರ ಶುಭ ಸಮಯದಲ್ಲಿ ಬಿಆರ್‌ಎಸ್ ಪಕ್ಷದ ಹೆಸರನ್ನು ಘೋಷಿಸಿದರು.
ಇದನ್ನೂ ಓದಿ : ದುಬೈನಲ್ಲಿ ಭಾರತೀಯ-ಅರೇಬಿಕ್ ಶೈಲಿಯ ಭವ್ಯ ಹಿಂದೂ ದೇವಾಲಯ ಲೋಕಾರ್ಪಣೆ: ಇಲ್ಲಿದೆ ಚಿತ್ರಗಳು
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಈಗ ಬಿಆರ್‌ಎಸ್ ಆಗಿದೆ ಎಂದು ರಾವ್ ತಮ್ಮ ಪಕ್ಷದ ಸಭೆಯ ನಂತರ ಘೋಷಿಸಿದರು. ಹೈದರಾಬಾದ್ ನಗರದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಬಿ ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು.
ಯಾವುದೇ ಪಕ್ಷವನ್ನು ರಾಷ್ಟ್ರೀಯ ಎಂದು ಗುರುತಿಸಲು ಕೆಲವು ನಿಯಮಗಳನ್ನು ಹೊಂದಿರುವ ಚುನಾವಣಾ ಆಯೋಗಕ್ಕೆ “ಹೆಸರು-ಬದಲಾವಣೆ” ರವಾನೆಯಾಗಿದೆ.
ಹೊಸ ಪಕ್ಷವನ್ನು ರಾಷ್ಟ್ರೀಯ ಘಟಕವೆಂದು ಪರಿಗಣಿಸಲು ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಅಸ್ತಿತ್ವವನ್ನು ಹೊಂದಿರಬೇಕು ಅಥವಾ ಯಾವುದೇ ನಾಲ್ಕು ರಾಜ್ಯಗಳು ಮತ್ತು ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಶೇಕಡಾ ಆರರಷ್ಟು ಮತಗಳನ್ನು ಗೆದ್ದಿರಬೇಕು. ಪಕ್ಷವು ಕನಿಷ್ಠ ಮೂರು ರಾಜ್ಯಗಳಲ್ಲಿ ಶೇಕಡಾ ಎರಡರಷ್ಟು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.ಸದ್ಯಕ್ಕೆ, ತೆಲಂಗಾಣದಲ್ಲಿ ಟಿಆರ್‌ಎಸ್ ಪ್ರಬಲ ಅಸ್ತಿತ್ವವನ್ನು ಹೊಂದಿದ್ದು ರಾಜ್ಯವನ್ನು ಆಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.