ಮಡಿಲಲ್ಲಿದ್ದ ಮಗುವಿಗೆ ಹಾಲುಣಿಸುತ್ತಿರುವಾಗಲೇ 25 ವರ್ಷದ ತಾಯಿ ಸಾವು
Team Udayavani, Jul 25, 2022, 3:38 PM IST
ನಾಗರಕರ್ನೂಲ್ : ಹೃದಯವಿದ್ರಾವಕ ಘಟನೆಯೊಂದರಲ್ಲಿ ಮಡಿಲಲ್ಲಿದ್ದ ಮಗುವಿಗೆ ಹಾಲುಣಿಸುತ್ತಿರುವಾಗಲೇ ತಾಯಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮಾಜಿಪೇಟ್ ಮಂಡಲದ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.
ಕುಟುಂಬಸ್ಥರ ಪ್ರಕಾರ 25 ವರ್ಷದ ಜಯಶ್ರೀ ತನ್ನ ಮೊದಲ ಹೆರಿಗೆಗೆ ತನ್ನ ತಾಯಿಯ ಮನೆಗೆ ಬಂದಿದ್ದರು. 2 ತಿಂಗಳ ಕೆಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಆಕೆಯ ಪತಿ ಪ್ರಶಾಂತ್ ಶನಿವಾರ ತಿರ್ಮಲಾಪುರದಿಂದ ಬಂದು ಆಕೆಯ ಮೈಬಣ್ಣ ಬದಲಾಗಿ ಕಪ್ಪಾಗಿದ್ದರಿಂದ ಮಹಬೂಬನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಹೃದಯ ಕವಾಟದಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದು, ಔಷಧ ಬಳಸಿದರೆ ಗುಣವಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ವೈದ್ಯರು ಬರೆದುಕೊಟ್ಟ ಔಷಧಗಳನ್ನು ಸೇವಿಸಿ ಮತ್ತೆ ನೇರಳಪಲ್ಲಿಗೆ ಮರಳಿದ್ದರು.
ಭಾನುವಾರ ಬೆಳಗ್ಗೆ 5.30ಕ್ಕೆ ಮಗುವಿಗೆ ಹಾಲುಣಿಸುವ ವೇಳೆ ಜಯಶ್ರೀ ಕೊನೆಯುಸಿರೆಳೆದಿದ್ದಾರೆ. ಸ್ವಲ್ಪ ಸಮಯದ ನಂತರ ಅಜ್ಜ ಮತ್ತು ಅಜ್ಜಿ ಚಹಾಕ್ಕೆ ಕರೆದರು. ಆದರೆ ಅವರ ಕೋಣೆಯಿಂದ ಉತ್ತರ ಬರಲಿಲ್ಲ. ಅವರು ಏನಾಯಿತು ಎಂದು ನೋಡಲು ಹೋದಾಗ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.